

ವಿಜಯವಾಣಿ ಸುದ್ದಿಜಾಲ ಗದಗ
ನಗರಸಭೆ ಸಾಮಾನ್ಯ ನಿಧಿಯಡಿ ವಿವಿಧ ವಾರ್ಡ್ಗಳ ಅಭಿವೃದ್ಧಿಗೆ ಸಿದ್ದಪಡಿಸಿದ್ದ ಟೆಂಡರ್ ಪ್ರಕ್ರಿಯೆಗಳು ಏಕಾಏಕಿ ರದ್ದುಗೊಂಡ ಹಿನ್ನೆಲೆ ಬಿಜೆಪಿ ಸದಸ್ಯರು ಅಧಿಕಾರಿಗಳ ಮೇಲೆ ಮುಗಿಬಿದ್ದ ಟನೆ ಸೋಮವಾರ ನಗರಸಭೆ ಸಾಮಾನ್ಯ ಸಭೆಯಲ್ಲಿ ಜರುಗಿ ಅಧಿಕಾರಿಗಳ ಬಳಿ ಉತ್ತರವಿಲ್ಲದಂತಹ ಸನ್ನಿವೇಶ ನಿರ್ಮಾಣವಾಯಿತು.
ಬಿಜೆಪಿ ಸದಸ್ಯರ ಪ್ರಶ್ನೆಗೆ ಉತ್ತರಿಸಿದೇ ನಗರಸಭೆ ಅಧಿಕಾರಿಗಳು ತಡಬಡಿಸಿದರು. ಸೂಕ್ತ ಉತ್ತರ ಬಾರದ ಹಿನ್ನೆಲೆ ಆದಷ್ಟು ಬೇಗ ಟೆಂಡರ್ ಕರೆಯಲು ಸಿದ್ಧತೆ ನಡೆಸಿ ಎಂದು ಅಧಿಕಾರಿಗಳಿಗೆ ಬಿಜೆಪಿ ಸದಸ್ಯರು ತಾಕೀತು ಮಾಡಿದರು. ಈ ಮೊದಲು ಕಾಂಗ್ರೆಸ್ ಸದಸ್ಯರ ವಾರ್ಡ್ಗಳಿಗೆ ಮಾತ್ರ ಟೆಮಡರ್ ಕರೆಯಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದನ್ನು ಬಿಜೆಪಿ ಸದಸ್ಯರು ವಿರೋಧಿ ಟೆಂಡರ್ ಪ್ರಕ್ರಿಯನ್ನು ರದ್ದುಗೊಳಿಸಿದ್ದರು. ತದನಂತರ ನಗರದ ಎಲ್ಲ ವಾರ್ಡ್ಗಳಿಗೆ ಟೆಂಡರ್ ಕರೆಯುವ ಮೂಲಕ ಮೂಲಭೂತ ಸೌಕರ್ಯ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆವುದೇ ಆದೇಶವಿಲ್ಲದೇ ನಗರಸಭೆ ಅಧಿಕಾರಿಗಳು ಈ ಟೆಂಡರ್ ಪ್ರಕ್ರಿಯೆ ರದ್ದುಮಾಡಿದ್ದಾರೆ. ಇವರು ಅಧಿಕಾರಿಗಳೇ? ರಾಜಕಾರಣಿಗಳೇ? ಎಂದು ಬಿಜೆಪಿ ಸದಸ್ಯರ ಪ್ರಶ್ನೆಯಾಗಿತ್ತು.
ನಗರಸಭೆ ಸಾಮಾನ್ಯ ಸಭೆ ಆರಮಭವಾಗುತ್ತಿದ್ದಂತೆ, ರಸ್ತೆ, ಒಳ ಚರಂಡಿ ಸೇರಿದಂತೆ ಕಳೆದ ಹಲವು ತಿಂಗಳಿಂದ ಅಭಿವೃದ್ಧಿ ಕುಂಠಿತ ಗೊಂಡಿದೆ. ನಗರ ಅಭಿವೃದ್ಧಿಗಾಗಿ ಈ ಮೊದಲು ವಿವಿಧ ಕಾಮಗಾರಿ ಟೆಂಡರ್ ಸಿದ್ದಪಡಿಸಲಾಗಿತ್ತು ರಾತ್ರಿ 10 ಗಂಟೆ ವರೆಗೂ ನಗರಸಭೆಯಲ್ಲೇ ಇದ್ದು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ನೀವು ಯಾರ ಆದೇಶ ದ ಮೇಲೆ ಈ ಮೊದಲಿನ ಟೆಂಡರ್ ಗಳನ್ನು ರದ್ದು ಮಾಡಿದಿರಿ ಎಂದು ಬಿಜೆಪಿ ಸ್ಥಾಯಿ ಸಮಿತಿ ಅಧ್ಯಕ್ಷ ರಾವೇಂದ್ರ ಯಳವತ್ತಿ ಮತ್ತು ಅನಿಲ್ ಅಬ್ಬಿಗೇರಿ ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ಮಧ್ಯೆ ಪ್ರವೇಶಿಸಿದ ನಗರಸಭೆ ಅಧ್ಉೆ ಉಷಾ ದಾಸರ, ಯಾರಾದ್ರೂ ನಿಮ್ಮ ಮೇಲೆ ಪ್ರಭಾವ ಬೀರಿದ್ದಾರಾ? ಸದನಕ್ಕೆ ಉತ್ತರ ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಗರಸಭೆ ಅಭಿಯಂತರರನ್ನು ತರಾಟೆಗೆ ತೆಗೆದುಕೊಂಡ ಅವರು ಚುನಾವಣಾ ನೆಪಮೊಡ್ಡಿ ಕಾರಣ ಹೇಳಬೇಡಿ. ಟೆಂಡರ್ ಕರೆಯಲು ಸಹಿ ಮಾಡಲಾಗಿತ್ತು. ಟೆಂಡರ್ ಪ್ರಕ್ರಿಯೆ ರದ್ದು ಮಾಡಲು ನಿಮಗೆ ನಿರ್ದೇಶನ ಯಾರು ನೀಡಿದ್ದಾರೆ ಎಂದು ಕಿಡಿ ಕಾರಿದರು.
ಸ್ವಚ್ಚತೆ ಬಗ್ಗೆ ತೀವ್ರ ಚರ್ಚೆ:
ನಗರದ ಸ್ವಚ್ಚತೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ಆಯಿತು. ಪೌರ ಕಾಮಿರ್ಕರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ನಗರಾದ್ಯಂತ ಚಂರಡಿ ವ್ಯವಸ್ಥೆ ಹದಗೆಟ್ಟಿದೆ. ಬ್ಲಾಕೇಜ್ಗಳನ್ನು ತೆರುವುಗೊಳಿಸಿಲ್ಲ. ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಪೌರ ಕಾಮಿರ್ಕರ ಬಗ್ಗೆ ದೇದಾರಗಳಿಗೆ ನಿಯಂತ್ರಣವಿಲ್ಲ. ಬೆಳಗ್ಗೆ ಹಾಜರಾಗಿ ಮಧ್ಯಾಹ್ನ ಪೌರ ಕಾಮಿರ್ಕರು ಕಾಣುವುದೇ ಇಲ್ಲ ಎಂದು ನಗರಸಭೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಸಾಮಾನ್ಯ ಸಭೆಯಲ್ಲಿ ಮಂಜುರಾತಿ
- ಪೌರಕಾಮಿರ್ಕರ ಸಂಕಷ್ಟ ಭತ್ಯೆಗೆ 23.35 ಲಕ್ಷ
- 15ನೇ ಹಣಕಾಸು ಅನುದಾನದ ನಿರ್ಭಂದಿತ ಅನುದಾನಲದಲಿ ಕುಡಿಯುವ ನೀರಿಗಾಗಿ 2.4 ಕೋಟಿ. ಮೊತ್ತದ ಕ್ರೀಯಾ ಯೋಜನೆ ಅನುಮೋದನೆ
- ಕುಡಿಯುವ ನೀರು ಸರಬರಾಜು ಟಕಕ್ಕೆ 1.55 ಕೋಟಿ ಪರಿಷತ ಕ್ರಿತೋ ಯೋಜನೆಗೆ ಅನುಮೋದನೆ
- ಸ್ವಚ್ಚ ಭಾರತ ಯೋಜನೆಯಡಿ ಉಪಕರಣ ಖರೀದಿಗೆ ದರ ಪಟ್ಟಿಗೆ ಅನುಮೋದನೆ
- ನಗರದ ಪಲ್ಲವಿ ಹೊಟೆಲ್ ನಿಂದ ಎಸ್.ಪಿ ಕಚೇರಿವರೆಗೂ ರಸ್ತೆ ಡಾಂಬರೀಕರಣ, ವಿದ್ಯುತ್, ಒಳಚರಂಡಿಗೆ 23.14 ಲಕ್ಷ ಮೊತ್ತದ ಕ್ರೀಯಾ ಯೋಜನೆ
- ಭೂ ಪರಿವರ್ತನಾ ನಿವೇಶನದಾರರಿಂದ ಅಭಿವೃದ್ಧಿ ಶುಲ್ಕ ಪರಿಷ್ಕರಣೆ
- ನಗರದ ವಿವಿಧ ವಾರ್ಡ್ಗಳ ಉದ್ಯಾನವನ ನಿರ್ವಹಣೆ ಜವಾಬ್ದಾರಿಯನ್ನು ವಿವಿಧ ಸಂಸಂಸ್ಥೆಗಳ ನೀಡುವುದು
ಕೋಟ್:
ನಗರದ ಜನತೆ ನಮ್ಮನ್ನು ಕಂಡಕಂಡಲ್ಲೇ ಪ್ರಶ್ನೆ ಮಾಡುತ್ತಿದ್ದಾರೆ. ಅಧಿಕಾರಿಗಳು ಮಾಡಿದ್ ತಪ್ಪಿಗೆ ನಾವು ಉತ್ತರಿಸಬೇಕಿದೆ. ಇಂಡೆಂಟ್ ಇಲ್ಲ. ೈಲ್ ಬಂದಿಲ್ಲ ಎಂದು ಅಧಿಕಾರಿಗಳು ನೆಪ ಹೇಳುವಂತಿಲ್ಲ. ರಾಜಕೀಯ ಪ್ರಭಾವಕ್ಕೆ ಒಳಗಾಗದೇ ಕೆಲಸ ಮಾಡಬೇಕು.
ರಾವೇಮದ್ರ ಯಳವತ್ತಿ, ಸ್ಥಾಯಿ ಸಮಿತಿ ಅಧ್ಯಕ್ಷ, ನಗರಸಭೆ