

ವಿಜಯವಾಣಿ ಸುದ್ದಿಜಾಲ ಗದಗ
ಸಂಪ್ರದಾಯಿಕ ನಂದಿ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ರೈತರನ್ನು ಪ್ರೋತ್ಸಾಹಿಸುವುದಕ್ಕಾಗಿ ಜ.27 ರಂದು ನಂದಿಭೂಷಿತ ಕಪ್ಪತ್ತ ಜ್ಯೋತಿಗೆ ಚೆನ್ನಮ್ಮನ ಕಿತ್ತೂರಿನಲ್ಲಿ ಚಾಲನೆ ನೀಡಲಾಗುವುದು ಎಂದು ನಂದಿವೇರಿ ಶ್ರೀಗಳು ಹೇಳಿದರು.
ನಗರದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ರಾಸಾಯನಿಕ ಕೃಷಿಯೆಡೆಗೆ ರೈತರು ಆಕಷಿರ್ತರಾದ ಪರಿಣಾಮ ಭೂಮಿ ತನ್ನ ಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಆಹಾರ ಉತ್ಪಾದನೆಯಲ್ಲಿ ಇಳುವರಿ ಹಾಗೂ ಗುಣಮಟ್ಟದಲ್ಲಿ ಕುಸಿತವಾಗಿದ್ದರಿಂದ ರೈತರು ಸಂಕಷ್ಟಕ್ಕೆ ಇಡಾಗಿದ್ದಾರೆ. ಹಾಗಾಗಿ ದೇಶದ ಮೂಲ ಕೃಷಿ ಪದ್ಧತಿ "ನಂದಿ ಕೃಷಿ'ಗೆ ಪುನರುತ್ಥಾನದ ಅವಶ್ಯಕತೆ ಇದೆ. ಈ ಹಿನ್ನೆಲೆ ರೈತರು ಪುನಃ ನಂದಿ ಕೃಷಿಯಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಲು "ನಂದಿಭೂಷಿತ ಕಪ್ಪತ್ತ ಜ್ಯೋತಿ' ಯಾತ್ರೆಗೆ ಜ.27ರಂದು ಚಾಲನೆ ನೀಡಲಾಗುತ್ತಿದೆ.
ಗಣೇಶ ಸಿಂಗ್ ಬ್ಯಾಳಿ ಮಾತನಾಡಿ, ಕಾರ್ಯಕ್ರಮದ ಅಂಗವಾಗಿ ಜ. 26 ರಂದು ಸಂಜೆ 4ಕ್ಕೆ ಕಿತ್ತೂರ ಸಮೀಪದ ನಿಚ್ಚಣಕಿ ಗ್ರಾಮದಲ್ಲಿ ಕಾರ್ಯಕ್ರಮ, ಜ.27 ರಂದು 9 ಗಂಟೆಗೆ ನಂದಿ ಪೂಜೆ ಹಾಗೂ ದೀಪ ಪ್ರಜ್ವಲನ ನಂತರ 9.15ಕ್ಕೆ ನಂದಿ ಜ್ಯೋತಿ ಯಾತ್ರೆಯು ಕಿತ್ತೂರು ಚನ್ನಮ್ಮ ಕೋಟೆ ಮುಂಭಾಗದಿಂದ ಚನ್ನಮ್ಮನ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಆರಂಭವಾಗಲಿದೆ. ಜ್ಯೋತಿ ಯಾತ್ರೆಯು 11 ಗಂಟೆಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ತಲುಪಿ, ಅಲ್ಲಿ ನಂದಿ ಕೊಟ್ಟಿಗೆಯಲ್ಲಿ ನಂದಿ ಪೂಜೆ ನೆರವೇರಿಸಿ 11.30 ಗಂಟೆಗೆ ನಂತರ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂದಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದೆ. ಸಂಜೆ 6 ರಿಂದ 8 ರ ವರೆಗೆ ನವನಗರದ ಈಶ್ವರ ದೇವಸ್ಥಾನದಲ್ಲಿ "ನಂದಿ ಕೃಷಿ ಸಂಕಲ್ಪ' ವೇದಿಕೆ ಕಾರ್ಯಕ್ರಮ ಜರುಗಲಿದೆ. ಜ. 28ರಂದು ನವನಗರದಿಂದ ಜ್ಯೋತಿ ಯಾತ್ರೆ ಹೊರಟು ಹುಬ್ಬಳ್ಳಿಯ ಲಿಂಗರಾಜ ನಗರದ ಸಮುದಾಯ ಭವನದಲ್ಲಿ ಕಾರ್ಯಕ್ರಮ ನಂತರ 11 ಗಂಟೆಗೆ ಗದಗ ನಗರದ ಡಂಬಳ ನಾಕಾದ ಹತ್ತಿರ ಇರುವ ನಂದಿವೇರಿ ಸಂಸ್ಥಾನ ಮಠದಲ್ಲಿ ಕಾರ್ಯಕ್ರಮ ಜರುಗಲಿದೆ. ತದ ನಂತರ ಡೋಣಿ ಗ್ರಾಮಕ್ಕೆ ಯಾತ್ರೆ ಹೊರಡುವುದು. ನಂತರ ಕಪ್ಪತ್ತಗುಡ್ಡದಲ್ಲಿರುವ ನಂದಿವೇರಿ ಸಂಸ್ಥಾನಮಠಕ್ಕೆ ಯಾತ್ರೆ ತಲುಪಲಿದೆ. ಕಪ್ಪತ್ತಗುಡ್ಡದಲ್ಲಿರುವ ಬಂಗಾರ ಕೋಳದ ತೀಥೋರ್ದ್ಭವದ ಪುಣ್ಯ ತೀರ್ಥ ಪ್ರೋಣೆ ನಂತರ 4 ಗಂಟೆಗೆ ಸಚಿವ ಎಚ್.ಕೆ.ಪಾಟೀಲರ ಸಮ್ಮುಖದಲ್ಲಿ ಶಿವಕುಮಾರ ಶ್ರೀಗಳು ಆಶೀರ್ವಚನದೊಂದಿಗೆ ನಂದಿಭೂಷಿತ ಕಪ್ಪತ್ತಜ್ಯೋತಿ ಯಾತ್ರೆ ರ್ಪೂಣಗೊಳ್ಳುವುದು ಎಂದು ತಿಳಿಸಿದರು.
ಬಾಲಚಂದ್ರ ಜಾಬಶೆಟ್ಟಿ, ರುದ್ರಣ್ಣ ಗುಳಗುಳಿ, ದೇವರಡ್ಡಿ ಅಗಸನಕೊಪ್ಪ ಹಲವರು ಇದ್ದರು.