ನರೇಗಾ ವೈಯಕ್ತಿಕ ಕಾಮಗಾರಿಗಳಿಂದ ಆರ್ಥಿಕವಾಗಿ ಸದೃಢ ವಾಗಿ : ಚಂದ್ರಶೇಖರ ಬಿ ಕಂದಕೂರ

WhatsApp Image 2024-09-18 at 5.34.47 PM
Published on

Gadag :  ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಗ್ರಾಮೀಣ ಜನರಿಗೆ ವರದಾನವಿದ್ದಂತೆ ಅವುಗಳಲ್ಲಿ ಮುಖ್ಯವಾಗಿ ವೈಯಕ್ತಿಕ ಕಾಮಗಾರಿಗಳು ನಿಮ್ಮ ಆರ್ಥಿಕ ಗುಣಮಟ್ಟವನ್ನು ಸುಧಾರಿಸಲು ನೆರವಾಗುತ್ತವೆ ಅಂತಾ ತಾಲೂಕ ಪಂಚಾಯತ ಸಹಾಯಕ ನಿರ್ದೇಶಕ ಚಂದ್ರಶೇಖರ ಬಿ ಕಂದಕೂರ ಹೇಳಿದರು

ರೋಣ ತಾಲೂಕಿನ ಸವಡಿ ಗ್ರಾಮ ಪಂಚಾಯತಿ ಆವರಣದಲ್ಲಿ ವೈಯಕ್ತಿಕ ಕಾಮಗಾರಿ ಅಭಿಯಾನ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಕೂಲಿಕಾರರಿಂದ ನಮೊನೆ 6 ನ್ನ ಪಡೆದು ಮಾತನಾಡಿದ ಅವರು ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ 100 ದಿನಗಳವರೆಗೆ ಪ್ರತಿ ಉದ್ಯೋಗ ಚೀಟಿಗೆ ಕೆಲಸ ನೀಡುತ್ತೇವೆ. ಗಂಡು ಹೆಣ್ಣು ಸಮಾನವಾಗಿ 349 ದಿನವೊಂದಕ್ಕೆ ಯೋಜನೆಯಡಿ ಕೂಲಿ ಮೊತ್ತ ನೀಡಲಾಗುತ್ತದೆ, ಅಂದರೆ ಒಂದು ಕುಟುಂಬಕ್ಕೆ ವಾರ್ಷಿಕವಾಗಿ 34800 ರೂ, ಪಡೆಯುತ್ತಾರೆ ಈ ಹಿನ್ನೆಲೆ ಎಲ್ಲರೂ ಕೆಲಸವನ್ನು ಕೇಳಿ ಪಡೆಯಿರಿ ಎಂದರು. ನಿಮಗೆ ಕೆಲಸ ಬೇಕಾದರೆ ನಮೂನೆ 6 ರಲ್ಲಿ ನಿಮ್ಮ ಹೆಸರು ಹಾಗೂ ಉದ್ಯೋಗ ಚೀಟಿಯ ಸಂಖ್ಯೆಯನ್ನು ನಮೂದಿಸಿ ಗ್ರಾಮ ಪಂಚಾಯತಿ ಗೆ ಸಲ್ಲಿಸಿ ಶೀಘ್ರವಾಗಿ ನಿಮಗೆ ಗ್ರಾಮ ಪಂಚಾಯತಿಯಿಂದ ಉದ್ಯೋಗ ಕೊಡುತ್ತಾರೆ ಎಂದರು..

ಇನ್ನು ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿ ಅಡಿಯಲ್ಲಿ ಹಲವಾರು ಕೆಲಸಗಳು ಸಿಗುತ್ತವೆ ಅದರಲ್ಲಿ ಮುಖ್ಯವಾಗಿ ಬಚ್ಚಲು ಗುಂಡಿ,  ದನದ ಕೊಟ್ಟಿಗೆ, ಕೋಳಿ ಶೆಡ್, ಕೃಷಿ ಹೊಂಡ ಕಾಮಗಾರಿ ಮಾಡಿಕೊಳ್ಳಬಹುದು. ತೋಟಗಾರಿಕೆ ಇಲಾಖೆಯಡಿ ಬೆಳೆಗಳಾದ ತೆಂಗು, ಮಾವು, ದಾಳಿಂಬೆ, ಸೀಬೆ, ಗುಲಾಬಿ, ಮಲ್ಲಿಗೆ, ಬಾಳೆ ಮತ್ತು ಪಪ್ಪಾಯಿ ಸೇರಿದಂತೆ ವಿವಿಧ ಬೆಳೆಗಳಿಗೆ ಆರ್ಥಿಕ ನೆರವು ಪಡೆದು ಬೆಳೆದುಕೊಳ್ಳಬಹುದು ಎಂದು ಹೇಳಿದರು. ಈ ಸಂದರ್ಭದಲ್ಲಿತಾಲೂಕ ಪಂಚಾಯತಿ ಸಿಬ್ಬಂದಿಗಳು, ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಸೇರಿದಂತೆ ಗ್ರಾಮಸ್ಥರು ಕೂಲಿ ಕಾರರು ಹಾಜರಿದ್ದರು..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net