ಕಾಂಗ್ರೆಸ್ ಹೆಣೆದ ಚಕ್ರವ್ಯೂಹದಲ್ಲಿ ಬಿಜೆಪಿ ಸದಸ್ಯರು. ಸದಸ್ಯತ್ವ ಸ್ಥಾನದಿಂದ ಅಮಾನತ್ತು

20250228_062135-COLLAGE
Published on

ವಿಜಯವಾಣಿ ಸುದ್ದಿಜಾಲ ಗದಗ ನಗರಸಭೆ ಅಧಿಕಾರ ಹಿಡಿಯಲು ಕಾಂಗ್ರೆಸ್ ಬಿಜೆಪಿ ನಡುವಿನ ಹಾವು ಏಣಿ ಆಟದಲ್ಲಿ ಕಾಂಗ್ರೆಸ್ ಮುಂದಡಿ ಇಟ್ಟಿದೆ. ಗುರುವಾರ ಸಂಜೆ ವರೆಗೂ ನಗುಮೊಗದಲ್ಲಿದ್ದ ಬಿಜೆಪಿ ಸದಸ್ಯರು ರಾತ್ರಿ 10.30 ನಂತರ ಮೊಗದಲ್ಲಿ ಉತ್ಸಾಹ ಕಾಣಲಿಲ್ಲ. ಹೈಕೋರ್ಟ್ ಆದೇಶದಂತೆ ದಾಖಲೆಗಳನ್ನು ಪರಿಶೀಲಿಸಿ, ಸುಪ್ರೀಂ ಕೋರ್ಟನಲ್ಲಿನ ಪ್ರಕರಣಗಳ ಆಧಾರದ ಮೇಲೆ ಗುರುವಾರ ರಾತ್ರಿ 10.30 ರ ವೇಳೆ ಮತ್ತೇ ಮೂವರು ಬಿಜೆಪಿ ಸದಸ್ಯರನ್ನು  ಪ್ರಾದೇಶಿಕ ಆಯುಕ್ತರು ಸದಸ್ಯತ್ವ ಸ್ಥಾನದಿಂದ ಅಮಾನತ್ತು ಮಾಡಿ ಆದೇಶಿಸಿದ್ದಾರೆ. ಗುರುವಾರ ಹೈಕೋರ್ಟ್ ವಿಭಾಗೀಯ ದ್ವೀಸದಸ್ಯ ಪೀಠದಲ್ಲಿ ನಡೆದ ವಿಚಾರಣೆಯಲ್ಲಿ "ಸುಪ್ರೀಂ ಕೋರ್ಟಿನಲ್ಲಿ ಇಂತದ್ದೆ ಪ್ರಕರಣಗಳ reference ಪಡೆದು ಆದೇಶಿಸಲು (ಪ್ರಾದೇಶಿಕ ಆಯುಕ್ತರ ವಿವೇಚನೆ) ಹೈಕೋರ್ಟ್ ಆದೇಶ ನೀಡಿತ್ತು. ಹೀಗಾಗಿ, ಏಕ ಸದಸ್ಯ ಪೀಠ ಈ ಹಿಂದೆ ನೀಡಿದ್ದ ಅಮಾನತು ರದ್ದು ಆದೇಶದ ಊರ್ಜಿತವಾಗಿತ್ತು. ಹೈಕೋರ್ಟ್ ಆದೇಶದ ನಂತರ ಆದೇಶದ ಅಂಶಗಳ ಆಧಾತದಲ್ಲಿ ಪ್ರಾದೇಶಿಕ ಆಯುಕ್ತರು ಇಮೇಲ್ ಮೂಲಕ ಸುಪ್ರೀಂ ಕೋರ್ಟ್ ಪ್ರಕರಣಗಳ ದಾಖಲೆಗಳನ್ನು ಪಡೆದು ಪರಿಶೀಲಿಸಿದ್ದಾರೆ.

ಅಮಾನತು ಆದೇಶದಲ್ಲಿ ತಿಳಿಸಿರುವಂತೆ:

ದಿನಾಂಕ:24-02-2025 ರಂದು ಸಂಜೆ 05:00 ಗಂಟೆಯೊಳಗೆ ಮೂಲ ಮೈನುಟ್ ಪುಸ್ತಕದ ದೃಢಿಕೃತ ಪ್ರತಿಗಳನ್ನು ಪೌರಾಯುಕ್ತರು, ನಗರಸಭೆ, ಗದಗ-ಬೆಟಗೇರಿ, ಗದಗ ಇವರು ಆಪಾದಿತರಿಗೆ ಒದಗಿಸುವಂತೆ ಮಾನ್ಯ ನ್ಯಾಯಾಲಯವು ನಿರ್ದೇಶನ ನೀಡಿದ್ದು ಇರುತ್ತದೆ. ಆಪಾದಿತರು ಸಲ್ಲಿಸಿದ ಮನವಿಯಂತೆ ಪೌರಾಯುಕ್ತರು, ನಗರಸಭೆ, ಗದಗ-ಬೆಟಗೇರಿ ಮತ್ತು ಶ್ರೀ ಪರಶುರಾಮ, ವ್ಯವಸ್ಥಾಪಕರು ಇವರಗಳು ದೃಢಿಕೃತ ಪ್ರತಿಗಳನ್ನು ಸಿದ್ಧಪಡಿಸಿ ಸದರೀ ದೃಢಿಕೃತ ಪ್ರತಿಗಳನ್ನು ಮಾನ್ಯ ಉಚ್ಚ ನ್ಯಾಯಾಲಯ, ಧಾರವಾಡದ ಆವರಣದಲ್ಲಿಯೇ ಆಪಾದಿತರಿಗೆ ನೀಡಲು ಸದರಿ ಅಧಿಕಾರಿಗಳು ಆಪಾದಿತರ ಬಳಿ ಹೋಗಿರುತ್ತಾರೆ. ದೃಢಿಕೃತ ಪ್ರತಿಗಳನ್ನು ನೀಡಲು ಜಾರಿ ಮಾಡುವ ಮುಖ ಪುಟದ (Intimation Letter) ಕೊನೆಯ 02 ಪ್ಯಾರಾವನ್ನು ತೆಗೆದುಹಾಕಿದರೆ ಮಾತ್ರ ಸ್ವೀಕರಿಸುವುದಾಗಿ ಆಪಾದಿತರು ಹೇಳಿ, ಅವುಗಳನ್ನು ಸ್ವೀಕರಿಸಿರುವುದಿಲ್ಲ ಅಂತಾ ಸದರಿ ಅಧಿಕಾರಿಗಳು ಮೌಖಿಕವಾಗಿ ಹೇಳಿರುತ್ತಾರೆ. ತದನಂತರ ಸದರಿ ದೃಢಿಕೃತ ಪ್ರತಿಗಳನ್ನು ಪೌರಾಯುಕ್ತರು, ನಗರಸಭೆ, ಗದಗ-ಬೆಟಗೇರಿ ಇವರು ಆಪಾದಿತರ ಪರ ನ್ಯಾಯವಾದಿಗಳ 2- 2 patilawchambers@gmail.com ನೇದಕ್ಕೆ ದಿನಾಂಕ:25-02-2025 ರಂದು ಬೆಳಗ್ಗೆ, 11:24 ಗಂಟೆಗೆ ಇ-ಮೇಲ್ ಮೂಲಕ ದೃಢಿಕೃತ ಪ್ರತಿಗಳನ್ನು ಸಲ್ಲಿಸಿರುವುದಾಗಿ ಹೇಳಿರುತ್ತಾರೆ. ಸದರಿ ದೃಢಿಕೃತ ದಾಖಲೆಗಳನ್ನು ಪರಿಶೀಲಿಸಲು ಆಪಾದಿತರಿಗೆ ವಿಚಾರಣೆ ವೇಳೆ ಕಾಲಾವಕಾಶವನ್ನು ನೀಡಲಾಗಿರುತ್ತದೆ.

ವಿಚಾರಣೆ ದಿನಾಂಕ:27-02-2025 ರಂದು ಮಧ್ಯಾಹ್ನ 03:00 ಗಂಟೆಗೆ ಶ್ರೀ ರಾಮ ಬಿ, ನ್ಯಾಯವಾದಿಗಳು ಇವರು ಆಪಾದಿತರ ಪರ ವಕಾಲತ್ ಅನ್ನು ಸಲ್ಲಿಸಿರುತ್ತಾರೆ. ಆಪಾದಿತರು ಮಧ್ಯಾಹ್ನ 03:00 ಗಂಟೆಗೆ ತಮ್ಮ ವಿವರವಾದ ಲಿಖಿತ ಹೇಳಿಕೆ (Reply) ಅನ್ನು ಸಲ್ಲಿಸಿರುತ್ತಾರೆ. SCS ಆನಲೈನ್ ಮುಖಾಂತರ ಪಡೆದ ಮಾನ್ಯ ಸರ್ವೋಚ್ಚ ನ್ಯಾಯಾಲಯದ Citation (2012) 4 Case 407 Ravi Yashwant Bhoir v/s District Collector Raigad a ನ್ಯಾಯವಾದಿಗಳು ಹಾಜರ ಪಡಿಸಿರುತ್ತಾರೆ. ಅವುಗಳನ್ನು ದಾಖಲೆಗೆ ತೆಗೆದುಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net