ಗದಗ ನಗರಸಭೆ ಟೆಂಡರ್​ ಪ್ರಕ್ರಿಯೆಯಲ್ಲಿ ಅವ್ಯವಹಾರ ಆರೋಪ

IMG-20230606-WA0008
Published on

ಗದಗ:
ನಗರಸಭೆಯ ಪೌರಕಾಮಿರ್ಕರಿಗೆ ಬೆಳಗಿನ ಉಪಹಾರ ವಿತರಿಸುವ ಟೆಂಡರ್​ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದ್ದು, ಅಧಿಕ ಮೊತ್ತ ನಮುದಿಸಿದ ಗುತ್ತಿಗೆದಾರರಿಗೆ ಟೆಂಡರ್​ ನೀಡಲಾಗಿದೆ ಎಂದು ಜಾಗತಿಕ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋ-ಧಿ ಸಂಟನೆಯ ಕಾರ್ಯದಶಿರ್ ಶಾಂತಯ್ಯ ಮುತ್ತಿನಪೆಂಡಿಮಠ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಪೌರ ಕಾಮಿರ್ಕರಿಗೆ ಉಪಹಾರ ವಿತರಿಸಲು ಟೆಂಡರ್​ ಕರೆಯಲಾಗಿತ್ತು. ಟೆಂಡರ್​ ಪ್ರಕ್ರಿಯೆಯಲ್ಲಿ ಎರಡು ಸಂಸ್ಥೆಯವರು ಭಾಗವಹಿಸಿದ್ದರು. ಒಂದು ಸಂಸ್ಥೆಯವರು ಪ್ರತಿ ದಿನ ಒಬ್ಬ ಪೌರ ಕಾಮಿರ್ಕನಿಗೆ 34 ರೂ. ಗಳಂತೆ ಉಪಹಾರ ವಿತರಿಸುವುದಾಗಿ, ಮತ್ತೊಬ್ಬರು 35 ರೂ. ನಂತೆ ವಿತರಿಸುವುದಾಗಿ ಟೆಂಡರ್​ ಪ್ರಕ್ರಿಯೆಯಲ್ಲಿ ದರಪಟ್ಟಿಯನ್ನು ಲಗತ್ತಿಸಿದ್ದರು. ಈ ಪ್ರಕ್ರಿಯೆಯಲ್ಲಿ ಅತಿ ಕಡಿಮೆ ದರಪಟ್ಟಿ ಲಗತ್ತಿಸಿದ ಸಂಸ್ಥೆಗೆ ತಾಂತ್ರಿಕ ನೆಪ ಹೇಳಿ ಅವರನ್ನು ಟೆಂಡರ ಪ್ರಕ್ರಿಯೆಯಲ್ಲಿ ತಿರಸ್ಕರಿಸಿದ್ದಾರೆ. ಹೆಚ್ಚಿನ ದರ ನಮೂದಿಸಿದ ಸಂಸ್ಥೆಗೆ ಪೌರಕಾಮಿರ್ಕರಿಗೆ ಉಪಹಾರ ವಿತರಿಸುವ ಟೆಂಡರನ್ನು ನೀಡಿದ್ದಾರೆ. ಈ ಟೆಂಡರ್​ ಪ್ರಕ್ರಿಯೆಯು ಗದಗ&ಬೆಟಗೇರಿ ನಗರಸಭೆಯ ಪೌರಾಯುಕ್ತರ ಗಮನಕ್ಕೆ ತರದೆ ಪೌರಾಯುಕ್ತರ ಕೆಳಹಂತದ ಅಧಿಕಾರಿಗಳು ಹಾಗೂ ಕೆಲವು ಸದಸ್ಯರು ಒಳಸಂಚಿನಿಂದ ದರಪಟ್ಟಿ 35 ರೂ. ಗಳಂತೆ ಪ್ರಕ್ರಿಯೆಯನ್ನು ಮುಗಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಮೇಲ್ನೋಟಕ್ಕೆ ಸ್ಪಷ್ಟವಾಗಿ ಭ್ರಷ್ಟಾಚಾರ ಕಂಡುಬರುತ್ತಿದೆ. ಪವರಾಯುಕ್ತರು, ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಈ ಟೆಂಡರ್​ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು. ಇಲ್ಲವಾದರೆ ಕಾನೂನು ಹೋರಾಟ ಮತ್ತು ಲೋಕಾಯುಕ್ತರಿಗೆ ದೂರನ್ನು ನೀಡುವುದಾಗಿ ಮುತ್ತಿನಪೆಂಡಿಮಠ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net