ನಗರಸಭೆ ಸದಸ್ಯನ ಕೂಡಿ ಹಾಕಿ ಆಕ್ರೋಶ

27GDG04
ಗದಗ ವಾರ್ಡ್​ ನಂ. 3 ರ ಸಮಸ್ಯೆ ಆಲಿಸದ ಕಾರಣ ನಗರಸಭೆ ಸದಸ್ಯ ಮಾಧುಸಾ ಮೇರವಾಡೆ ಸ್ಥಳಿಯ ಜನರು ಈಶ್ವರ ಸೇವಾ ಟ್ರಸ್ಟ್​ ಕಮೀಟಿ ಕಛೇರಿಯಲ್ಲಿ ಕೂಡಿ ಹಾಕಿದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ವಾರ್ಡ್​ ಸಮಸ್ಯೆ ಪರಿಹರಿಸಲು ನಿರ್ಲಕ್ಷಿಸಿದ ನಗರದ 3ನೇ ವಾರ್ಡ್​ ಸದಸ್ಯ ಮಾಧುಸಾ ಮೇರವಾಡೆ ಅವರನ್ನು ವಾರ್ಡ್​ ಮಹಿಳಾ ಮತದಾರರು ಒಂದು ಗಂಟೆಗೂ ಅಧಿಕ ಕಾಲ ಕೂಡಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಗುರುವಾರ ಗದಗಿನ ಬಣ್ಣದ ನಗರದಲ್ಲಿ ನಡೆದಿದೆ.
ಮೂಲಭೂತ ಸಮಸ್ಯೆಗಳಿಂದ ವಾರ್ಡ್​ ನಂ3ರ ಬಣ್ಣದ ನಗರವು ವಂಚಿತವಾಗಿದೆ. ಕುಡಿಯುವ ನೀರು ಪೂರೈಕೆ ಸಮರ್ಪಕವಾಗಿಲ್ಲ. ಮಳೆಯಿಂದ ರಸ್ತೆಗಳು ಹದಗೆಟ್ಟಿವೆ. ಬೀದಿ ದೀಪಗಳು ಇಲ್ಲದೇ ಜನರು ಸಂಚರಿಸಲು ಸಮಸ್ಯೆ ಆಗುತ್ತಿದೆ ಎಂದು ಸ್ಥಳಿಯರು ಹಲವು ಬಾರಿ ಸ್ಥಳಿಯ ನಗರಸಭೆ ಸದಸ್ಯ ಮಾಧುಸಾ ಮೇರವಾಡೆಯ ಗಮನಕ್ಕೆ ತಂದಿದ್ದರು. ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದರು. ಮಾಧುಸಾ ಅವರು ಜನರ ಮನವಿಗೆ ಸೂಕ್ತವಾಗಿ ಸ್ಪಂಧಿಸದೇ ಇರುವುದರಿಂದ ಆಕ್ರೋಧ ಭರಿತ ಜನರು ಗುರುವಾರ ನಗರದ ಈಶ್ವರ ಸೇವಾ ಟ್ರಸ್ಟ್​ ಕಮೀಟಿ ಕಛೇರಿಯಲ್ಲಿ ಕೂಡಿಹಾಕಿದರು. ಇದರಿಂದ ವಿಚಲಿತಗೊಂಡ ಸದಸ್ಯ ಮಾಧುಸಾ ಅವರು ವಿಷಯ ತಿಳಿಸಲು ನಗರಸಭೆ ಆಯುಕ್ತರಿಗೆ ಕರೆ ಮಾಡಿದರು. ಆಯುಕ್ತರು ಕರೆ ಸ್ವೀಕರಿಸಿಲ್ಲ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಧುಸಾ ಅವರನ್ನು ಬಿಡುಗಡೆಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net