

ವಿಜಯವಾಣಿ ಸುದ್ದಿಜಾಲ ಗದಗ
ಸಾಮಾಜಿಕ ಸಂಟನೆಯಾದ ಲಯನ್ಸ್ ಕ್ಲಬ್ನ ಪದಾಧಿಕಾರಿಗಳು ಮತ್ತು ಸದಸ್ಯರು ಸಮಾಜಮುಖಿ ಹಾಗೂ ಜನಮುಖಿಯಾಗಿ ಕಾರ್ಯ ಮಾಡಬೇಕು ಎಂದು ಲಯನ್ಸ್ ಕ್ಲಬ್ನ ನಿಕಟಪೂರ್ವ ಜಿಲ್ಲಾ ಗವರ್ನರ್ ಡಾ. ರವಿ ನಾಡಗೇರ ಹೇಳಿದರು.
ಲಯನ್ಸ್ ಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗದಗ ಬೆಟಗೇರಿ ಲಯನ್ಸ್ ಕ್ಲಬ್ನ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು.
ಜನ, ಸಮಾಜ ಸೇವೆ ಮಾಡುವ ಮೂಲಕ ಅದರಲ್ಲಿ ಸಂತೃಪ್ತ ಭಾವನೆ ಕಾಣಲು ಇಂತಹ ಸಾಮಾಜಿಕ ಸಂಟನೆಗಳು ವೇದಿಕೆಯನ್ನು ಒದಗಿಸುತ್ತವೆ. ಕ್ಲಬ್ಗಳಲ್ಲಿ ಎಲ್ಲರೂ ಸಂಟಿಕರಾಗಿ ಸೇರುವುದರಿಂದ ಸ್ನೇಹ ಬೆಳೆಯುತ್ತದೆ. ಹೊಸ ವಿಚಾರಗಳು ತಿಳಿಯುತ್ತವೆ. ಜೊತೆಗೆ ನಾಯಕತ್ವದ ಗುಣಗಳು ಬೆಳೆಯುತ್ತವೆ. ಇದರಿಂದಾಗಿ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದರು.
ಲಯನ್ಸ್ ಕ್ಲಬ್ನ ನಿಕಟಪೂರ್ವ ಜಿಲ್ಲಾ ಗವರ್ನರ್ ಆನಂದ ಪೋತ್ನೀಸ್ ಹಾಗೂ ಸುಗ್ಗಲಾ ಯಳಮಲಿ ಅವರು ಮಾತನಾಡಿದರು. ನೂತನ ಜಿಲ್ಲಾ ಅಧ್ಯಕ್ಷರಾಗಿ ರಾಜು ವೇರ್ಣೆಕರ, ಉಪಾಧ್ಯರಾಗಿ ಪ್ರವಿಣ ವಾರಕರ, ಡಾ. ನವೀನ ಹಿರೇಗೌಡ್ರ, ಡಾ. ತುಕಾರಾಮ ಸೂರಿ ಸೇರಿದಂತೆ ಇತರರು ಅಧಿಕಾರ ವಹಿಸಿಕೊಂಡರು. ಪೂಜಾ ಪಾಟೀಲ, ಸುರೇಖಾ ಮಲ್ಲಾಡದ, ಸಹನಾ ಹಿರೇಮಠ, ಕನಿಷ್ಕ್ ಸುಲಾಖೆ, ನಿತೀಶ್ ಸಾಲಿ, ಸಾವಿತ್ರಿ ಶಿಗ್ಲಿ, ರಾಜಣ್ಣ ಮಲ್ಲಾಡದ ಇತರರು ಇದ್ದರು.