ಗಾಂಜಾ ಮಾರಾಟ: ಆರೋಪಿ ಬಂಧನ

27 NRD-2
Published on

ಗಾಂಜಾ ಮಾರಾಟ: ಆರೋಪಿ ಬಂಧನ

ನರಗುಂದ (ಗದಗ):

ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ, 131 ಗ್ರಾಂ ಗಾಂಜಾ ಹಾಗೂ ಬೈಕ್ ವಶಪಡಿಸಿಕೊಂಡ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಹದಲಿ ಕ್ರಾಸ್ ಬಳಿ ಅ.25 ಶುಕ್ರವಾರ ನಡೆದಿದೆ.

ನರಗುಂದ ಅಬಕಾರಿ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಹದಲಿ ಕ್ರಾಸ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ದಾವಲಸಾಬ್ ನರಗುಂದ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ಒಣ ಗಾಂಜಾವನ್ನು ಸಣ್ಣ ಸಣ್ಣ ಪ್ಯಾಕೇಟ್ ಮಾಡಿ ಮಾರುತ್ತಿದ್ದ. ಅಬಕಾರಿ ಡಿಸಿ ಲಕ್ಷ್ನಿ ನಾಯಕ ಮಾರ್ಗದರ್ಶನದಲ್ಲಿ ಖಚಿತ ಮಾಹಿತಿ ಮೇರೆಗೆ ಅಬಕಾರಿ ಸಿಪಿಐ ಬಸವರಾಜ್ ಜಾಮಗೊಂಡ ಮುಂದಾಳತ್ವ ದಾಳಿ ನಡೆದಿದೆ. ಈಗಾಗಲೇ ಆರೋಪಿ ಮೇಲೆ ಮೂರು ಪ್ರಕರಣ ದಾಖಲಾವೆ ಎಂದು ತಿಳಿದು ಬಂದಿದೆ. ನರಗುಂದ ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net