ವಾರ್ಡುಗಳಲ್ಲಿ ಪೌರ ಕಾರ್ಮಿಕರು ತಮ್ಮ ದೈನಂದಿನ ಕಾರ್ಯಗಳಲ್ಲಿ ಟೈರ್‌ಗಳು, ಟೂಬ್, ಪ್ಲಾಸ್ಟಿಕ್ ತ್ಯಾಜ್ಯಗಳು, ವಿಲೇವಾರಿ ಮಾಡುವುದು, ಮಳೆಗಾಲದಲ್ಲಿ ನಿಂತ ನೀರುಗಳನ್ನು ಸರಾಗವಾಗಿ ಹರಿಯುವಂತೆ ಮಾಡುವುದು, ಚರಂಡಿಗಳನ್ನು ಸ್ವಚ್ಚಗೊಳಿಸುವುದು, ಮತ್ತು ಮೋಡಕಾ ವಸ್ತುಗಳಾದ ಒಡೆದ ಬಕೆಟ್, ಡಬ್ಬಿಗಳು, ಕೊಡಗಳು, ಮತ್ತು ಇತ್ಯಾದಿ ಘನ ತ್ಯಾಜ್ಯ ವಸ್ತುಗಳನ್ನು ಗುಜ್ಜರಿ ಅಂಗಡಿ ಮಾಲಿಕರಿಗೆ ಸೂಕ್ತ ಸ್ಥಳಗಳಲ್ಲಿ ಸ್ಥಳಾಂತರಗೊಳಿಸಲು ಸೂಚಿಸುವುದು. ಮಳೆಗಾಲದಲ್ಲಿ ಸಾರ್ವಜನಿಕರಿಗೆ ಡೆಂಗೀ ಕುರಿತು ನಗರಸಭೆಯ ಕಸದ ವಾಹನದಲ್ಲಿ ಆಡಿಯೋ ಕ್ಲಿಪ್‌ಗಳಲ್ಲಿ ಸಾರ್ವಜನಿಕರಿಗೆ ಮನ ಮುಟ್ಟುವಂತೆ ಪ್ರಚುರ ಪಡಿಸಬೇಕು ಎಂದರು.