ಚುನಾಯಿತ ಪ್ರತಿನಿಧಿಗಳು ಶಿಕ್ಷಣವನ್ನು ಕಲಿತಾಗ ಮಾತ್ರ ಗ್ರಾಮದ ಅಭಿವೃದ್ಧಿ ಸಾದ್ಯ : ಚಂದ್ರಶೇಖರ ಕಂದಕೂರ

WhatsApp Image 2024-08-29 at 1.48.46 PM
Published on

Gadag: ಚುನಾಯಿತ ಗ್ರಾಮ ಪಂಚಾಯಿತಿ ಗಳ ಅನಕ್ಷರಸ್ಥ ಪ್ರತಿನಿಧಿಗಳನ್ನು ಓದು ,ಬರಹ ಮತ್ತು ಲೆಕ್ಕಾಚಾರಗಳಲ್ಲಿ ಕ್ರಿಯಾತ್ಮಕ ಸಾಕ್ಷರಸ್ಥರನ್ನಾಗಿಸುವ ಉದ್ದೇಶದಿಂದ ಸರ್ಕಾರವು ಜಾರಿಗೆ ತಂದಿರುವ ಸಾಕ್ಷರ ಸನ್ಮಾನ ತರಬೇತಿ ಕಾರ್ಯಾಗಾರದ ಸದುಪಯೋಗವನ್ನು ಚುನಾಯಿತ ಪ್ರತಿನಿಧಿಗಳು ಪಡೆದುಕೊಳ್ಳಬೇಕೆಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ (ನರೇಗಾ) ಚಂದ್ರಶೇಖರ ಬಿ ಕಂದಕೂರ ತಿಳಿಸಿದರು.

ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮೈಸೂರು ವತಿಯಿಂದ ಪಂಚಾಯಿತಿ ಚುನಾಯಿತ ಅನಕ್ಷರಸ್ಥ ಪ್ರತಿನಿಧಿಗಳಿಗೆ ಸಾಕ್ಷರತಾ ಕೌಶಲ್ಯಗಳನ್ನು ನೀಡುವ ಸಾಕ್ಷರ ಸನ್ಮಾನ ತರಬೇತಿದಾರರಿಗೆ ರೋಣ ತಾಲೂಕ ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿಂದು ಹಮ್ಮಿಕೊಂಡಿದ್ದ 3 ದಿನಗಳ ಸಾಕ್ಷರ ಸನ್ಮಾನ ತರಬೇತಿ ಕಾರ್ಯಾಗಾರದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬೋಧಕರು, ಮತ್ತು ಅರಿವು ಕೇಂದ್ರದ ಮೇಲ್ವಿಚಾರಕರು ತರಬೇತಿ ಕಾರ್ಯಾಗಾರದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು, ಚುನಾಯಿತ ಪ್ರತಿನಿಧಿಗಳು ಚನ್ನಾಗಿ ಶಿಕ್ಷಣವನ್ನು ಕಲಿತು ತಮ್ಮ ಗ್ರಾಮದ ಸಭೆಗಳಲ್ಲಿ ಕ್ರಿಯಾತ್ಮಕವಾಗಿ ಭಾಗವಹಿಸಿ ತಮ್ಮ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿರಿ ಅಂದಾಗ ಮಾತ್ರ ಈ ಯೋಜನೆ ಸ್ವಾರ್ಥಕತೆ ಆಗುತ್ತದೆ
ಎಂದರು..

ಈ ಕಾರ್ಯಕ್ರಮ ದಲ್ಲಿ ತಾಲೂಕ ಪಂಚಾಯತಿ ವ್ಯವಸ್ಥಾಪಕರಾದ ದೇವರಾಜ ಸಜ್ಜನಶೆಟ್ಟರ ಮಾತನಾಡಿ ಆರ್ಥಿಕ ಸಾಮಾಜಿಕ ಅಭಿವೃದ್ಧಿಗೆ ಸಾಕ್ಷರತೆ ಮುಖ್ಯ. ಮೌಢ್ಯರಹಿತ ಸಮಾನತೆಯ ಸಮಾಜ ನಿರ್ಮಾಣಕ್ಕೆ ಎಲ್ಲರನ್ನೂ ಅಕ್ಷರಸ್ಥರನ್ನಾಗಿಸುವಲ್ಲಿ ಸರ್ಕಾರ ಸಾಕಷ್ಟು  ಶ್ರಮಿಸುತ್ತಿದೆ. ಅದಕ್ಕೆ ಸಂಘ ಸಂಸ್ಥೆಗಳು ಸೇರಿದಂತೆ ಎಲ್ಲರೂ ಸಹಕರಿಸಬೇಕು ಎಂದರು. ಮಹಿಳೆಯರು ಸಾಕ್ಷರರಾದರೆ ತನ್ನ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬಹುದು ಎಂದರು..

ಕಾರ್ಯಕ್ರಮದಲ್ಲಿ ವಿಷಯ ನಿರ್ವಾಹಕರಾದ ಎಚ್ ಕೆ ದೇಸಾಯಿ, ತಜ್ಞ ಸಂಪನ್ಮೂಲ ವ್ಯೆಕ್ತಿಗಳಾದ ಬಿ ಆರ್ ಪಟ್ಟಣಶೆಟ್ಟರ ಹಾಗೂ ಆರ್ ಬಿ ಸೋಮನಕಟ್ಟಿ, ಎ.ಎನ್.ಎಸ್.ಎಸ್.ಐ ಆರ್.ಡಿ ಸಂಸ್ಥೆಯ ತಾಲೂಕ ಸಂಯೋಜಕರಾದ ಶರಣಪ್ಪ ಕೊತಬಾಳ ಸ್ವಾಗತಿಸಿದರು ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net