ಸಂಗೀತ ಮಹಾವಿದ್ಯಾಲಯದಲ್ಲಿ ಕನಕದಾಸ ಜಯಂತಿ"

IMG-20241119-WA0005
Published on

ಸಂಗೀತ ಕ್ಷೇತ್ರಕ್ಕೆ ಕನಕದಾಸರ ಕೊಡುಗೆ ಅನನ್ಯ. ಸುಮಿತ್ರ ಹಿರೇಮಠ್

 ಗದಗ: ಕನಕದಾಸರು ಜಾತ್ಯತೀತ ಮನೋಭಾವ ಉಳ್ಳವರಾಗಿದ್ದು ಸಾಹಿತ್ಯ ಕ್ಷೇತ್ರಕ್ಕೆ  ಧಾರ್ಮಿಕ ಕ್ಷೇತ್ರಕ್ಕೆ ಸಂಗೀತ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅನನ್ಯ ಎಂದು  ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸುಮಿತ್ರ ಹಿರೇಮಠ ಅವರು ಹೇಳಿದರು.
 ಡಾ, ಪಿ ಜಿ ಎ ಎಸ್ ಸಮಿತಿಯ ಪಂಡಿತ್ ಪಂಚಾಕ್ಷರಿ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಭಕ್ತ ಕನಕದಾಸರ ಜಯಂತಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಾ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಲೋಕಕ್ಕೆ ದಾಸ ಶ್ರೇಷ್ಠ ಕನಕದಾಸರ ಕೊಡುಗೆ ಅಪಾರ ವಾಗಿದ್ದು  ಅವರು ಸಮಾಜ ಸುಧಾರಕರಾಗಿ  ವಿಶ್ವ ಮಾನ್ಯರಾಗಿದ್ದಾರೆ ಎಂದು ಅವರು ಹೇಳಿದರು.
 ಉಪನ್ಯಾಸ ಗಂಗಾಧರ ಹಿಡ್ಕಿಮಠ    ಅವರು   ಮಾತನಾಡಿ ದಾಸ ಸಾಹಿತ್ಯದಲ್ಲಿ ಕನಕದಾಸರು ಆಧ್ಯಾತ್ಮಿಕ ಬೆಳವಣಿಗೆ ಕಾರಣರಾಗಿದ್ದು ಕರ್ನಾಟಕದಲ್ಲಿ ಭಕ್ತಿ ಸಾಹಿತ್ಯದ ಯುಗವನ್ನು ಅವರು ಆರಂಭಿಸಿ ಕಾವ್ಯ ಲೋಕಕ್ಕೆ ಹಾಗೂ ಸಂಗೀತಕ್ಕೆ ಅವರು ಅಭೂತಪೂರ್ವ ವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಅವರು ಹೇಳಿದರು.
 ಡಾ ಎಸ್ ಎಸ್ ಗಡ್ಡದಮಠ ಅವರು  ಅನೇಕ ದಾಸವಾಣಿಗಳನ್ನು ಹಾಡಿ ಮಾತನಾಡುತ್ತಾ  ಕನಕದಾಸರ ಜಯಂತಿಯನ್ನು ಸರ್ವರು ಅಭಿಮಾನ ಪೂರ್ವಕವಾಗಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಯಾಗಿದೆ ಎಂದವರು ಹೇಳಿದರು.
 ಕಾರ್ಯಕ್ರಮದಲ್ಲಿ ಡಾ,  ಎನ್ ವಿ ಅಕ್ಕಸಾಲಿ, ವಾ ಆರ್ ಮೂಲಿಮನಿ, ಶಾಮರಾವ್ ಫುಲಾರೆ , ಶರಣಪ್ಪ ಕಲ್ಬುರ್ಗಿ, ವಿ ಎಂ ಪಟ್ಟದಕಲ್ಲು, ಬಿ ಹೆಚ್ ಜೋಕ್ ರೆಡ್ಡಿ, ಓಲೆಕಾರ್, ಶ್ರೀಮತಿ ಮಹಾಲಕ್ಷ್ಮಿ ಹೆಗಡೆ, ಡಾ. ಎಚ್ ಬಿ ಹೂಗಾರ್, ಎಂ ಎಸ್ ಮಠದ, ಎನ್ ಎಂ ಶೇಕ್, ಶೃತಿ ಪವನ್, ತ್ರಿವೇಣಿ, ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net