

ಶಿವಾನಂದ ಹಿರೇಮಠ, ಗದಗ
ನಗರಸಭೆ ಆಡಳಿತ ಚುಕ್ಕಾಣಿ ಹಿಡಿಯುವ ಬಿಜೆಪಿ ಪ್ರಯತ್ನಕ್ಕೆ ಕಾಂಗ್ರೆಸ್ ಪಕ್ಷ ತಾತ್ಕಾಲಿಕ ದಿಗ್ಭಂದನ ಹೇರಿದೆ. ಕಾಂಗ್ರೆಸ್ ಬಿಜೆಪಿ ನಡುವಿನ ಹಾವು ಏಣಿ ಆಟದಲ್ಲಿ ಕಾಂಗ್ರೆಸ್ ಸದಸ್ಯದ ಮಟ್ಟಿಗೆ "ಚೌಕ' ಭಾರಿಸಿದೆ. ಮುಂದಿನ ವಿಚಾರಣೆವರೆಗೂ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯನ್ನು ನಡೆಸದಂತೆ ಕಾಂಗ್ರೆಸ್ ಸದಸ್ಯರು ಹೈಕೋರ್ಟ್ ತಡೆಯಾಜ್ಞೆ ತಂದಿದ್ದಾರೆ. ಸಂಖ್ಯಾಬಲವಿದ್ದರೂ ಅಧಿಕಾರದ ಗದ್ದುಗೆ ಏರುವ ಬಿಜೆಪಿ ಆಶಯವನ್ನು ಕಾಂಗ್ರೆಸ್ ಕಮರಿಸಿದ್ದು, ಹಾವು ಏಣಿ ಆಟ ಮುಂದುವರಿಯಲಿದೆ. ಕಾಂಗ್ರೆಸ್ ತಡೆಯಾಜ್ಞೆ ತರುತ್ತಿದ್ದಂತೆ ಬಿಜೆಪಿ ನಗರಸಭೆ ಸದಸ್ಯರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಿದ್ದು, ಮುಂದಿ ಕಾನೂನು ಸಮರದ ಬಗ್ಗೆ ಚರ್ಚೆ ನಡೆಸಿದೆ ಎನ್ನಲಾಗಿದೆ.
ಹಿಂದುಳಿದ "ಅ' ವರ್ಗಕ್ಕೆ ಅನ್ಯಾಯ:
ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ವಿಷಯದಲ್ಲಿ ಹಿಂದುಳಿದ "ಅ' ವರ್ಗಕ್ಕೆ ಅನ್ಯಾಯ ಆಗಿದೆ ಎಂದು ಕಾಂಗ್ರೆಸ್ ನಗರಸಭೆ ಸದಸ್ಯ ಇಮ್ತಿಯಾಜ ಶಿರಹಟ್ಟಿ ಮತ್ತು ಲಕ್ಷಿ$್ಮ ಅನೀಲ ಸಿದ್ಧಮನಹಳ್ಳಿ ಅವರು ಧಾರವಾಡ ಹೈಕೊರ್ಟ್ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. 2016ರಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ನೀಡಲಾಗಿತ್ತು. ಅದೇ ರೀತಿ 2020ರಲ್ಲೂ ಅಧ್ಯಕ್ಷ ಸ್ಥಾನವನ್ನು ಎಸ್ಸಿ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಮೀಸಲು ನಿಗದಿಪಡಿಸಲಾಗಿದೆ. ಹಿಂದುಳಿದ "ಅ' ವರ್ಗಕ್ಕೆ ರೋಸ್ಟರ್ ಪದ್ಧತಿ ಅನ್ವಯ ಮೀಸಲು ನಿಡಬೇಕಿತ್ತು. ಹಾಗಾಗಿ, ಪ್ರಸಕ್ತ ಅಧ್ಯಕ್ಷ, ಉಪಾಧ್ಯಕ್ಷ ಮೀಸಲು ಸ್ಥಾನದಲ್ಲೂ ಹಿಂದುಳೀದ "ಅ' ವರ್ಗಕ್ಕೆ ಅನ್ಯಾಯ ಆಗಿದ್ದು, ಚುನಾವಾಣೆ ನಡೆಸದಂತೆ ತಡೆಯಾಜ್ಞೆ ನಿಡಬೇಕೆಂದು ಅಜಿರ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಪೀಠ ಸೆ. 11 ಕ್ಕೆ ವಿಚಾರಣೆ ಮುಂದೂಡಿದೆ ಮತ್ತು ಮುಂದಿನ ವಿಚಾರಣೆ ವರೆಗೂ ಚುನಾವಣೆ ನಡೆಸದಂತೆ ತಡೆಯಾಜ್ಞೆ ನೀಡಿದೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಕೊರ್ಟ್ ತಡೆಯಾಜ್ಞೆ ನೀಡಿದ ಹಿನ್ನೆಲೆ ಸೆ.30ರ ಒಳಗಾಗಿ ಚುನಾವಣೆ ನಡೆಸಬೇಕೆನ್ನುವ ನಿಯಮ ಪಾಲನೆ ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ.
2004ರ ನಂತರ?
ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ "ಅ' ವರ್ಗದ ಸದಸ್ಯರು ಸ್ಥಾನ ಅಲಂಕರಿಸಿ 20 ವರ್ಷವೇ ಗತಿಸಿವೆ. 2004ರಲ್ಲಿ ಹಿಂದುಳಿದ "ಅ' ವರ್ಗಕ್ಕೆ (2ಎ) ಮೀಸಲು ನಿಗದಿಪಡಿಸಲಾಗಿತ್ತು. ಪ್ರಕಾಶ ಮತ್ತು ಹನುಮಂತಪ್ಪ ಎಂಬುವರು ಅಧ್ಯಕ್ಷ ಸ್ಥಾನ ಅಲಂಕರಿಸಿದ್ದರು. ಅಲ್ಲಿಂದ ಇಲ್ಲಿವರೆಗೂ "2ಎ' ಸಮುದಾಯ ಅವಕಾಶ ವಂಚಿತ ಆಗಿದೆ ಎಂಬುದು ಕಾಂಗ್ರೆಸ್ ಸದಸ್ಯರ ಅಭಿಪ್ರಾಯ. ಇದನ್ನೇ ನಗರಾಭಿವೃದ್ಧಿ ಇಲಾಖೆ ಪಾಲಿಸಿಲ್ಲ ಎಂಬುದು ಕಾಂಗ್ರೆಸ್ ಆರೋಪಿಸುತ್ತಿದೆ.
ಶೀತಲ ಸಮರ ಆರಂಭ ಎಲ್ಲಿಂದ?
ನಗರಸಭೆ ಸಂಖ್ಯಾಬಲದಲ್ಲಿ ಕಾಂಗ್ರೆಸ್ ಪಕ್ಷ ಏಕ ಮಾತ್ರ ಮತದಲ್ಲಿ ಹಿಂದಿದೆ. ಶತಾಯಗತಾಯ ಅಧಿಕಾರದ ಗದ್ದುಗೆ ಏರಬೇಕೆಂಬ ಆಶಯದೊಂದಿಗೆ ಕಾನೂನು ಸಮರಕ್ಕೆ ಕಾಂಗ್ರೆಸ್ ಮುನ್ನಡಿ ಇಟ್ಟಿತ್ತು. ಅದರ ಭಾಗವಾಗಿ ಸದಸ್ಯ ಅನಿಲ ಅಬ್ಬಿಗೇರಿ ಜಾತಿ ಪ್ರಮಾಣ ಪತ್ರದ ಬಗ್ಗೆ ತಗಾದೆ ತೆಗೆದು, ಸಂಖ್ಯಾಬಲದಲ್ಲಿ ಸಮಬಲ ಸಾಧಿಸಲು ಪ್ರಯತ್ನಿಸಿತ್ತು. ಈ ಪ್ರಕರಣ ಕೋರ್ಟ ಮೆಟ್ಟಿಲೇರಿತ್ತು ಮತ್ತು ಪ್ರಕರಣಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದ ಹಿನ್ನೆಲೆ ಕಾಂಗ್ರೆಸ್ಸಿಗೆ ಹಿನ್ನಡೆ ಆಗಿತ್ತು. ಅಲ್ಲಿಂದ ಶುರುವಾರ ಕಾಂಗ್ರೆಸ್ ಬಿಜೆಪಿ ನಡುವಿನ ಶೀತಲ ಸಮರವು ವಕಾರು ಸಾಲು ಪ್ರಕರಣ ಸುತ್ತುವರೆದೂ ಈಗ ಚುನಾವಣೆಯೇ ನಡೆಯದಂತೆ ತಡೆಯಾಜ್ಞೆ ತರುವರೆಗೂ ಮುಂದುವರಿಯುತ್ತ ಬಂದಿದೆ.
ಬಾಕ್ಸ್:
ನಿಕಟಪೂರ್ವ ಅಧ್ಯೆ ಉಷಾ ದಾಸರ ಅವರ ಅಧ್ಯಕ್ಷ ಸ್ಥಾನದ ಅವಧಿ ಜು.24 ರಂದು ಮುಕ್ತಾಯಗೊಂಡಿತ್ತು. ಮೀಸಲು ಆದೇಶದ ನಂತರ ಅಧ್ಯಕ್ಷಗಿರಿ ಗಾಧಿಗೆ ಏರಲು ಬಿಜೆಪಿ ಸದಸ್ಯರು ಲೆಕ್ಕಾಚಾರ ಹೊಂದಿದ್ದರು. ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲು ಪ್ರಕಟಗೊಂಡಿದ್ದರಿಂದ ಹಿರಿಯ ನಗರಸಭೆ ಬಿಜೆಪಿ ಸದಸ್ಯರಲ್ಲಿ ಆಶಯ ಇಮ್ಮಡಿಗೊಂಡಿತ್ತು. ಈಗ ಈ ಆಶಯಕ್ಕೆ ತಣ್ಣೀರು ಎರೆಚಿದಂತಾಗಿದೆ.