

- 3.04 ಕೋಟಿ ರೂ. ಉಳಿತಾಯ ಬಜೆಟ್ ಮಂಡನೆ
- ಕುಡಿಯುವ ನೀರು ಕುರಿತು ಗಂಭೀರ ಚರ್ಚೆ, ಪ್ರತಿ ವಾರ್ಡ್ಗೆ 5 ಲಕ್ಷ ಮೀಸಲು
ವಿಜಯವಾಣಿ ಸುದ್ದಿಜಾಲ ಗದಗ
ನಗರಸಭೆ ಸಭಾಭವನದಲ್ಲಿ ಬುಧವಾರ ನಡೆದ 2024-25ನೇ ಸಾಲಿನ ಬಜೆಟ್ ಸಭೆಯಲ್ಲಿ ನಗರದ ಕುಡಿಯುವ ನೀರು ಕುರಿತು ಗಂಭಿರ ಚರ್ಚೆ ಜರುಗಿ ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ಮಾತಿನ ಸಮರಕ್ಕೆ ನಾಂದಿ ಹಾಡಿತು. ನೀರಿನ ಸಮಸ್ಯೆಯ ಮೂಲ ಕಾಂಗ್ರೆಸ್ ಪಕ್ಷ ಎಂದು ಬಿಜೆಪಿ ಸದಸ್ಯರು ಆರೋಪಿಸಿದರೇ, ಆಡಳಿತ ಪಕ್ಷ ಕುಡಿಯುವ ನೀರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿದರು.
ಯಾರು ತಪ್ಪಿತಸ್ಥರು?
ಸಭೆಯಲ್ಲಿ ನಿರಂತರ ಕುಡಿಯುವ ನೀರಿನ ಯೋಜನೆ ಕುರಿತು ನಡೆದ ಚರ್ಚೆ ಗಂಭೀರ ಸ್ವರೂಪ ಪಡೆದು ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ಜರುಗಿತು. ಗದಗ ಬೆಟಗೇರಿ ಕುಡಿಯುವ ನೀರಿನ ಯೋಜನೆಯಲ್ಲಿ ಹಲವು ಲೋಪದೋಷಗಳು ಇವೆ. ಸಾವಿರ ಕೋಟಿ ರ್ಖಚಾದರು ಯೋಜನೆ ಸಮರ್ಪಕ ಆಗುವುದಿಲ್ಲ. ಈ ಯೋಜನೆಯಲ್ಲಿ ಬಹುದೊಡ್ಡ ಮಾಫಿಯಾ ಇದೆ ಎಂದು ಕಾಂಗ್ರೆಸ್ ಸದಸ್ಯ ಕೃಷ್ಣಾ ಪರಾಪುರೆ ಆರೋಪಿಸಿದರು. ಮಧ್ಯ ಪ್ರವೇಶಿಸಿದ ಸದಸ್ಯ ರಾಘವೇಂದ್ರ ಯಳವತ್ತಿ, ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರಂಭವಾದ ಈ ಯೋಜನೆ ಅರ್ಪೂಣ ಆಗಿದೆ. ಉತ್ತಮ ಗುಣಮಟ್ಟದ ಪೈಪ್ ಲೈನ್ ಅಳವಡಿಸಿಲ್ಲ. ಅರ್ಪೂಣ ಕಾಮಗಾರಿಯನ್ನು ಲೋಕಾರ್ಪಣೆ ಮಾಡಿದ್ದು ಈ ಹಿಂದಿನ ಕಾಂಗ್ರೆಸ್ ಸರ್ಕಾರ. ಇದನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಿದರೆ ನಮ್ಮ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಯಿತು. ನಗರದಲ್ಲಿ ಇಂದಿನ ನೀರಿನ ಸಮಸ್ಯೆಗೆ ಕಾಂಗ್ರೆಸ್ ಪಕ್ಷವೇ ನೇರ ಕಾರಣ ಎಂದು ಯಳವತ್ತಿ ಕಿಡಿ ಕಾರಿದರು.
ಈ ನಡುವೆ ನೀರಿನ ಸಮಸ್ಯೆ ಪರಿಹರಿಸುವಂತೆ, ಕುಡಿಯುವ ನೀರಿಗೆ ಸಂಬಂಧಿಸಿದ ಕಾಮಗಾರಿಗಳ ಕಡತಗಳಿಗೆ ಸಹಿಹಾಕುವಂತೆ ಪೌರಾಯುಕ್ತರನ್ನು ಸದಸ್ಯರೆಲ್ಲರು ತರಾಟೆಗೆ ತೆಗೆದುಕೊಂಡರು. ನೀರು ಪೂರೈಕೆ, ಕೊಳವೆ ಬಾವಿ ದುರಸ್ಥಿ, ಟ್ಯಾಂಕರ್ ಸರಬರಾಜು ಕುರಿತು ಕೂಡಲೇ ಟೆಂಡರ್ ಕರೆಯಬೇಕು. ಇಲ್ಲವಾದರೆ ಬಜೆಟ್ ಮಂಡನೆಗೆ ಅವಕಾಶ ನೀಡುವುದಿಲ್ಲ, ಬಜೆಟ್ ಮಂಡನೆ ಮಾಡುವುದು ಅವಶ್ಯವಿಲ್ಲ ಎಂದು ಸದಸ್ಯರು ಒಕ್ಕೋರಲಿನಿ ಧನಿ ಎತ್ತಿದರು. ಈ ಮಧ್ಯೆ ಪ್ರವೇಶಿಸಿದ ನಗರಸಭೆ ಅಧ್ಯಕ್ಷೆ ಉಷಾ ದಾಸರ 35 ವಾರ್ಡುಗಳ ಎಲ್ಲ ಸದಸ್ಯರಿಗೂ ತಮ್ಮ ವಾರ್ಡ್ಗಳಲ್ಲಿ ನೀರಿನ ಸಮಸ್ಯೆ ಪರಿಹರಿಸಲು ತಲಾ 5 ಲಕ್ಷ ರೂ. ಅನುದಾನವನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆ ಸೂಚಿಸಿದರು. ನೀರು ಪೂರೈಕೆೆಗೆ ಕೂಡಲೇ ಟೆಂಡರ್ ಕರೆಯುವಂತೆ ಆದೇಶಿಸಿದರು. ತದನಂತರ ಸದಸ್ಯರು ಬಜೆಟ್ ಮಂಡನೆಗೆ ಅವಕಾಶ ಕಲ್ಪಿಸಲಾಯಿತು. ಅಧ್ಯಕ್ಷೆ ಉಷಾ ದಾಸರ 2024-25ನೇ ಸಾಲಿನ 3.04 ಕೋಟಿ ರೂ. ಉಳಿತಾಯ ಬಜೆಟ್ ಮಂಡಿಸಿದರು.
ಕೈಕೊಟ್ಟ ಮೈಕ್, ಸದಸ್ಯರ ಆಕ್ರೋಶ:
ಸಭೆ ಆರಮಬದಲ್ಲಿ ಮೈಕ್ ಕೈಕೊಟ್ಟ ಕಾರಣ ಸದಸ್ಯರ ಆಕ್ರೋಶಕ್ಕೆ ಕಾರಣ ಆಯಿತು. ಕಳೆದ ಸಾಮಾನ್ಯ ಸಭೆಗಳಲ್ಲಿ ಮೈಕ್ ಸಮಸ್ಯೆ ಕಾಣುತ್ತಿದೆ. ಬಜೆಟ್ ಸಾಮಾನ್ಯ ಸಭೆಯಲ್ಲೂ ಮೈಕ್ ಸಮಸ್ಯೆ ಉಲ್ಭಣಗೊಂಡಿದೆ. ಸಮಸ್ಯೆ ಸರಿಪಡಿಸಿದ ಎಂದು ಸದಸ್ಯರು ಪೌರಾಯುಕ್ತರಿಗೆ ತಾಕೀತು ಮಾಡಿದರು.
ಟೆಂಡರ್ ಇಲ್ಲದೇ ಕಾಮಗಾರಿ:
ನಗರಸಭೆಯಲ್ಲಿ ಕೋಟ್ಯಂತರ ರೂ. ಸೋರಿಕೆ ಆಗುತ್ತಿದೆ. 10 ಸಾವಿರ ರೂ. ಖಚಿರ್ಗೆ 50 ಸಾವಿರ ರೂ. ಖಚಿರ್ನ ಬಿಲ್ ಪಾವತಿ ಮಾಡಲಾಗುತ್ತಿದೆ. ನಗರಸಭೆಯ 80 ವಾಹಗಳ ಇಂಧನ ಖಚಿರ್ನಲ್ಲೂ ಲಕ್ಷಾಂತರ ಅವ್ಯವಹಾರ ನಡೆದಿದೆ. ಸದಸ್ಯರಿಗೆ ಈ ಬಗ್ಗೆ ಮುತುವಜಿರ್ ಇಲ್ಲ. ಗುತ್ತಿಗೆಯಲ್ಲಿ ನನಗೆ(ಸದಸ್ಯರು) ಬಂದರೆ ಸಾಕು(ಹಣ), ನಾನು ನನ್ನ ಮಕ್ಕಳು ಚೆನ್ನಾಗಿ ಇದ್ದರೆ ಸಾಕು ಎಂಬ ಭಾವನೆಯಲ್ಲಿ ನಾವಿದ್ದೇವೆ ಎಂದು ಸದಸ್ಯ ಕೃಷ್ಣಾ ಪರಾಪುರೆ ಆರೋಪಿಸಿದರು.
ವಕಾರು ಸಾಲು ಪ್ರಸ್ತಾಪ:
ನಗರಸಭೆ ಆಸ್ತಿಗಳ ಕುರಿತು ನಡೆದ ಚರ್ಚೆಯಲ್ಲಿ, ಆಸ್ತಿಗಳನ್ನು ಬಳಸಿ ಆದಾಯ ಸೃಷ್ಟಿಸಿಕೊಳ್ಳುವ ಕುರಿತು ಕಾಂಗ್ರೆಸ್ ಸದಸ್ಯರು ಆಡಳಿತ ಪಕ್ಷಕ್ಕೆ ಸಲಹೆ ನೀಡಿದರು. ಈ ವಿಷಯವಾಗಿ ಕಾಂಗ್ರೆಸ್ ಸದಸ್ಯರ ಮೇಲೆ ಮುಗಿದ್ದ ಅಧ್ಯಕ್ಷೆ ಉಷಾ ದಾಸರ, ರಾಘವೇಂದ್ರ ಯಳವತ್ತಿ, ಅನಿಲ ಅಬ್ಬಿಗೇರಿ ಅವರು ನಗರದ ಮಧ್ಯ ಭಾಗದ ಸಾವಿರು ಕೋಟಿ ಮೌಲ್ಯದ ನಗರಸಭೆ ಜಾಗೆಯನ್ನು ಕಬಳಿಸುವ ಹುನ್ನಾರ ನಡೆದಿದೆ. ನಗರಸಭೆ ಈ ಆಸ್ತಿಯನ್ನು ಉಳಸಿ, ಬಳಸಿಕೊಂಡ ನಗರಸಭೆಗೆ ಆದಾಯ ಮೂಲ ಸೃಷ್ಟಿಸಿಕೊಳ್ಳಲಿದೆ ಎಂದು ಉತ್ತರಿಸಿದರು.
2024-25ನೇ ಬಜೆಟ್ ಮಂಡನೆ:
ಕಾಂಗ್ರೆಸ್ ನಿಂದ ಬಜೆಟ್ ಖಂಡನೆ:
ಸಾರ್ವಜನಿಕ ಬೇಡಿಕೆಗಳನ್ನು ಬಜೆಟ್ ನಲ್ಲಿ ಈಡೇರಿಸಿಲ್ಲ. ಬೇಡಿಕೆಗಳನ್ನು ಈಡೇರಿಸದೇ ಇದ್ದರೆ ಬಜೆಟ್ ಪೂರ್ವಭಾವಿ ಸಭೆ ಕರೆಯುವುದು ಏತಕ್ಕೆ? ಎಂದು ನಗರಸಭೆ ವಿರೋಧಪಕ್ಷದ ನಾಯಕ ಎಲ್.ಡಿ. ಚಂದಾವರಿ ಆರೋಪಿಸಿದರು. ನಗರಸಭೆ ಅಧ್ಯಕ್ಷೆ ಉಷಾ ದಾಸರ ಬನೆಟ್ ಮಂಡನೆ ಮಾಡಿದ ನಂತರ ಬಜೆಟ್ ವಿಷಯವಾಗಿ ಮಾತನಾಡಿದ ಅವರು, ಇದು ಕೊರತೆಯ ಬಜೆಟ್ ಆಗಿದೆ. ಆದಾಯ ಸೃಷ್ಟಿಸುವ ಬಜೆಟ್ ಮಂಡನೆ ಆಗಬೇಕಿದೆ. ತೆರಿಗೆ ಪಾವತಿ ಅಧಿಕವಾಗಬೇಕು. ನಗರಸಭೆ ಆಸ್ತಿಗಳು ಪ್ರಭಾವಿಗಳು ಅನುಭವಿಸುತ್ತಿದ್ದಾರೆ. ನಗರಸಭೆ ಆಸ್ತಿಗಳನ್ನು ಮರಳಿ ಪಡೆಯಬೇಕು ಎಂದು ಆಗ್ರಹಿಸಿದರು. ನಗರಸಭೆ ಆಸ್ತಿ ವಿಷಯಗಳನ್ನು ಚಂದಾವರಿ ಪ್ರಸ್ತಾಪಿಸುತ್ತಿದ್ದಂತೆ ಬೆಂಬಲ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ಹೌದು ಸಾವಿರಾರು ಕೋಟಿ(ವಕಾರ ಸಾಲು) ಮೌಲ್ಯದ ಆಸ್ತಿಯು ನಗರಸಭೆ ಬಿಟ್ಟು ಕೊಡುವುದಿಲ್ಲ. ನಾವೆಲ್ಲರೂ ಆಸ್ತಿಗಳನ್ನು ರಕ್ಷಿಸಬೇಕು ಎಂದು ಒಕ್ಕೊರಲಿನ ದನಿ ಎತ್ತಿದ್ದರು.