ನಗರಸಭೆ ವಿವಿಧ ಯೋಜನೆಗಳಿಗೆ ಭೂಮಿ ಪೂಜೆ ನೆರವೇರಿಸಿದ ಸಚಿವ ಡಾ.ಎಚ್.ಕೆ.ಪಾಟೀಲ

30GDG02
Published on

ಗದಗ: ಗದಗ-ಬೆಟಗೇರಿ ನಗರ ಸಭೆ ವತಿಯಿಂದ ನಗರದ ಮುನ್ಸಿಪಲ್ ಕಾಲೇಜು ಆವರಣದಲ್ಲಿ ಶನಿವಾರದಂದು 44 ಲಕ್ಷ ರೂ.ಗಳ ಅನುದಾನದಲ್ಲಿ 800 ಲೀ ಸಾಮಥ್ರ್ಯದ ಸಕ್ಷನ್ ಕಮ್ ಜೆಟ್ಟಿಂಗ ಯಂತ್ರೋಪಕರಣ ವಾಹನ, 3.60 ಲಕ್ಷ ರೂ ಗಳ ಅನುದಾನದಲ್ಲಿ ಸಾರ್ಟಿಂಗ ಟೇಬಲ್ ಕನ್ವೆಯರ್ ಬೆಲ್ಟಗಳಿಗೆ ರಾಜ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚೆನ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರಾದ ಡಾ.ಎಚ್.ಕೆ.ಪಾಟೀಲ ಅವರು ಚಾಲನೆ ನೀಡಿದರು.  

100  ಲಕ್ಷ ರೂಗಳ ಅನುದಾನದಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣಾ ಘಟಕದಲ್ಲಿ ವಾಹನ ನಿಲುಗಡೆ ಜಾಗೆಯಲ್ಲಿ ಕಂಪೌಂಡ ಗೋಡೆ ಹಾಗೂ ನೆಲ ಹಾಸು ಕಾಮಗಾರಿಗೆ, 11.30 ಲಕ್ಷ ರೂ ಗಳ ಅನುದಾನದಲ್ಲಿ ಮುನ್ಸಿಪಲ್ ಹೈಸ್ಕೂಲನ ಮೇಲ್ಛಾವಣಿ ಅಭಿವೃದ್ಧಿ ಪಡಿಸುವ ಕಾಮಗಾರಿ ಸಚಿವರು ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಗದಗ-ಬೆಟಗೇರಿ ನಗರ ಸಭೆ ಅಧ್ಯಕ್ಷೆ ಉಷಾ ದಾಸರ, ನಗರಸಭೆ ಸದಸ್ಯರು, ಪೌರಾಯುಕ್ತ ಗಂಗಪ್ಪ ಎಂ., ನಗರ ಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಎಚ್.ಎ.ಬಂಡಿವಡ್ಡರ, ನಗರ ಸಭೆ ಪರಿಸರ ಅಧಿಕಾರಿ ಆನಂದ ಬದಿ ಸೇರಿದಂತೆ ಗಣ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net