ನಗರಸಭೆ ಚುನಾವಣೆ! ನ್ಯಾಯಾಂಗ ನಿಂಧನೆ ಪ್ರಕರಣ

IMG-20240809-WA0002
Published on

ಡಿಸಿ, ಎಸಿ ಹಾಗೂ ಪೌರಾಯುಕ್ತರಿಗೆ ವಿವಿರಣೆ ಕೇಳಿ ನೋಟಿಸ್​

ವಿಜಯವಾಣಿ ಸುದ್ದಿಜಾಲ ಗದಗ

ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಮುಂದೂಡುವಂತೆ ೆ. 28ರಂದು ಹೈಕೋರ್ಟ್​ ನೀಡಿದ್ದ ಆದೇಶದ ನಡುವೆಯೂ ಚುನಾವಣೆ ಜರುಗಿಸಿ, ನ್ಯಾಯಾಂಗ ನಿಂಧನೆಗೆ ಒಳಗಾಗಿದ್ದ ಅಧಿಕಾರಿಗಳಿಗೆ ವಿವರಣೆ ಕೇಳಿ ಧಾರವಾಡ ಹೈಕೋರ್ಟ ಪೀಠ ನೋಟಿಸ್​ ನೀಡಿದೆ.

ಬುಧವಾರ ಅಜಿರ್ಯ ವಿಚಾರಣೆ ನಡೆಸಿದ ಪೀಠವು, ೆ.28 ರಂದು ಚುನಾವಣೆ ಮುಂದೂಡಿದ ಸಂದರ್ಭದಲ್ಲಿ ಗದಗ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆ ಜರುಗಿದ ಬಗ್ಗೆ ಕದಾರ ಪರ ವಕೀಲರಿಂದ ಮಾಹಿತಿ ಪಡೆಯಿತು. ಚುನಾವಣಾ ಪ್ರಕ್ರಿಯೆ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಕೋರ್ಟ್​ ಚುನಾವಣೆ ನಡೆಸಿದ ಕುರಿತು ವಿವರಣೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸಿ.ಎನ್​. ಶ್ರೀಧರ, ಉಪವಿಭಾಗಾಧಿಕಾರಿ(ಚುನಾವಣಾ ಅಧಿಕಾರಿ) ಎಂ ಗಂಗಪ್ಪ ಹಾಗೂ ನೌಗರಸಭೆ ಪೌರಾಯುಕ್ತ ಆರ್​. ಪವಾರ ಅವರಿಗೆ ನೋಟೀಸ್​ ಜಾರಿ ಮಾಡಿದೆ. ಚುನಾವಣೆ ನಡೆಸಿದ್ದ ಕುರಿತು ಅಫಿಡಿವಿಟ್​ ಮೂಲಕ ಅಧಿಕಾರಿಗಳು ಕೋರ್ಟಗೆ ತಮ್ಮ ಹೇಳಿಕೆಯನ್ನು ಸಲ್ಲಿಸಬೇಕಿದೆ.

ಒಟ್ಟಿಗೆ  ವಿಚಾರಣೆ:

ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಸದಸ್ಯೆ ಉಷಾ ದಾಸರ, ಸದಸ್ಯರಾದ ಅನೀಲ ಅಬ್ಬಿಗೇರಿ, ಗೊಳಪ್ಪ ಮುಷಿಗೇರಿ ಅವರ ಸದಸ್ಯತ್ವವನ್ನು ಪ್ರಾದೇಶಿಕ ಆಯುಕ್ತರು ಎರಡನೇ ಬಾರಿ ಅನರ್ಹತೆ ಮಾಡಿ ಆದೇಶಿಸಿದ್ದರು. ಈ ಅನರ್ಹತೆ ಆದೇಶ ರದ್ದು ಕೋರಿ ಮುವರು ಸದಸ್ಯರು ಹೈಕೋರ್ಟ ಮೆಟ್ಟಿಲೇರಿದ್ದರು. ಏತನ್ಮಧ್ಯೆ, ಹೈಕೋರ್ಟ ಆದೇಶದ ನಡುವೆಯೂ ಚುನಾವಣೆ ಜರುಗಿಸಿ ನ್ಯಾಯಾಂಗ ನಿಂಧನೆಗೆ ಒಳಗಾಗಿದ್ದ ವಿಚಾರಣೆಯನ್ನು ಮಾ. 5ಕ್ಕೆ ಹೈಕೋರ್ಟ ಮೂಂದೂಡಿತ್ತು. ಹಾಗಾಗಿ ಸದಸ್ಯರ ಅಜಿರ್ ಮತ್ತು ನ್ಯಾಯಾಂಗ ನಿಂಧನೆ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ ಬುಧವಾರ ಒಟ್ಟಿಗೆ ವಿಚಾರಣೆ ನಡೆಸಿದೆ. ಸರ್ಕಾರದ ಪರ ವಕೀಲರು ಸರಿಯಾದ ಸಮಯದಲ್ಲಿ ಚುನಾವಣೆ ಮುಂದೂಡಿದ ಆದೇಶವನ್ನು ಚುನಾವಣಾ ಅಧಿಕಾರಿಗಳಿಗೆ ಕಳುಹಿಸಿದಾಗಿ ಕೋರ್ಟ ಗೆ ತಿಳಿಸಿದ್ದಾರೆ. ಈ ಹಿನ್ನೆಲೆ ವಿವಿರಣೆ ಕೇಳಿ ಕೋರ್ಟ ಅಧಿಕಾರಿಗಳಿಗೆ ನೋಟಿಸ್​ ನೀಡಿದೆ.

Eeb .28ರಂದು ಏನಾಗಿತ್ತು.

ಮಧ್ಯಾಹ್ನ 2 ಗಂಟೆಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣಾ ಪ್ರಕ್ರಿಯೆ ಆರಂಭಕ್ಕೆ ಸಮಯ ನಿಗದಿ ಆಗಿತ್ತು. ಈ ವೇಳೆ ಬಿಜೆಪಿ ಸದಸ್ಯರು ಚುನಾವಣಾ ಮುಂದೂಡುವಂತೆ ಸಲ್ಲಿಸಿದ ಅಜಿರ್ ೆ. 28ರಂದು ಮಧ್ಯಾಹ್ನ 1ಗಂಟೆಗೆ ಹೈಕೋರ್ಟ್​ ನಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗಿತ್ತು. 1.30ಕ್ಕೆ ಚುನಾವಣೆ ಮುಂದೂಡುವಂತೆ ಕೋರ್ಟ ಆದೇಶಿಸಿತು. ಈ ನಡುವೆ ಹೈಕೋರ್ಟ್​ ಆದೇಶ ಪ್ರತಿ ಚುನಾವಣಾ ಅಧಿಕಾರಿಗಳ ಕೈ ಸೇರದ ಹಿನ್ನೆಲೆ ಚುನಾವಣೆ ಜರುಗಿತು. ಹೈಕೋರ್ಟ ಆದೇಶ ನೀಡಿದ ನಂತರವೂ ಚುನಾವಣೆ ನಡೆದಿರುವ ಕುರಿತು ಸರ್ಕಾರದ ಪರ ವಕೀಲ ಅಡ್ವೋಕೇಟ್​ ಜನರಲ್​ ಹೈಕೋರ್ಟಗೆ ಮಾಹಿತಿ ನೀಡಿದ್ದರು. ಕೋರ್ಟ್​ ಆದೇಶ ಮೀರಿದ್ದ ಚುನಾವಣಾ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬಹುದು ಎಂದು ಅಡ್ವೋಕೇಟ್​ ಜನರಲ್​ ಅವರು ಕೋರ್ಟಗೆ ಮನವರಿಕೆ ಮಾಡಿಕೊಟ್ಟಿದ್ದರು. ಈ ವಿಚಾರಣೆಯೂ ಮಾ.5ಕ್ಕೆ ಮುಂದೂಡಲಾಗಿತ್ತು.

ಮುಂದೆನಾಗಬಹುದು:

ಹೈಕೋರ್ಟ ಆದೇಶದ ಪ್ರತಿ ಸೂಕ್ತ ಸಮಯದಲ್ಲಿ ಕೈ ಸೇರದ ಹಿನ್ನೆಲೆ ಚುನಾವಣೆ ಡೆಸಿದ್ದಾಗಿ ಚುನಾವಣಾ ಅಧಿಕಾರಿ ಎಂ ಗಂಗಪ್ಪ ಅವರು ಈಗಾಗಲೇ ಸ್ಪಷ್ಟಣೆ ನೀಡಿದ್ದಾರೆ. ಹೈಕೋರ್ಟ ಪ್ರತಿ ಕೈಸೇರಿದ ನಂತರ ನ್ಯಾಯಾಂಗ ನಿಂಧನೆ ಬೀತಿ ಎದುರಿಸುತ್ತಿರುವ ಚುನಾವಾಣಾಧಿಕಾರಿಗಳು ಈಗಾಗಲೇ ನೂತನ ಅಧ್ಯಕ್ಷ ಕೃಷ್ಣ ಪರಾಪೂರೆ ಹಾಗೂ ಉಪಾಧ್ಯೆ ಶಕುಂತಲಾ ಅಕ್ಕಿ ಕಾರ್ಯಭಾರಕ್ಕೆ ತಡೆ ನೀಡಿ ತಿಳುವಳಿ ಪತ್ರ ನೀಡಿದ್ದಾರೆ. ೆ.28ರಂದೇ ಈ ಆದೇಶ ಹೊರ ಬಿದ್ದಿದೆ. ನೂತನ ಅಧ್ಯಕ್ಷ, ಉಪಾಧ್ಯಕ್ಷರ ಕುರಿತು ಹೊರಡಿಸಬೇಕಿದ್ದ ಸರ್ಕಾರದ ಗೆಜೆಟ್​, ಚುನಾವಣಾ ನಡಾವಗಳಿಗೆ ಜಿಲ್ಲಾಧಿಕಾರಿಗಳ ಸಹಿ ಮಾಡುವ ಪ್ರಕ್ರಿಯೆ ಹಾಗೂ ನಗರಸಭೆಗೆ ಆಡಳಿತಾಧಿಕಾರಿ ಆಗಿರುವ ಜಿಲ್ಲಾಧಿಕಾರಿಗಳಿಂದ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಪ್ರಕ್ರಿಯೆಗೆ ಅಧಿಕಾರಿಗಳು ತಡೆ ನೀಡಿದ್ದಾರೆ. ಇದೇ ಅಂಶಗಳನ್ನು ಅಫಿಡಿವಿಟ್​ ಮೂಲಕ ಕೋರ್ಟ ನೀಡಿದ್ದ ವಿವರಣೆ ಕೇಳಿ ನೋಟಿಸ್​ ಗೆ ಉತ್ತರಿಸಬಹುದು ಎನ್ನಲಾಗಿದೆ. ಕೋರ್ಟ ನೀಡಿದ್ದ ನೋಟಿಸ್​ ಪ್ರತಿ ಇನ್ನೂ ಅಧಿಕಾರಿಗಳ ಕೈಸೇರದ ಹಿನ್ನೆಲೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ್ದಾರೆ.

ಕೋಟ್​:

ನ್ಯಾಯಾಲಯದಲ್ಲಿ ಆದೇಶದಿಂದ ಮೊದಲ ಹಂತದಲ್ಲಿ ಜಯ ಸಿಕ್ಕಂತಾಗಿದೆ. ನ್ಯಾಯಾಲಯ ಆದೇಶಕ್ಕೆ ಎಲ್ಲರು ತಲೆ ಬಾಗಬೇಕು. ಆದರೆ, ಗದಗ ನಲ್ಲಿ ನ್ಯಾಯಾಲಯ ಆದೇಶವನ್ನೇ ದಿಕ್ಕರಿಸಿ ಚುನಾವಣಾ ಪ್ರಕ್ರಿಯೆ ಜರುಗಿದ್ದು ಆಶ್ಚರ್ಯ ತಂದಿದೆ.

ಶಿವು ಹಿರೇಮನಿ ಪಾಟೀಲ, ಮಾಜಿ ನಗರಸಭೆ ಸದಸ್ಯ, ಬಿಜೆಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net