

ಶಿವಾನಂದ ಹಿರೇಮಠ ಗದಗ
ಜಿಲ್ಲಾಧಿಕಾರಿಗಳ ಅನುಮೋದನೆ ಇಲ್ಲದೇ 1 ಕೋಟಿಗೂ ಅಧಿಕ ಮೊತ್ತಕ್ಕೆ ಬೀದಿ ದೀಪಗಳ ನಿರ್ವಹಣೆಗೆ ಟೆಂಡರ್ ನೀಡಿದ್ದಲ್ಲದೇ, ಒಂದು ಮೊತ್ತಕ್ಕೆ ಮಂಜೂರಾತಿ ಹಾಗೂ ಮತ್ತೊಂದು ಮತ್ತೊಕ್ಕೆ ಕಾರ್ಯಾನುದೇಶ ನೀಡಿರುವ ಗದಗ ನಗರಸಭೆಯಲ್ಲಿ ಬೀದಿ ದೀಪಗಳ ನಿರ್ವಹಣೆಯಲ್ಲಿ ಭ್ರಷ್ಟಾಚಾರದ ಸುಳಿದಾಡುತ್ತಿದೆ. ಗುತ್ತಿಗೆದಾರನಿಗೆ ಕಾರ್ಯಾನುದೇಶ ನೀಡುವ ಆತುರದಲ್ಲಿ ನಗರಸಭೆ ಕೆಲ ಪ್ರಮಾದಗಳನ್ನು ಮಾಡಿದ್ದು, ಭ್ರಷ್ಟಾಚಾರಕ್ಕೆ ಮಹತ್ವದ ಸಾಕ್ಷ$್ಯಗಳು ಒಂದೊಂದೇ ಹೊರ ಬರುತ್ತಿವೆ. ಆಡಳಿತ ಯಂತ್ರ ಕುಸಿಯುತ್ತಿದೆ. ಸಾರ್ವಜನಿಕರ ತೆರಿಗೆ ಹಣದಿಂದ ಸಂಗ್ರಹವಾದ ನಗರಸಭೆ ಸಾಮಾನ್ಯ ನಿಧಿಯಿಂದ ಪ್ರತಿ ತಿಂಗಳು ಲಾಂತರ ರೂ. ರ್ಖಚಾಗುತ್ತಿದ್ದು, ಸಾಮಾನ್ಯ ನಿಧಿ ನೀರಿನಂತೆ ಪೋಲಾಗುತ್ತಿದೆ.
ನಗರಸಭೆಯ ಪ್ರಮಾದಗಳೇನು?
ಬಾಕ್ಸ್:
ಬೀದಿ ದೀಪ ನಿರ್ವಹಣೆಗೆ ಟೆಂಡರ್ ನಲ್ಲಿ ಭಾಗವಹಿಸಿದ ಹಲವು ಗುತ್ತಿಗೆದಾರರು ನಮೂದಿಸಿದ ತುಲನಾತ್ಮಕ ದರಗಳ ಪಟ್ಟಿಯ ಬಗ್ಗೆಯೂ ಅನುಮಾನ ಮೂಡುತ್ತಿದೆ. ಯಾರು ಕಡಿಮೆ ದರ ಯಾರು ಹೆಚ್ಚು ದರ ನಮೂದಿಸಿದ್ದಾರೆ ಎಂಬದು ಗೌಪ್ಯವಾಗಿದೆ. ಈ ದಾಖಲೆಯನ್ನು ಜಿಲ್ಲಾಧಿಕಾರಿಗಳು ಕುಲಂಕೂಷವಾಗಿ ಪರಿಶೀಲಿಸಬೇಕು ಎಂಬ ಆಗ್ರಹವು ಸಾರ್ವಜನಿಕ ವಲಯದಲ್ಲಿ ಮತ್ತು ನಗರಸಭೆ ಆವರಣದಲ್ಲಿ ಕೇಳಿ ಬರುತ್ತಿದೆ. ನಕಲಿ ಠರಾವು ಪ್ರಕರಣ, ಯುಜಿಡಿ ನಿರ್ವಹಣೆ, ಕುಡಿಯುವ ನೀರು ಪೂರೈಕೆ ವಿಷಯದಲ್ಲಿ ಲೋಪವೆಸಗಿ ನಗರಸಭೆ ಆಡಳಿತಕ್ಕೆ ಬೇಸತ್ತ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಈ ಹಿಂದೆ ಖುದ್ದಾಗಿ ನಗರಸಭೆಗೆ ಆಗಮಿಸಿ ಸಭೆ ನಡೆಸಿದ್ದರು. ಇಂತಹ ಸನ್ನಿವೇಶ ಈಗ ಮತ್ತೊಮ್ಮೆ ಪುನರಪಿ ಆಗುವ ಸಾಧ್ಯತೆಗಳಿವೆ.
ಬಾಕ್ಸ್: (ಕಾರ್ಯಾನುದೇಶದಲ್ಲಿ ಇದ್ದಂತೆ)
ನಗರದಲ್ಲಿ ಬೀದಿ ದೀಪಗಳ ಸಂಖ್ಯೆ - ನ. 2023ರ ಅಂತ್ಯಕ್ಕೆ ಒಟ್ಟು - ಡಿ.1, 2023 ಆರಂಭಕ್ಕೆ - ಪ್ರತಿ ತಿಂಗಳು ಒಟ್ಟು ನಿರ್ವಹಣೆ ಮೊತ್ತ(ಲಕ್ಷ ರೂ)
ಟ್ಯೂಬ್ಲೈಟ್ 20/40 ವ್ಯಾಟ್ - 7812 - 7312 - 156549.92
ಎಚ್ಪಿಎಸ್ಎಲ್ವಿ 70 ವ್ಯಾಟ್ ವರೆಗೆ - 7 - 7 - 509.88
ಎಚ್ಪಿಎಸ್ಎಲ್ವಿ 150 ವ್ಯಾಟ್ ವರೆಗೆ - 20 - 20 - 1863.20
ಎಚ್ಪಿಎಸ್ಎಲ್ವಿ 250 ವ್ಯಾಟ್ ವರೆಗೆ - 1343 - 1393 - 155194.13
ಎಂಎಚ್ಎಲ್ 250 ವ್ಯಾಟ್ ವರೆಗೆ - 2804 - 2804 - 378764.32
ಎಂಎಚ್ಎಲ್ 400 ವ್ಯಾಟ್ ಮತ್ತು ಎಲ್ಇಡಿ - 894 - 1026 - 163616.22
ಎಲ್ಇಡಿ ಸ್ಟ್ರೀಟ್ ಲೈಟ್ 65/72 ವ್ಯಾಟ್ - 722 - 2746 - 286023.36
ಕೋಟ್:
ಈ ವಿಷಯ ಗಮನಕ್ಕೆ ಬಂದಿದೆ. ದಾಖಲೆ ನೀಡಲು ನಗರಸಭೆಗೆ ತಿಳಿಸಿದ್ದೇನೆ. ದಾಖಲೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ.
- ವೈಶಾಲಿ. ಎಂ.ಎಲ್ ಜಿಲ್ಲಾಧಿಕಾರಿ
ಕೋಟ್:
ಬೀದಿ ದೀಪ ನಿರ್ವಹಣೆ ಸಂಬಂಧ ಜರುಗಿದ ಟೆಂಡರ್ ಪ್ರಕ್ರಿಯೆಯನ್ನು ಪರಿಶೀಲಿಸಲಾಗುವುದು.
- ಮಾರುತಿ ಬ್ಯಾಕೋಡ್, ಯೋಜನಾ ನಿರ್ದೇಶಕ, ಗದಗ