

ಗದಗ:
ಹಲವು ರಾಜಕೀಯ ಹೊಯ್ದಾಟದ ನಂತರ ಕೊನೆಗೂ ಗದಗ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ದಿನಾಂಕ ನಿಗದಿಪಡಿಸಿ ಉಪವಿಭಾಗಾಧಿಕಾರಿ ಎಂ. ಗಂಗಪ್ಪ ಅವರು ಗುರುವಾರ ಸಂಜೆ ಆದೇಶ ಹೊರಡಿಸಿದ್ದಾರೆ. ಶುಕ್ರವಾರ ಬೆಳಗ್ಗೆ ನಗರಸಭೆ ಸದಸ್ಯರಿಗೆ ಚುನಾವಣೆ ನಡೆಸುವ ಕುರಿತು ನೋಟೀಸ್ ತಲುಪುದ್ದಿ ಫೆ. 28 ರಂದು ಮಧ್ಯಾಹ್ನ 2 ಗಂಟೆಗೆ ಚುನಾವಣೆ ನಡೆಸುವುದಾಗಿ ತಿಳಿಸಲಾಗಿದೆ.
ಚುನಾವಣೆ ನಡೆಸುವಂತೆ ಹಲವು ಬಾರಿ ಬಿಜೆಪಿ ಸದಸ್ಯರು ಉಪವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು. ಬಿಜೆಪಿ ಮೂವರು ಸದಸ್ಯರ ಸದಸ್ಯತ್ವ ಸ್ಥಾನದಿಂದ ಅಮಾನತ್ತು ಪ್ರಕ್ರಿಯೆ ನಡೆದ ನಂತರ ಚುನಾವಣೆ ಮುಂದೂಡುವಂತೆ ಸದಸ್ಯರು ರಾಜತಾಂತ್ರಿಕ ನಡೆ ಮೂಲಕ ಒತ್ತಡವನ್ನು ಹಾಕಿದ್ದರು. ಈ ಮಧ್ಯೆ ಚುನಾವಣೆ ನಡೆಸುವ ಕುರಿತು ಗಂಗಪ್ಪ ಅವರು ಆದೇಶ ನೀಡಿದ್ದಾರೆ.
ಸದ್ಯದ ಚುನಾವಣೆ ಪ್ರಕ್ರಿಯೆ ಕುತೂಹಲಕಾರಿ ಘಟ್ಟ ತಲುಪಿದೆ. ಬಿಜೆಪಿ ಸದಸ್ಯರ ಕಾನೂನಾತ್ಮಕ ಹೋರಾಟ ಮುಂದುವರಿಸಿದ್ದಾರೆ.
ವಕಾರು ಸಾಲು ಪ್ರಕರಣದಲ್ಲಿ ಬಿಜೆಪಿ ಸದಸ್ಯರ ಅಮಾನತ್ತಿನಿಂದ ನಗರ ಸಭೆಯಲ್ಲಿ ಬಹುಮತವಿದ್ದ ಬಿಜೆಪಿ ಬಲ ಕುಸಿದಿದೆ. ಬಿಜೆಪಿ ಸಂಖ್ಯೆ 15 ಕ್ಕೆ ಕುಸಿದಿದ್ದು, ಕಾಂಗ್ರೆಸ್ ಸದಸ್ಯರು 17 ಜನರಿದ್ದಾರೆ. ರಾಜತಾಂತ್ರಿಕ ನಡೆಯಲ್ಲಿ ಸದ್ಯದಮಟ್ಟಿಗೆ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಕಾಂಗ್ರೆಸ್ ನಲ್ಕೂ ಹಲವರು ಅಧ್ಯಕ್ಷ ಸ್ಥಾನದ ಆಕಾಂಕ್ಷೆಗಳು ಇದ್ದಾರೆ. ಸಾಮಾನ್ಯ ವರ್ಗಕ್ಕೆ ಸೀಮಿತವಾದ ಅಧ್ಯಕ್ಷ ಸ್ಥಾನ ಸಾಮಾನ್ಯರಿಗೆ ಲಭಿಸುತ್ತದೆಯೇ ಇಲ್ಲವೇ ಎಂಬುದು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ.