

ಒತ್ತಡ ನಿಗ್ರಹಕ್ಕೆ ಆಧ್ಯಾತ್ಮ-ಧ್ಯಾನ ಅಗತ್ಯ : ಅಡ್ನೂರ ಶ್ರೀಗಳು
ಗದಗ: ಆಧುನಿಕ ಇಂದಿನ ದಿನಗಳಲ್ಲಿ ಎಲ್ಲರೂ ಧಾವಂತ, ಒತ್ತಡದ ಬದುಕು ನಡೆಸುವಂತಾಗಿದೆ. ಆಧ್ಯಾತ್ಮ, ಯೋಗ, ಧ್ಯಾನಗಳಿಂದ ಒತ್ತಡಗಳನ್ನು ನಿಗ್ರಹಿಸಿಕೊಂಡು ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಿದೆ ಎಂದು ಗದಗ-ಅಡ್ನೂರ ದಾಸೋಹ ಮಠದ ಪೂಜ್ಯ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಅವರು ಶುಕ್ರವಾರ ಗದುಗಿನ ನಂದೀಶ್ವರ ನಗರದ ಇಂಡೋರ್ ಸ್ಟೇಡಿಯಂ ಬಡಾವಣೆಯ ನಾಗರಿಕರ ವಿವಿದೋದ್ದೇಶಗಳ ಸಂಘ (ರಿ) ಎರ್ಪಡಿಸಿದ್ದ ಪಂಚವಟಿ ನಾಗರಕಟ್ಟೆಯ ನಾಗದೇವತಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಎಲ್ಲರೂ ಧರ್ಮದ ಹಾದಿಯಲ್ಲಿ ಮುನ್ನಡೆಯಬೇಕು, ಮಕ್ಕಳಿಗೆ ಒಳ್ಳೆ ಶಿಕ್ಷಣ, ಸಂಸ್ಕಾರ, ಸಂಸ್ಕೃತಿಯನ್ನು ರೂಡಿಸಬೇಕು ವಿಶೇಷವಾಗಿ ಆಧ್ಯಾತ್ಮದ ಬಗ್ಗೆ ಒಲವು ಮೂಡುವಂತೆ ಮಾಡಬೇಕು. ಆಧ್ಯಾತ್ಮದ ತಳಹದಿಯ ಬದುಕು ನೆಮ್ಮದಿ ನೀಡಬಲ್ಲದ ಅಂತಹ ಪ್ರಯತ್ನ ನಿಮ್ಮೆಲ್ಲರಿಂದ ಆರಂಭಗೊಳ್ಳಲಿ ಎಂದರು.
ನಾಗರಿಕರ ವಿವಿದೋದ್ದೇಶಗಳ ಸಂಘ ಅಧ್ಯಕ್ಷರಾದ ವಿಶ್ವನಾಥ ಗದ್ದಿಕೇರಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವ ಅಧ್ಯಕ್ಷ ಜಿ.ಎಸ್.ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ರವೀಂದ್ರ ನಂದಿ ನಿರೂಪಿಸಿದರು, ಪ್ರಧಾನ ಕಾರ್ಯದರ್ಶಿ ಬಸವರಾಜ ಹೆಚ್.ಕೊರ್ಲಹಳ್ಳಿ ಸ್ವಾಗತಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಶಿವಾನಂದ ಪಲ್ಲೇದ, ಮಹೇಶ್ ರಂಗಣ್ಣನವರ, ಜಗದೀಶ್ವರಯ್ಯ ಹಿರೇಮಠ ಡಾ.ಡಿ.ಬಿ.ಚನ್ನಶೆಟ್ರ ಹಾಗೂ ರಾಚಯ್ಯ ಕರವೀರಮಠ, ಎಸ್.ವೈ.ಯಾಳಗಿಶೆಟ್ರು, ಬಸವರಾಜ ಬೇಲೇರಿ, ಮಂಜುನಾಥ ಗಜಕೊಶ, ಶ್ರೀನಿವಾಸ, ಬಸವಂತಪ್ಪ ಕವಲೂರ, ಹಬೀಬ, ಮಂಜುನಾಥ ಚಿಕ್ಕನಗೌಡ್ರು, ಸಿದ್ದರಾಮೇಶ ಹಿರೇಮಠ, ಅನಿಲ ಗೌಳಿ, ಸುಭಾಸ ಗಡಾದ, ಶಿವಕುಮಾರ ರಾಠೋಡ, ಹೊಳೆಯಪ್ಪಗೌಡ ಪಾಟೀಲ, ನಿಂಗರಾಜ ಗೊಲ್ಲರ, ಸಿದ್ದರಾಮೇಶ ಹಿರೇಮಠ, ನೀಲಕಂಠಯ್ಯ ಕಳ್ಳಿಮಠ, ವಿ.ಎಸ್.ಶಿವಕಾಳಿಮಠ ಸೇರಿದಂತೆ ನಗರದ ನಾಗರಿಕರು, ಮಹಿಳೆಯರು ಹಾಗೂ ಸಂಘದ ಸರ್ವ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.