ಗದಗ ನಗರಸಭೆಯಲ್ಲಿ ಸಿಸಿ ಇಲ್ಲದ ನಿವೇಶನಕ್ಕೂ ಫಾರ್ಮ ನಂ3 ಅಸ್ತು, ನಗರಸಭೆಗೆ ಕೋಟ್ಯಂತರ ರೂ. ನಷ್ಟ

scan0002
Published on

ಆರೋಪಿತರ ಮೇಲೆ ಜಾರಿಗೊಳ್ಳದ ಕ್ರಮ

ಶಿವಾನಂದ ಹಿರೇಮಠ ಗದಗ
ಗದಗ ಬೆಟಗೇರಿ ನಗರಸಭೆಯಲ್ಲಿ ಅಭಿವೃದ್ಧಿ ಕಾಣದ ನಿವೇಶನಗಳಿಗೂ ಫಾರ್ಮ ನಂ 3 (ಹಕ್ಕು ಬದಲಾವಣೆ ಪತ್ರ/ಉತಾರ) ವಿತರಣೆ ಮಾಡಿದ ಬಹುದೊಡ್ಡ ಭ್ರಷ್ಟಾಚಾರ ಬಯಲಾಗಿ ಸರಿ ಸುಮಾರು 5 ತಿಂಗಳು ಕಳೆದಿದೆ. ಆದರೆ ಈವರೆಗೆ ಫಾರ್ಮ ನಂ 3 ರದ್ದುಗೊಳ್ಳದಿರುವ ಕಾರಣ ನಗರಸಭೆಯಲ್ಲಿ ಮತ್ತೊಂದು ಬಹುಕೋಟಿ ಮೌಲ್ಯದದ ಭ್ರಷ್ಟಾಚಾರದ ವಾಸನೆ ಸುಳಿದಾಡುತ್ತಿದೆ.
ಕೋಟಿಗೂ ಅಧಿಕ ಮೊತ್ತದ ಯುಜಿಡಿ ನಕಲಿ ಠರಾವು, ಕೋಟಿಗೂ ಅಧಿಕ ಮೊತ್ತದ ಬೀದಿದೀಪ ಟೆಂಡರ್​ ಅಕ್ರಮಕ್ಕೆ ಕುಖ್ಯಾತಿ ಪಡೆದ ನಗರಸಭೆಯಲ್ಲಿ ಅಭಿವೃದ್ಧಿಯಾಗದ ಲೇಔಟ್​ಗಳ ನಿವೇಶನಗಳಿಗೆ ಾರ್ಮ ನಂ.3 ವಿತರಣೆ ಎಗ್ಗಿಲ್ಲದೆ ಸಾಗಿದೆ. ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರ ನೀಡುವ ನಿರಪೇಾ ಪತ್ರ (ಸಿಸಿ) ಇಲ್ಲದಿದ್ದರೂ ನಗರಸಭೆಯಲ್ಲಿ ಉತಾರ ನೀಡಲಾಗಿದೆ. ಹೀಗೆ ಸಿಸಿ ಇಲ್ಲದೆ 1063 ನಿವೇಶನಗಳಿಗೆ ಗದಗ ಬೆಟಗೇರಿ ನಗರಸಭೆ 2023& 2024ನೇ ಸಾಲಿನಲ್ಲಿ ಫಾರ್ಮ 3 ವಿತರಣೆ ಮಾಡಿತ್ತು. ಈ ಅಕ್ರಮ ಬಯಲಾಗಿ 5 ತಿಂಗಳು ಕಳೆದಿದೆ. ಈ ಅವಧಿಯಲ್ಲಿ ಒಂದು ಬಾರಿ ನಗರಸಭೆ ಸಾಮಾನ್ಯ ಸಭೆಯೂ ನಡೆದಿದೆ. ಆದರೆ ಈವರೆಗೂ 1063 ಉತಾರ ರದ್ದುಗೊಳಿಸುವ ಪ್ರಕ್ರಿಯೆ ಮಾತ್ರ ಆರಂಭಗೊಂಡಿಲ್ಲ.

ಏನಿದು ಭ್ರಷ್ಟಾಚಾರ?
ನಗರಸಭೆಯಲ್ಲಿ ಫಾರ್ಮ 3 ವಿತರಣೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ನಗರಸಭೆ ಸದಸ್ಯ ಬರಕತಅಲಿ ಮುಲ್ಲಾ, ಲಕ್ಷಿ$್ಮ ಅನಿಲಕುಮಾರ ಸಿದ್ದಮ್ಮನಹಳ್ಳಿ ಕಳೆದ ಜುಲೈ ತಿಂಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಲಿಖತ ದೂರು ನೀಡಿದ್ದರು. ಜಿಲ್ಲಾಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ವಿಚಾರಣೆ ನಡೆಸಿದ ಈಗಿನ ಅಪರ ಜಿಲ್ಲಾಧಿಕಾರಿ ಮತ್ತು ಅಂದಿನ ಉಪವಿಭಾಗಾಧಿಕಾರಿ ಅನ್ನರ್ಪೂಣ ಮುದುಕಮ್ಮನವರ, 2023 ಏಪ್ರಿಲ್​ 1ರಿಂದ 2023 ಜಿಲೈ 13ರ ವರೆಗಿನ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಈ ಅವಧಿಯಲ್ಲಿ ಒಟ್ಟಾರೆ 3148 ಫಾರ್ಮ ನಂ 3 ವಿತರಣೆಯಾಗಿದ್ದು, ಅದರಲ್ಲಿ ಎಸ್​.ಎಂ. ಕೃಷ್ಣಾ ನಗರದ ಸಮೀಪದ ರಿ.ಸ.ನಂ.862 (22.ಎಕರೆ), 863(3.16 ಎಕರೆ), 864 (20.11 ಎಕರೆ) ಸಹಿತ ಒಟ್ಟು 66.01 ಎಕರೆ ಲೇಔಟ್​ನ 979 ನಿವೇಶನ ಹಾಗೂ ಇತರೆ ಲೇಔಟ್​ನ 84 ನಿವೇಶನಗಳಿಗೆ ಸಿಸಿ ಇಲ್ಲದೇ ಫಾರ್ಮ ನಂ 3 ಕೊಟ್ಟಿರುವುದು ಗಮನಕ್ಕೆ ಬಂದಿದೆ. ಆ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದರು.
ಉಪವಿಭಾಗಾಧಿಕಾರಿ ವರದಿಯಲ್ಲಿ ಾರ್ಮ ನಂ 3 ವಿತರಣೆಯಲ್ಲಿ ಕಾನೂನು ಬಾಹಿರ ಕಾರ್ಯ ಜರುಗಿದ್ದು ಸ್ಪಷ್ಟವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್​. ಅವರು ಮಹೇಶ ಹಡಪದ ಎನ್ನುವ ನಗರಸಭೆ ಕಂದಾಯ ಇಲಾಖೆ ಅಧಿಕಾರಿಯನ್ನು ಅಮಾನತು ಸಹ ಮಾಡಿದ್ದರು. ಈ ಅಕ್ರಮ ಹಿಂದೆ ಹಲವರು ಕೈವಾಡವಿದ್ದು, ಕೇವಲ ಓರ್ವರನ್ನು ಮಾತ್ರ ಅಮಾನತು ಮಾಡಿದ್ದಾರೆ. ಈವರೆಗೆ 1063 ನಿವೇಶನಗಳಿಗೆ ನೀಡಿದ ಫಾರ್ಮ ನಂ 3 ಮಾತ್ರ ರದ್ದು ಪ್ರಕ್ರಿಯೆ ಮಾತ್ರ ಆರಂಭಗೊಂಡಿಲ್ಲ.

  • ಸಿಸಿ ಇಲ್ಲದೇ ನೀಡಿರುವ 1063 ಫಾರ್ಮ ನಂ 3 ರದ್ದುಗೊಳಿಸಲು ಕ್ರಮ ಕೈಗೊಳ್ಳಲು ಹಾಗೂ ಈ ಬಗ್ಗೆ ವಿಶೇಷ ಸಾಮಾನ್ಯ ಸಭೆ ನಡೆಸಿ ಠರಾವು ಕೈಗೊಳ್ಳುವುದಾಗಿ ಗದಗ ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ ನೀಡಿದ್ದ ಭರವಸೆ ಹುಸಿಯಾಗಿದೆ. ಈ 5 ತಿಂಗಳ ಅವಧಿಯಲ್ಲಿ ನಗರಸಭೆ ಸಾಮಾನ್ಯ ಸಭೆ ನಡೆದರೂ ಫಾರ್ಮ ನಂ 3 ರದ್ಧತಿ ಕುರಿತು ಯಾವುದೇ ಚರ್ಚೆ, ವಿಷಯ ಪ್ರಸ್ತಾಪವಾಗಿಲ್ಲ

ಅನುಮಾನ ತಂದ ಕಾಂಗ್ರೆಸ್​ ನಡೆ:
ಅಕ್ರಮದ ಕುರಿತು ಲಿಖಿತ ದೂರು ನೀಡಿ ತನಿಖೆಗೆ ಒತ್ತಾಯಿಸಿದ್ದ ಕಾಂಗ್ರೆಸ್​ ಸದಸ್ಯರು ಸಹ ಈಗ ಮೌನಕ್ಕೆ ಜಾರಿದ್ದಾರೆ. ಅಕ್ರಮ ಮಾರ್ಗದ ಮೂಲಕ ವಿತರಣೆಯಾದ ಫಾರ್ಮ ನಂ 3 ರದ್ದುಗೊಳಿಸುವ ಭರವಸೆ ನೀಡಿದ್ದ ಆಡಳಿತ ಪಕ್ಷದ ಸದಸ್ಯರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಅಕ್ರಮದ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸಿದ ಅಂದಿನ ಉಪವಿಭಾಗಾಧಿಕಾರಿ ಮತ್ತು ಈಗಿನ ಅಪರ ಜಿಲ್ಲಾಧಿಕಾರಿ ಅನ್ನರ್ಪೂಣ ಮುದುಕಮ್ಮನವರ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್​. ಅವರಾದರೂ ಈ ಬಗ್ಗೆ ಗಮನಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕೋಟ್​
ಸಿಸಿ ಇಲ್ಲದೇ ವಿತರಣೆಯಾದ 1063 ನಿವೇಶನಗಳಿಗೆ ಫಾರ್ಮ ನಂ 3 ರದ್ದುಗೊಳಿಸುವ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಮಾಹಿತಿ ಪಡೆದು ಪ್ರತಿಕ್ರಿಯಿಸುವೆ.
ಅನಿಲ ಅಬ್ಬಿಗೇರಿ, ಸ್ಥಾಯಿ ಸಮಿತಿ ಅಧ್ಯಕ್ಷ.

ಕೋಟ್​:
ಫಾರ್ಮ ನಂ 3 ರದ್ದುಗೊಳಿಸುವ ಬಗ್ಗೆ ಈ ಗಾಗಲೇ ಸೂಚಿಸಲಾಗಿತ್ತು. ಮತ್ತೊಮ್ಮೆ ಕಡತಗಳ ಪರಿಶೀಲನೆ ಮಾಡಿ, ಮುಂದಿನ ಸಾಮಾನ್ಯ ಸಭೆಯಲ್ಲಿ ನಿವೇಶನ ರದ್ದುಗೊಳಿಸಲು ಠರಾವು ಮಾಡಲಾಗುವುದು.
-ಉಷಾ ದಾಸರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net