ಐತಿಹಾಸಿಕ ಠರಾವು ನಿರ್ಣಯಿಸಿದ ನಗರಸಭೆ

IMG-20240825-WA0018
Published on

ಠರಾವು ಪುಸ್ತಕದ ಝೆರಾಕ್ಸ್​ ಪ್ರತಿಯ ದೃಢೀಕರಣಕ್ಕೆ ಮಾತ್ರ ಕಾನೂನಿನ ಮಾನ್ಯತೆ
ಗಣಕೀಕೃತ ಠರಾವು ಪ್ರತಿಗಳ ದೃಢೀಕರಣಕ್ಕೆ ಯಾವುದೇ ಮಾನ್ಯತೆ ಇಲ್ಲ

ಶಿವಾನಂದ ಹಿರೇಮಠ, ಗದಗ
ನಗರಸಭೆಯ 378ನೇ ಠರಾವು ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಠರಾವು ದಾಖಲೆಗಳ ವಿಷಯವಾಗಿ ಹೊಸ ಮುನ್ನುಡಿ ಬರೆದಿದೆ. 378ನೇ ಠರಾವು ಪ್ರಕರಣದಿಂದ ಎಚ್ಚತ್ತ ಅಧಿಕಾರಿಗಳು ಸೂಕ್ತ ಪಾಠ ಕಲಿತಿದ್ದಾರೆ. ಠರಾವು ದಾಖಲೆಗಳ ನೈಜತೆ ಉಳಿಸಿಕೊಳ್ಳಲು ಮತ್ತು ಕಾನೂನಿನ ಮಾನ್ಯತೆ ನೀಡಲು ಹೊಸ ನಿರ್ಧಾರ ಕೈಕೊಂಡಿದೆ. ಈ ಸಂಬಂಧ ಆ.23 ರಂದು ನಗರಸಭೆಯಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಸಭೆ ನಡೆದು, ಸಭೆಯಲ್ಲಿ 384ನೇ ಠರಾವು ಅಂಗೀಕರಿಸಿದ್ದಾರೆ. ಆಧುನಿಕ ಯುಗದಲ್ಲಿ ಗಣಕೀಕೃತ ದಾಖಲೆಗಳಿಗೆ ನೈಜತೆ ಇಲ್ಲದಂತಾಗಿದ್ದು, ಕೈಬರಹದ ಠರಾವು ಪುಸ್ತಕವೇ ಕಾನೂನಿನ ಮಾನ್ಯತೆಗೆ ಅರ್ಹ ಎಂದು 384ನೇ ಠರಾವಿನ ಮೂಲಕ ನಗರಸಭೆ ಸ್ಪಷ್ಟಡಿಸಿದೆ. ಜತಗೆ 378ನೇಠರಾವಿಗೂ ನಗರಸಭೆಗೂ ಯಾವುದೇ ಸಂಬಂಧ ಇಲ್ಲವೆಂದು 384ನೇ ಠರಾವಿನ ಅಂಗೀಕರಿಸುವ ಮೂಲಕ ನಗರಸಭೆ ತಿಳಿಸಿದೆ.
ಠರಾವು ದಾಖಲೆಗಳ ನಕಲು, ಅಸಲಿ, ದೃಢೀಕರಣಕ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಜರುಗಿದ ಸಭೆಯಲ್ಲಿ ವಿಶೇಷವಾಗಿ 378ನೇ ಠರಾವಿನ ಕುರಿತು ಮಾತ್ರ ಚಚಿರ್ಸಲಾಯಿತು. ಸಂಜೆ ನಗರಸಭೆಯಿಂದ ಹೊರಡಿಸಲಾದ ಪ್ರಕಟಣೆಯಲ್ಲಿ 378ನೇ ಠರಾವಿನ ಬಗ್ಗೆ ಸ್ಪಷ್ಟಪಡಿಸಿದ ಪೌರಾಯುಕ್ತರು ಠರಾವು ಪುಸ್ತಕದಲ್ಲಿ ಅಧ್ಯಕ್ಷರ ಸಹಿ ಇಲ್ಲದ ಹಿನ್ನೆಲೆ ಮತ್ತು ನಗರಸಭೆ ಸಾಮಾನ್ಯ ಸಭೆಯಲ್ಲಿ 378ನೇ ಠರಾವಿನ ಬಗ್ಗೆ ಚರ್ಚೆ ನಡೆಯದ ಹಿನ್ನೆಲೆ 378ನೇ ಠರಾವಿಗೂ ನಗರಸಭೆಗೆಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.
ರಾಜ್ಯದ ಸ್ಥಳಿಯ ಸಂಸ್ಥೆಗಳೆಲ್ಲವೂ ಗಣಕೀಕೃತ ದಾಖಲೆಗಳಿಗೆ ಮಾನ್ಯತೆ ನೀಡುತ್ತಿರುವ ಸಂದರ್ಭದಲ್ಲಿ ಗದಗ ನಗರಸಭೆ ಕೈಬರಹದ ಠರಾವು ದಾಖಲೆಗಳಿಗೆ ಕಾನೂನಿ ಮಾನ್ಯತೆ ನೀಡಿದ್ದು ವಿಶೇಷ. ರಾಜ್ಯದ ಎಲ್ಲ ಸ್ಥಳಿಯ ಸಂಸ್ಥೆಗಳಿಗೆ ಗದಗ ನಗರಸಭೆಯ ನಿರ್ಣಯ ಮಾದರಿ ಆಗಲಿದೆ.
ಠರಾವುನಲ್ಲಿ ಏನಿದೆ:
ಹಿಂದಿನ ಪೌರಾಯುಕ್ತ ಪ್ರಶಾಂತ ವರಗಪ್ಪನ್ನವರ ನೀಡಿರುವ ದೂರಿನ ಅನ್ವಯ 378ನೇ ಠರಾವಿನ ಮೂಲಕ ನಗರಸಭೆ ಆಸ್ತಿಗಳನ್ನು ಲೀಸ್​ ನೀಡಿರುವ ಬಗ್ಗೆ ಹಲವು ಪ್ರಶ್ನೆಗಳು ಮೂಡುತ್ತಿವೆ. ಹಾಗಾಗಿ ನಗರಸಭೆಯ ಆಸ್ತಿಗಳ ಎಲ್ಲ ಮೂಲ ದಾಖಲೆಗಳನ್ನು ಡಿಜಿಟಲೀಕರಣ ಮಾಡಲು ತೀರ್ಮಾನಿಸಲಾಗಿದೆ. ಹಾಗೂ ಎಲ್ಲ ಠರಾವುಗಳನ್​ಉ ಬರೆಯುವ ಮೂಲ ಪುಸ್ತಕದಲ್ಲಿ ಪೌರಾಯುಕ್ತರು ಮತ್ತು ನಗರಸಭೆ ಅಧ್ಯಕ್ಷರು ಇಬ್ಬರೂ ಕಡ್ಡಾಯ ಸಹಿ ಮಾಡಬೇಕು ಎಂದು ನಿರ್ಣಯಿಸಲಾಗಿದೆ. ಠರಾವು ಪುಸ್ತಕದ ಝೆರಾಕ್ಸ್​ ಪ್ರತಿಯ ದೃಢೀಕರಣಕ್ಕೆ ಮಾತ್ರ ಕಾನೂನಿನ ಮಾನ್ಯತೆ ನೀಡಲಾಗಿದೆ ಎಂದು ಸ್ಪಷ್ಟ ಪಡಿಸಲಾಗಿದೆ.
ಹಿನ್ನೆಲೆ ಏನು?
ನಗರಸಭೆ ಅಧಿಕಾರಿಗಳ ಜತೆ ತುರ್ತು ಸಭೆ ನಡೆಸಿದ ಜಿಲ್ಲಾಧಿಕಾ ಗೋವಿಂದ ರೆಡ್ಡಿ ಅವರ ಆದೇಶದ ಮೇರೆಗೆ 384 ಠರಾವು ಅಂಗೀಕರಿಸಲು ಕಾರಣವು ಇದೆ. ಇತ್ತೀಚೆಗೆ ಹಿಂದಿನ ಪೌರಾಯುಕ್ತ ಪ್ರಶಾಂತ ವರಗಪ್ಪನ್ನವರ ಅವರು ವಕಾರು ಸಾಲು ಲೀಸ್​ ಸಬ್ಬಂದಿಸಿದಂತೆ ಅಂಗೀಕರಿಸಿದೆ ಎನ್ನಲಾದ 378ನೇ ಠರಾವು ಸುಳ್ಳೆಂದು ಮತ್ತು ಠರಾವು ದೃಢೀಕರಣ ಪತ್ರಕ್ಕೆ ನನ್ನ ಸಹಿ ನಕಲು ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ದೂರು ಆಧರಿಸಿ ಕಾಂಗ್ರೆಸ್​ ಪಕ್ಷ ಸುದ್ದಿಗೋಷ್ಟಿ ನಡೆಸಿ, ನಕಲಿ ಠರಾವು ಸೃಷ್ಟಿಸಿ ನಗರಸಭೆ ಮತ್ತು ಸರ್ಕಾರಕ್ಕೆ ಬಿಜೆಪಿ ಮೋಸ ಮಾಡಿದೆ ಎಂದು ಆರೋಪಿಸಿದ್ದರು. ಪ್ರತ್ಯುತ್ತರವಾಗಿ ಸುದ್ದಿಗೋಷ್ಟಿ ನಡೆಸಿದ್ದ ಬಿಜೆಪಿ ಠರಾವು ದೃಢೀಕರಣ ಪತ್ರಕ್ಕೆ ಅಂದಿನ ಪೌರಾಯುಕ್ತರ ಮಾಡಿರುವ ಸಹಿ ಅಸಲಿಯಾಗಿದೆ ಎಂದು ಹೇಳೀಕೆ ನೀಡಿದ್ದರು. ಈ ಪ್ರಕರಣ ಹಿನ್ನೆಲೆ ಎಚ್ಚತ ನಗರಸಭೆಯು ಠರಾವು ದೃಢೀಕರಣಕ್ಕೆ ಮೂಲ ಠರಾವು ಪುಸ್ತಕದ ಝೆರಾಕ್ಸ ಪ್ರತಿಗೆ ಕಾನೂನಿನ ಮಾನ್ಯತೆ ನೀಡಿದೆ.

ಕೋಟ್​:


ಇತ್ತೀಚೆಗೆ ನಗರಸಭೆ ದಾಖಲೆಗಳು ದುರುಪಯೋಗ ಪಡೆದುಕೊಳ್ಳುತ್ತಿರುವ ಹಿನ್ನೆಲೆ ಈ ನಿರ್ಧಾರಕ್ಕೆ ಬರಲಾಗಿದೆ. ಠರಾವು ದಾಖಲೆಗಳ ದೃಢೀಕರಣ ಪ್ರತಿಗಳನ್ನು ನ್ಯಾಯಾಲಯ ಮತ್ತು ಇನ್ನೀತರ ಸರ್ಕಾರಿ ಕಚೇರಿಗೆ ಸಲ್ಲಿಸುವ ಸಂದರ್ಭದಲ್ಲಿ ಕೈಬರಹದ ಮೂಲಕ ಬರೆದ ಮೂಲ ಠರಾವು ಪುಸ್ತಕವನ್ನೇ ಝೆರಾಕ್ಸ ಮಾಡಿಸಿ, ಅದೇ ಪ್ರತಿಗೆ ಪೌರಾಯುಕ್ತರು ದೃಢೀಕರಣ ನೀಡಬೇಕು. ಅದನ್ನೇ ನಗರಸಭೆ ಅಧಿಕೃತ ದಾಖಲೆ ಎಂದು ಪರಿಗಣಿಸುತ್ತದೆ.
ಗೋವಿಂದರೆಡ್ಡಿ, ಜಿಲ್ಲಾಧಿಕಾರಿ

ಕೋಟ್​:
ಠರಾವು ಬರೆಯುವ ಪುಸ್ತಕವು ಪೌರಾಯುಕ್ತರ ಸುಪಧಿರ್ಯಲ್ಲಿ ಇರುತ್ತದೆ. ಈ ಮೊದಲು ಅಧ್ಯಕ್ಷರು ಠರಾವು ಪುಸ್ತಕಗಳಿಗೆ ಸಹಿ ಮಾಡುವ ನಿಯಮವನ್ನು ಗದಗ ನಗರಸಭೆಯಲ್ಲಿ ರೂಢಿಸಿಕೊಂಡಿರಲಿಲ್ಲ. ಮುಂದಿನ ಠರಾವುಗಳಿಗೆ ಪೌರಾಯುಕ್ತರು ಮತ್ತು ನಗರಸಭೆ ಅಧ್ಯಕ್ಷರು ಇಬ್ಬರೂ ಸಹಿ ಮಾಡಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಗಿದೆ.
ಮಹೇಶ ಪೋತೇದಾರ, ಪೌರಾಯಕ್ತರು ನಗರಸಭೆ

ಕೋಟ್​:
ಹಿಂದಿನ ಪೌರಾಯುಕ್ತ ಪ್ರಶಾಂತ ವರಗಪ್ಪನ್ನವರ ಅವರ ಸಹಿ ಅಸಲಿಯೋ ನಕಲಿಯೋ ಎಂಬುದಕ್ಕೆ ಸಾಾದಾರಗಳನ್ನು ಸಂಗ್ರಹಿಸಲಾಗುತ್ತಿದೆ. ತದನಂತರ ಎ್​ಎಸ್​ಎಲ್​ ವರದಿಗಾಗಿ ದಾಖಲೆಗಳನ್ನು ಕಳುಹಿಸಲಾಗುವುದು.
ಬಿ.ಎಸ್​. ನೇಮಗೌಡ, ಪೊಲೀಸ್​ ವರಿಷ್ಠಾಧಿಕಾರಿಗಳು, ಗದಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net