ಅನುದಾನದಡಿ ರೂ. 308.00 ಲಕ್ಷಗಳು ಬಿಡುಗಡೆಯಾಗಿದ್ದು, ಅದನ್ನು ಪೂರ್ಣವಾಗಿ ಸರ್ಕಾರದ ಸುತ್ತೋಲೆಯಂತೆ ನೀರು ಸರಬರಾಜು ಹಾಗೂ ಘನತ್ಯಾಜ್ಯ ವಸ್ತು ನಿರ್ವಹಣೆಗಾಗಿ ಬಳಸಿಕೊಳ್ಳಲು ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ.
ಹೊರಗುತ್ತಿಗೆ ಪೌರಕಾರ್ಮಿಕರು/ಲೋಡರ್ಸಗಳು ಹಾಗೂ ಮನೆ ಮನೆ ಕಸ ಸಂಗ್ರಹಿಸುವ ಕಾರ್ಮಿಕ ಸಿಬ್ಬಂದಿಗಳ ಸಂಭಾವನೆಗಾಗಿ ಪ್ರಸಕ್ತ ವರ್ಷ ರೂ. 560.00 ಲಕ್ಷಗಳನ್ನು ಮೀಸಲಿಡಲಾಗಿದೆ. ಹಾಗೂ ಅವರ ಆರೋಗ್ಯ ಸಂರಕ್ಷಣಾ ಸಾಮಾನುಗಳನ್ನು ಖರೀದಿಸಲು ರೂ. 25.00 ಲಕ್ಷಗಳನ್ನು ಮೀಸಲಿಡಲಾಗಿದೆ. ಈ ವರ್ಷ ಘನತ್ಯಾಜ್ಯ ನಿರ್ವಹಣೆಗೆ ರೂ. 1412.28 ಲಕ್ಷಗಳನ್ನು ಮೀಸಲಿಡಲಾಗಿದೆ. ಹಾಗೂ ಬಂಡವಾಳ ಹೂಡಿ ಹೊಸ ತಂತ್ರಜ್ಞಾನದ ಮಶೀನರಿಗಳನ್ನು ಹಾಗೂ ವಿವಿಧ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ರೂ. 252.44 ಲಕ್ಷಗಳನ್ನು ಘನತಾಜ್ಯ ನಿರ್ವಹಣೆ ಕಾರ್ಯಕ್ರಮಕ್ಕಾಗಿ ಮೀಸಲಿಡಲಾಗಿದೆ.
ಕುಡಿಯುವ ನೀರು ಹಾಗೂ ಒಳಚರಂಡಿ: ಮಾನವನಿಗೆ ಅತೀ ಮುಖ್ಯವಾಗಿ ಬೇಕಾಗಿರುವುದು ಶುದ್ದ ನೀರು. ಈ ಶುದ್ಧ ಕುಡಿಯುವ ನೀರು ಒದಗಿಸುವ ಕಾರ್ಯಕ್ಕಾಗಿ ಈ ವರ್ಷ ವಿದ್ಯುತ ಬಿಲ್ಲ ಹೊರತುಪಡಿಸಿ ರೂ. 280.00 ಲಕ್ಷಗಳನ್ನು ವೆಚ್ಚಕ್ಕಾಗಿ ಈ ಆಯ-ವ್ಯಯದಲ್ಲಿ ಅವಕಾಶ ಮಾಡಿಕೊಳ್ಳಲಾಗಿದೆ. ಹಾಗೂ ಸ್ಥಾವರ ಯಂತ್ರೋಪಕರಣಗಳAತಹ ಬಂಡವಾಳ ವೆಚ್ಚಕ್ಕಾಗಿ ರೂ. 676.18 ಲಕ್ಷಗಳನ್ನು ವೆಚ್ಚ ಮಾಡಲು ಉದ್ದೇಶಿಸಲಾಗಿದೆ. ಇದರೊಂದಿಗೆ ರೂ. 1414.00 ಲಕ್ಷಗಳ ವಿದ್ಯುತ ಬಿಲ್ಲ ಪಾವತಿಸಬೇಕಾಗಬಹುದೆಂದು ಅಂದಾಜಿಸಲಾಗಿದೆ.ಒಳಚರAಡಿ ಯೋಜನೆಯ ನಿರ್ವಹಣೆಗಾಗಿ ರೂ. 100.00 ಲಕ್ಷಗಳನ್ನು ಹಾಗೂ ನಿರ್ಮಾಣಕ್ಕಾಗಿ ರೂ. 265.18 ಲಕ್ಷಗಳನ್ನು ಪ್ರಸಕ್ತ ಆಯವ್ಯಯದಲ್ಲಿ ಮೀಸಲಿಡಲಾಗಿದೆ.
ಉದ್ಯಾನವನ ಹಾಗೂ ಹಸರೀಕರಣ: ಈ ಉದ್ಯಾನವನ ನಿರ್ವಹಣೆ ಕಾರ್ಯಕ್ರಮಕ್ಕಾಗಿ ರೂ. 54.00 ಲಕ್ಷಗಳನ್ನು ನಿರ್ವಹಣೆಗಾಗಿ ವ್ಯಯಿಸುವ ಅದಲ್ಲದೆ ಸಾಮಾಜಿಕ ಅರಣ್ಯಿಕರಣದಡಿ ಗಿಡ ನಡುವ ಕಾರ್ಯಕ್ರಮಕ್ಕಾಗಿ ಸುಮಾರು ರೂ. 6.00 ಲಕ್ಷಗಳನ್ನು ವೆಚ್ಚಗಾಗಿ ಅವಕಾಶ ಮಾಡಿಕೊಳ್ಳಲಾಗಿದ್ದು, ಇದರಿಂದಾಗಿ ನಗರದ ಸೌಂದರ್ಯ ಹಾಗೂ ಹಸಿರು ಇಮ್ಮಡಿಯಾಗುವ ಭರವಸೆ ನಮಗಿದೆ.
ಸಾರ್ವಜನಿಕ ಸೌಕರ್ಯಗಳು: ನಗರಸಭೆಯ ವ್ಯಾಪ್ತಿಗೆ ಬರುವಂತಹ ರುದ್ರಭೂಮಿಗಳಲ್ಲಿ ಆದ್ಯತೆ ಮೇರೆಗೆ ಪರಿಸರ ಸ್ನೇಹಿ ವಿದ್ಯುತ್/ಚಿತಾಗಾರಗಳನ್ನು ಅಳವಡಿಸಲು ಕಾರ್ಯಕ್ರಮವನ್ನು ಮುಂದುವರೆಸಿದೆ.ಸ್ಮಶಾನ ಮತ್ತು ಶವ ಸಂಸ್ಕಾರ ಸ್ಥಳಗಳ ನಿರ್ವಹಣೆ ರೂ. 24.50 ಲಕ್ಷಗಳನ್ನು ಮೀಸಲಿಡಲಾಗಿದೆ. ಹಾಗೂ ಭಾಗಶಃ ಪೂರ್ಣಗೊಂಡ ಚಿತಾಗಾರಗಳಿಗೆ ರೂ. 109.89 ಲಕ್ಷಗಳನ್ನು ಪೂರ್ಣಗೊಳಿಸಲು ಮೀಸಲಿಡಲಾಗಿದೆ.
ಈಜುಗೊಳ ನಿರ್ವಹರ್ಣೆಗಾಗಿ ರೂ. 10.00 ಲಕ್ಷಗಳನ್ನು ಹಾಗೂ ಕಾಮಗಾರಿ ಬಾಕಿ ಉಳಿದ ಈಜುಗೊಳವನ್ನು ಪೂರ್ಣಗೊಳಿಸಲು ರೂ. 85.00 ಲಕ್ಷಗಳನ್ನು ಮೀಸಲಿಡಿಸಲಾಗಿದೆ.ಇನ್ನಿತರ ಸಾರ್ವಜನಿಕ ನಾಗರಿಕ ಸೌಲಭ್ಯಗಳನ್ನು ಒದಗಿಸಲು ರೂ. 8.00 ಲಕ್ಷಗಳನ್ನು ಮೀಸಲಿಡಿಸಲಾಗಿದೆ. ಇಂದಿರಾ ಕ್ಯಾಂಟಿನ್ ಹಾಗೂ ಇನ್ನಿತರ ಸಾರ್ವಜನಿಕ ಸೌಲಭ್ಯಕ್ಕಾಗಿ ರೂ. 71.50 ಲಕ್ಷಗಳನ್ನು ಮೀಸಲಿಡಲಾಗಿದೆ.ಗದಗ ಬೆಟಗೇರಿ ನಗರಸಭೆ ವ್ಯಾಪ್ತಿಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೃತ್ತಿನಿರತ ಪತ್ರಕರ್ತರ ಮಕ್ಕಳ ಶ್ರೇಯೊಭಿವೃದ್ಧಿಗಾಗಿ ರೂ. 5.00 ಲಕ್ಷಗಳನ್ನು ವಂತಿಕೆಯಾಗಿ ನೀಡಲು ಅವಕಾಶ ಮಾಡಿಕೊಳ್ಳಲಾಗಿದ್ದು, ಅದಕ್ಕೆ ಮಂಜೂರಿ ಬಯಸಿದೆ.
ಶಿಕ್ಷಣ ಮತ್ತು ಸಂಸ್ಕೃತಿ: ಶಿಕ್ಷಣ ಕ್ಷೇತ್ರಕ್ಕೂ ಸಹ ಈ ಬಾರಿ ಒತ್ತು ನೀಡಿ ನಮ್ಮ ನಗರಸಭೆಯ ಆಧೀನದ ಮುನ್ಸಿಪಲ್ ಹೈ-ಸ್ಕೂಲ್ ನಿರ್ವಹಣೆ ಹಾಗೂ ದುರಸ್ಥಿಗಾಗಿ ರೂ. 6.00 ಲಕ್ಷಗಳನ್ನು ಕಾಯ್ದಿರಿಸಿದೆ. ಹೆಚ್ಚು ಅಂಕಗಳಿಸುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನಾಗಿ ನೀಡಲು ರೂ. 60.00 ಸಾವಿರಗಳನ್ನು ಹಾಗೂ ಕ್ರೀಡಾಕೂಟ ಏರ್ಪಡಿಸಲು ರೂ. 55.00 ಸಾವಿರಗಳನ್ನು ಮೀಸಲಿಡಲಾಗಿದೆ.
ಎಸ್.ಸಿ/ಎಸ್.ಟಿ ಹಾಗೂ ಹಿಂದುಳಿದವರ ಅಭಿವೃದ್ಧಿ: ಎಸ್.ಸಿ/ಎಸ್‌ಟಿ ಜನಾಂಗದ, ಆರ್ಥಿಕವಾಗಿ ಹಿಂದುಳಿದವರ ಹಾಗೂ ವಿಕಲ ಚೇತನವುಳ್ಳವರ ಆರ್ಥಿಕ ಸ್ವಾವಲಂಬನೆ ಹಾಗೂ ಅಭಿವೃದ್ದಿಗಾಗಿ ಶೇ%. 34.35% ರಷ್ಟು ಸ್ವೀಕೃತಿಯನ್ನು ಈ ವರ್ಷವೂ ಮೀಸಲಿಡಲಾಗಿದೆ. ಅವರಿಗಾಗಿ ರೂ. 146.55 ಲಕ್ಷಗಳನ್ನು ವ್ಯಯಿಸುವ ಗುರಿ ಹೊಂದಲಾಗಿದೆ. ಈ ಕಾರ್ಯಕ್ರದಡಿ ನಗರಸಭೆಯಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರ ಆರೋಗ್ಯ ಹಾಗೂ ಅವರ ನೈರ್ಮಲ್ಯತೆಗಾಗಿ ಆರೋಗ್ಯ ಪರಿಕರ ಒದಗಿಸಲು ಹಾಗೂ ಅವರ ಆರೋಗ್ಯ ತಪಾಸಣೆಯನ್ನು ಆದ್ಯತೆ ಮೇಲೆ ಪರಿಗಣಿಸಿ ವೆಚ್ಚಕ್ಕಾಗಿ ರೂ. 5.00 ಲಕ್ಷಗಳ ಹಣವನ್ನು ಮೀಸಲಿಡಲಾಗಿದೆ.
ಸ್ವಚ್ಛತೆ: :ನಮ್ಮ ನಗರವು ಸುಂದರ, ಸ್ವಚ್ಛ ಹಾಗೂ ನೈರ್ಮಲ್ಯ ನಗರವಾಗಿರುವುದನ್ನು ಉತ್ಕೃಷ್ಟಗೊಳಿಸಲು ಹಾಗೂ ನೈರ್ಮಲ್ಯವನ್ನು ಹೆಚ್ಚಿಸಲು ಸಾರ್ವಜನಿಕ ಹಾಗೂ ವೈಯಕ್ತಿಕ ಶೌಚಾಲಯ ಕಾಮಗಾರಿಗಳನ್ನು ಕೈಗೊಳ್ಳಲು ಸ್ವಚ್ಚ ಭಾರತ ಎಸ್.ಬಿ.ಎಂ-2.0 ಅನುದಾನ ರೂ. 29.70 ಲಕ್ಷ ನಿರೀಕ್ಷಿಸಿ ಕಾಮಗಾರಿಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
2025-26 ನೇ ಸಾಲಿನ ಆಯವ್ಯಯದಲ್ಲಿ ಅಳವಡಿಸಿಕೊಂಡಿರುವ ಕಾರ್ಯಕ್ರಮಗಳು : ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ನಾಗರೀಕರ ಬಹುದಿನಗಳ ಬೇಡಿಕೆಯಾದ ಹಕ್ಕು ಪತ್ರಗಳ ವಿತರಣೆ ಬಗ್ಗೆ ಸರ್ಕಾರದೊಂದಿಗೆ ಪತ್ರ ವ್ಯವಹರಿಸಿ ಅತೀ ಕಡಿಮೆಯ ವಂತಿಕೆ ಫಲಾನುಭವಿಗಳಿಂದ ಪಡೆದು ಹಕ್ಕು ಪತ್ರ ವಿತರಿಸುವ/ಮಾಲೀಕತ್ವ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಗರಸಭೆಯ ಮಾಲ್ಕಿಕತ್ವದ ವಾಣಿಜ್ಯ ಮಳಿಗೆಗಳನ್ನು ಸರ್ಕಾರದ ಸುತ್ತೋಲೆಯಂತೆ ದರ ನಿಗದಿಸಿ ಬಹಿರಂಗ ಹರಾಜು ಮಾಡುವ ಕಾರ್ಯವನ್ನು ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ. ನಗರಸಭೆಯ ಮಾಲೀಕತ್ವದ ಅವಧಿ ಮುಗಿದಿರುವ ಲೀಜ್ ಆಸ್ತಿಗಳನ್ನು ಹಿಂಪಡೆಯಲು/ಮುAದಿನ ಕಾನೂನು ಕ್ರಮ ಕೈಗೊಳ್ಳಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಅವುಗಳಿಂದ ಸಹ ಆದಾಯ ಹೆಚ್ಚಿಸಲು (ಪಿಪಿಪಿ) PPP/ ಇನ್ನಿತರ ಯೋಜನೆ ಮುಖಾಂತರ ಕಾರ್ಯಗತಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.
ನಗರಸಭೆಯ ವ್ಯಾಪ್ತಿಯ ಎಸ್.ಸಿಎಸ್.ಪಿ/ಟಿ.ಎಸ್.ಪಿ ಅನುದಾನದಲ್ಲಿ ಪ.ಜಾ ಹಾಗೂ ಪ.ಪಂಗಡದ ಪ್ರತಿಭಾವಂತ ತಲಾ 02 ವಿದ್ಯಾರ್ಥಿಗಳಿಗೆ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಸರ್ಕಾರದ ಸುತ್ತೋಲೆಯ ವ್ಯಾಪ್ತಿಯೊಳಗೆ ಬಿ.ಇ/ಎಂ.ಬಿ.ಬಿ.ಎಸ್/ವೃತ್ತಿಪರ ಸ್ನಾತಕೋತ್ತರ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳ ಒಂದು ವರ್ಷದ ಪೂರ್ಣ ಶಿಕ್ಷಣ ಶುಲ್ಕ ಭರಿಸುವ ಕಾರ್ಯಕ್ರಮವನ್ನು 2025-26 ನೇ ಸಾಲಿನಲ್ಲಿ ಹಾಕಿಕೊಳ್ಳಲಾಗಿದೆ.
ಕುಡಿಯುವ ನೀರಿನ 24/7 ನೀರು ಸರಬರಾಜು ವ್ಯವಸ್ಥೆಗೆ ಪರ್ಯಾಯವಾಗಿ ಕ್ಲಿಷ್ಟಕರ ಸಮಯದಲ್ಲಿ ಬೋರವೆಲ್ ಮುಖಾಂತರ ನೀರು ಸರಬರಾಜು ವ್ಯವಸ್ಥೆ ಮಾಡಲು ಈಗಾಗಲೇ ಅಸ್ತಿತ್ವದಲ್ಲಿರುವ ಬೋರವೆಲ್‌ಗಳ ನಿರ್ವಹಣೆ ಹಾಗೂ ದುರಸ್ಥಿಗಾಗಿ ಆಯ-ವ್ಯಯದಲ್ಲಿ ಸಾಕಷ್ಟು ಅನುದಾನವನ್ನು ಮೀಸಲಿಡಲಾಗಿದೆ. ಒಳಚರಂಡಿ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ನಿರ್ವಹಿಸಲು ಅವಶ್ಯಕ ಪ್ರತಿ ಮನೆಗೆ ಒಳಚರಂಡಿ ಜೋಡಣೆಯಾಗಿರುವ ಬಗ್ಗೆ ಖಚಿತಪಡಿಸಿಕೊಂಡು ಜೋಡಣೆಯಾಗದಿದ್ದಲ್ಲಿ ಅವುಗಳನ್ನು ಜೋಡಿಸುವ ಕಾರ್ಯಕ್ರಮವನ್ನು ಆಸಕ್ತ ಏಜನ್ಸಿಗಳೊಂದಿಗೆ ಒಪ್ಪಂದದ ಆಧಾರದ ಮೇಲೆ ವಸೂಲಾತಿಯೊಂದಿಗೆ ನಿರ್ವಹಣೆ ಮಾಡಲು ಏಜನ್ಸಿಗಳನ್ನು ನೇಮಕ ಮಾಡಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ನಗರದ ಆರೋಗ್ಯ ಹಾಗೂ ನೈರ್ಮಲ್ಯ ಸುಧಾರಿಸುವ ನಿಟ್ಟಿನಲ್ಲಿ ಈಗಾಗಲೇ ಪ್ರತಿ ದಿನ ಮನೆ ಮನೆ ಕಸ ಸಂಗ್ರಹದ ವ್ಯವಸ್ಥೆಯನ್ನು ಬದಲಾಯಿಸಿ ಹಸಿಕಸ ಸಂಗ್ರಹಿಸುವ ದಿನ ಹಾಗೂ ಒಣಕಸ ಸಂಗ್ರಹಿಸುವ ದಿನಗಳನ್ನು ಘೋಷಿಸಿ ಅಂತಹ ದಿನಗಳಂದು ಹಸಿಕಸ ಮಾತ್ರ ಹಾಗೂ ಒಣಕಸ ಮಾತ್ರಗಳನ್ನು ಸಂಗ್ರಹಿಸುವ ಕಾರ್ಯಕ್ರಮ ಮಾಡಿಕೊಳ್ಳಲಾಗಿದ್ದು, ಶೀಘ್ರದಲ್ಲೇ ಕಾರ್ಯಗತಗೊಳಿಸಲಾಗುವುದು.ನಗರಸಭೆಯಲ್ಲಿ ಸೇವೆ ಪಡೆಯಲು ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಪ್ರತಿ ಶಾಖೆಗೆ ಬಯೋಮೆಟ್ರಿಕ ಆಧಾರಿತ ಪ್ರವೇಶಾತಿಯನ್ನು ಕಡ್ಡಾಯಗೊಳಿಸಿ ಸಾರ್ವಜನಿಕದ ಸಂಪರ್ಕದ ಸಮಯ ಹೊರತುಪಡಿಸಿ ಇನ್ನುಳಿದ ಸಮಯದಲ್ಲಿ ಇನ್ನಿತರರಿಗೆ ಪ್ರವೇಶಾತಿಯುನ್ನು ನಿಷೇಧಿಸಲು ಸೂಕ್ತ ವ್ಯವಸ್ಥೆ ಮಾಡಿ ಸಾರ್ವಜನಿಕರಿಗಾಗುವ ತೊಂದರೆ ಹಾಗೂ ಮಧ್ಯವರ್ತಿಗಳ ಹಾವಳಿಯನ್ನು ತಡೆಯಲು ಮತ್ತು ಸಾರ್ವಜನಿಕರಿಗೆ ನಿಗದಿತ ಸಮಯದಲ್ಲಿ ಅವರ ಕೆಲಸ ಕಾರ್ಯಗಳನ್ನು ಪೂರೈಸಲು ಸೂಕ್ತ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ .
ಈ ಸಂದರ್ಭದಲ್ಲಿ ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ( ಪರಿಸರ) ಆನಂದ ಬದಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (ಸಿವಿಲ್) ಬಂಡಿವಡ್ಡರ, ಲೆಕ್ಕಾಧೀಕ್ಷಕರಾದ ಟಿ.ಎಚ್. ದ್ಯಾವನೂರ ಹಾಗೂ ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.