

ವಿಜಯವಾಣಿ ಸುದ್ದಿಜಾಲ ಗದಗ
ಸಂಗೀತ, ತಾಳವಾದ್ಯ, ಲಿಖಿತ ಪ್ರಾಯೋಗಿಕ ಪರೀಕ್ಷೆ ಜಿಲ್ಲಾ ಕೇಂದ್ರದಲ್ಲಿ ನಡೆಸುವಂತೆ ಸಮತಾ ಸೇನಾ ಸಂಟನೆಯ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಸಂಟನೆಯ ಅಧ್ಯಕ್ಷ ಕಿರಣ ಗಾಮನಗಟ್ಟಿ, ವೀರೇಶ್ವರ ಪುಣ್ಯಾಶ್ರಮ ಹಾಗೂ ಸಂಗೀತ ಮಹಾವಿದ್ಯಾಲಯ ದೇಶಕ್ಕೆ ಮಾದರಿ ಸಂಸ್ಥೆಯ ಆಗಿದೆ. ಮಠದಲ್ಲಿ ಜಾತಿ ಬೇಧ ಬಾವವಿಲ್ಲದೆ ಸಹಸ್ರಾರು ಜನರು ಸಂಗೀತ ಕಲಿಯುತ್ತಿದ್ದಾರೆ. ಸಂಗೀತ ಪರೀಾ ಕೇಂದ್ರಗಳನ್ನು ಹುಬ್ಬಳ್ಳಿಗೆ ವರ್ಗಾಯಿಸಿದ್ದರಿಂದ ಅಂಧ ಮಕ್ಕಳಿಗೆ ತೊಂದರೆ ಉಂಟಾಗುತ್ತದೆ. ಹಾಗಾಗಿ ಗದಗ ನಗರದಲ್ಲೇ ಸಂಗೀತ ಪರೀೆಗಳನ್ನು ನಡೆಸಲು ಸಚಿವರು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ಮನವಿಗೆ ಸ್ಪಂಧಿಸಿದರು.