ಪಿಸಿ ಗದ್ದಿಗೌಡರ ಪರ ಸಿಸಿ ಪಾಟೀಲ ಮತಯಾಚನೆ

14GDG02
ನಗರಗುಂದ ಮತಕ್ಷೇತ್ರದಲ್ಲಿ ಪಿ.ಸಿ. ಗದ್ದಿಗೌಡರ ಪರವಾಗಿ ಶಾಸಕ ಸಿ.ಸಿ. ಪಾಟೀಲ ಮತಯಾಚನೆ ಮಾಡಿದರು.
Published on

ಗದಗ: ಬಾಗಲಕೋಟೆ ಲೋಕಸಭಾ ಕ್ಷೇತ್ರದ ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯಥಿರ್ ಪಿ.ಸಿ. ಗದ್ದಿಗೌಡರ ಪರವಾಗಿ ಶಾಸಕ ಸಿ.ಸಿ. ಪಾಟೀಲ ಮತ ಯಾಚನೆ ಮಾಡಿದರು. ಗುಳಗುಂದಿ, ಕರಕಿಕಟ್ಟಿ, ಬೋಪಾಲಾಪೂರ, ಖಾನಾಪೂರ ಗ್ರಾಮಗಳಲ್ಲಿ ಮತ ಯಾಚನೆ ಮಾಡಿದ ಸಿ.ಸಿ. ಪಾಟೀಲ ಅವರು, ಕಾಂಗ್ರೆಸ್​ ನೆಲೆಕಾಣದ ಪವಾಗಿದೆ. ಜನರ ಬಳಿ ಬರಲು ಕಾಂಗ್ರೆಸ್ಸಿಗೆ ದಾರಿಯಿಲ್ಲ. ಗ್ಯಾರಂಟಿ ಮೂಲಕ ಜನರನ್ನು ಮೋಸಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕೋವಿಡ್​ ಸಂದರ್ಭದಲ್ಲಿ 130 ಕೋಟಿಗೂ ಅಧಿಕ ಜನರಿಗೆ ಲಸಿಕೆ ನೀಡಿ ಜೀವ ಉಳಿಸಿದರು. ಮತದಾರರು ನರೇಂದ್ರ ಮೋದಿ ಅವರನ್ನು ಮತ್ತೇ ಪ್ರಧಾನ ಮಂತ್ರಿಯನ್ನಾಗಿ ಮಾಡುವ ಮೂಲಕ ಕೃತತೆ ಸಲ್ಲಿಸಬೇಕು. ಹಲವರಿಗೆ ಗೃಹಲಕ್ಷಿ$್ಮ ಹಣ ಇನ್ನೂ ಹಲವು ದೊರೆತಿಲ್ಲ. ಕಾಂಗ್ರೆಸ್​ಗೆ ಗ್ಯಾರಂಟಿಗಳಿಗೆ ಜನರು ಮರಳಾಗಬಾರದು. ಅಭಿವೃದ್ಧಿಯ ಬಗ್ಗೆ ಕಾಳಜಿ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವನ್ನು ನೋಡಿ ಮತ ನೀಡಬೇಕು ಎಂದು ಸಿ.ಸಿ. ಪಾಟೀಲ ಹೇಳಿದರು.
ಬಿ. ಬಿ. ಐನಾೂ ಶಿವಕುಮಾರ ನೀಲಗುಂದ, ಪ್ರಕಾಶ ತಿರಕನಗೌಡ್ರ, ಮುತ್ತಣ್ಣ ಜಂಗಣ್ಣವರ, ಅಶೋಕ ಹೆಬ್ಬಳ್ಳಿ, ಬಸವಂತಪ್ಪ ತಳವಾರ, ಸುರೇಶ ಗುರಮ್ಮನವರ, ಎ.ಬಿ. ಮಂಡಸೊಪ್ಪಿ, ಬಸವರಾಜ ಕಾತರಕಿ, ವೆಂಕಟೇಶ ಕುಲಕಣಿರ್, ಶಿವರೆಡ್ಡಿ ರಿತ್ತಿ, ವಾಸರೆಡ್ಡಿ ರಿತ್ತಿ, ಆನಂದ ಮೆಣಸಕಾಯಿ, ವೀರನಗೌಡ ಗೌಡರ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net