ಅಕ್ರಮ ಮರಳು ಗಣಿಗಾರಿಕೆ, 34.43 ಕೋಟಿಗೂ ಅಧಿಕ ರಾಜಧನ, ದಂಡ ವಿಧಿಸಿದ ಇಲಾಖೆ

29GDG01A
Published on

ಅಕ್ರಮ ಎಸಗಿದವರ ವಿರುದ್ಧ ದೂರು, ನ್ಯಾಯಾಲಯದಲ್ಲಿ ಪ್ರಕರಣ

ಶಿವಾನಂದ ಹಿರೇಮಠ, ಗದಗ
ಜಿಲ್ಲೆಯ ಮುಂಡರಗಿ ಭಾಗದಲ್ಲಿ ನಡೆದ ಅಕ್ರಮ ಮರಳು ಗಣಿಗಾರಿಕೆ ಅಗೆದಷ್ಟು ಆಳಕ್ಕೆ ಇಳಿಯುತ್ತಿದೆ. ತುಂಗಭದ್ರ ನದಿ ದಡದಲ್ಲಿ ಇರುವ ಹಲವು ಮರಳು ಬ್ಲಾಕ್​ ಗಳನ್ನು ಸಮೀೆ ನಡೆಸಿರುವ ಗಣಿ ಮತ್ತು ಬೂ ವಿಜ್ಞಾನ ಇಲಾಖೆ ವರದಿಯಲ್ಲಿ ಸರ್ಕಾರಕ್ಕೆ ರಾಜಧನ ಪಾವತಿಸದೇ ಕೋಟ್ಯಂತ ರೂ. ಮರಳು ಲೂಟಿ ಮಾಡಿದ್ದರ ಬಗ್ಗೆ ಉಲ್ಲೇಖಿಸಲಾಗಿದೆ. ವಿವಿಧ ಮರಳು ಬ್ಲಾಕ್​ ಮಾಲೀಕರಿಗೆ 34.43 ಕೋಟಿಗೂ ಅಧಿಕ ರಾಜಧನ, ದಂಡ ಪಾವತಿಸುವಂತೆ ಇಲಾಖೆ ನೋಟೀಸ್​ ಕೂಡ ನೀಡಿತ್ತು. ಇಲಾಖೆಯ ಆದೇಶ ಪಾಲಿಸದ ಮಾಲೀಕರ ವಿರುದ್ಧ ಇಲಾಖೆ ದೂರು ದಾಖಲಿಸಿದೆ. ಜಾಮೀನು ಪಡೆದ ಆರೋಪಿತರು ಕೋರ್ಟ ಮೊರೆಹೋಗಿದ್ದಾರೆ. ಅಕ್ರಮ ನಡೆಸಿದವರಲ್ಲಿ ಹಲವರು ಪ್ರಮುಖ ರಾಜಕಾರಣಿಗಳಿರುವುದು ವಿಶೇಷ.
ಏನಿದು ಪ್ರಕರಣ?
ಮುಂಡರಗಿ ಭಾಗದಲ್ಲಿ ಕಳೆದ 5 ವರ್ಷದಿಂದ ಮರಳು ಗಣಿಗಾರಿಕೆ ನಡೆಸಲು ಗುತ್ತಿಗೆ ಪಡೆದ ಕೆಲವು ಮಾಲೀಕರಿಂದ ನಡೆದ ಅಕ್ರಮ ಗಣಿಗಾರಿಕೆ ಇದಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಲವು ನಿಯಮಗಳನ್ನು ಗಾಳಿಗೆ ತೂರಿ ನಡೆದ ಅಕ್ರಮ ನಡೆಸಿದ್ದು ಲೆಕ್ಕಪರಿಶೋಧನ ಇಲಾಖೆಯಲ್ಲಿ ಬಹಿರಂಗಗೊಂಡಿದೆ. ತುಂಗಭದ್ರ ನದಿಯಲ್ಲಿ ರಸ್ತೆ ನಿಮಿರ್ಸಿ ಗಣಿಗಾರಿಗೆ, ನೀರನ್ನು ಕಲುಷಿತಗೊಳಿಸಿರುವುದು, ಲೀಸ್​ ಪಡೆದ ನದಿ ವ್ಯಾಪ್ತಿಯಲ್ಲಿ ಗಣಿಗಾರಿಕೆ, ಗುತ್ತಿಗೆ ಪಡೆದಕ್ಕಿಂತಲೂ ಅಧಿಕ ಆಳದ ವರೆಗೆ ಗುಂಡಿತೋಡಿ ಗಣಿಗಾರಿಕೆ, ಓವರ್​ ಲೋಡ್​, ಮರಳಿನ ಮೇಲೆ ಮಣ್ಣು ಎಳೆದು ಮರಳಿನ ಸಂಗ್ರಹ ಇಲ್ಲವೇಂದು ಸರ್ಕಾರಕ್ಕೆ ತೋರಿಸಿದ ಆರೋಪ ಸೇರಿದಂತೆ ಹಲವು ಅಕ್ರಮ ಎಸಗಿರುವ ಬಗ್ಗೆ ಇಲಾಖೆ ವರದಿಯಲ್ಲಿ ಉಲ್ಲೇಖಿಸಿದೆ. ಈ ಹಿನ್ನೆಲೆ 2017ರಿಂದಲೂ ಪ್ರತಿವರ್ಷ ರಾಜಧನ, ಸ್ಥಿರ ತೆರಿಗೆ, ಮೇಲ್ಮೆ ಬಾಡಿಗೆ, ಉಪ ಕರ, ದಂಡ ಪಾವತಿಸುವಂತೆ ಎಲ್ಲರಿಗೂ ಇಲಾಖೆ ನೋಟೀಸ್​ ನೀಡುತ್ತಲೇ ಬಂದಿದೆ. ಬೆರಳೆಣಿಕೆಷ್ಟು ಮಾಲೀಕರು ಪಾವತಿಸಿದ್ದಾರೆಂದು ಇಲಾಖೆ ಮೂಲಗಳು ತಿಳಿಸಿವೆ. ಮುಂಡರಗಿ ತಾಲೂಕಿನ 16 ಮರಳು ಬ್ಲಾಕ್​ ನಿಂದ ದಂಡ, ರಾಜಧನ ಪಾವತಿ ಆಗದ ಹಿನ್ನೆಲೆ ಗಣಿ ಇಲಾಖೆ ಆರೋಪಿತರ ವಿರುದ್ಧ ದೂರು ದಾಖಲಿಸಿದೆ. ಆರೋಪಿತ ಮರಳು ಬ್ಲಾಕ್​ ಮಾಲೀಕರು ಜಾಮೀನು ಪಡೆದು ಇಲಾಖೆ ವಿರುದ್ಧ ಕೊರ್ಟ್​ ಮೆಟ್ಟಿಲೇರಿದ್ದಾರೆ.


ಗಣಿ ಇಲಾಖೆ ನಿರ್ಲಕ್ಷ$್ಯ:
ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಕ್ರಮ ಎಸಗಿದವರ ವಿರುದ್ಧ ದೂರು ದಾಖಲಿಸಲು ವಿಳಂಬ ನೀತಿ ಅನುಸರಿಸಿದ ಹಿನ್ನೆಲೆ ಪ್ರಕರಣ ಮತ್ತಷ್ಟು ಜಟೀಲವಾಗುತ್ತ ಸಾಗಿದೆ. ಮೂಲಗಳ ಪ್ರಕಾರ ಜಿಲ್ಲಾ ಗಣಿ ಇಲಾಖೆಯು ಅಕ್ರಮ ನಡೆದ ಬಗ್ಗೆ ಮೂರು ಬಾರಿ ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸಿತ್ತು. ಕಳೆದ ವಿಧಾನಸಭಾ ಚುನಾವಣೆ ನಂತರ ಅಕ್ರಮದ ತನಿಖೆ ಕಾರ್ಯ ಚುರುಕುಗೊಂಡಿತ್ತು. ಆದರೆ, ದೂರು ದಾಖಲಿಸಲು ಹಿಂದೇಟು ಹಾಕಿತು. ಸಾಮಾಜಿಕ ಕಾರ್ಯಕರ್ತರಿಂದ ಮೇಲಿಂದ ಮೇಲೆ ಒತ್ತಾಯ ಕೇಳಿ ಬಂದ ಹಿನ್ನೆಲೆ ದೂರು ದಾಖಲಿಸಿದೆ. ದೂರು ದಾಖಲಿಸಲು ಇಲಾಖೆ ವಿಳಂಬ ನೀತಿ ಅನುಸರಿಸಿದ ಕಾರಣ ಹಲವು ಅನುಮಾನಗಳು ಹುಟ್ಟಿಕೊಂಡಿವೆ.

ತಾಲೂಕು ಟಾಸ್ಕಪೋರ್ಸ್​ ನಿರ್ಲಕ್ಷ$್ಯ:
ಜಿಲ್ಲೆಯಲ್ಲಿ ಮುಂಡರಗಿ ತಾಲೂಕಿನಲ್ಲಿ ಮಾತ್ರ ಅತ್ಯುತ್ತಮ ಮರಳು ಸಿಗುತ್ತದೆ. ಹುಬ್ಬಳ್ಳಿ, ಧಾರವಾಡ ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗೆ ಇಲ್ಲಿಂದಲೇ ಮರಳು ಸಾಗಾಟ ಆಗುತ್ತದೆ. ಹಾಗಾಗಿ ಇಲ್ಲಿನ ಮರಳಿಗೆ ಅಧಿಕ ಬೇಡಿಕೆ ಇದೆ. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಮರಳು ಬ್ಲಾಕ್​ ಮಾಲೀಕರು ಮರಳನ್ನು ಹೆತೇಚ್ಚವಾಗಿ ತೆಗೆದಿದ್ದಾರೆ. ಈ ಅಕ್ರಮ ನಿಯಂತ್ರಣಕ್ಕೆ ತಾಲೂಕು ಟಾಸ್ಕಪೋರ್ಸ್​ ಸಮಿತಿ ರಚಿಸಿದ್ದರೂ ಕೂಡ ಅಕ್ರಮಕ್ಕೆ ಕಡಿವಾಣ ಹಾಕಲು ಸಮಿತಿ ವಿಲಗೊಂಡಿದೆ. ಮುಂಡರಗಿಯ ಹಳ್ಳಿಕೇರಿ ಮತ್ತು ಕೊರ್ಲಹಳ್ಳಿ ಬಳಿ ತನಿಖಾ ಠಾಣೆಗಳಿದ್ದರೂ ಸಹ ಠಾಣಾಧಿಕಾರಿಗಳು ಅಕ್ರಮ ಮರಳು ಸಾಗಾಟವನ್ನು ತನಿಖೆಗೆ ಒಳಪಡಿಸಲಿಲ್ಲವೇಕೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಕೋಟ್​:
ಮುಂಡರಗಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಎಂಬುದು ಬೇಲಿ ಎದ್ದು ಹೊಲ ಮೇಯ್ದಂತೆ ಕಾಣುತ್ತದೆ. ವ್ಯವಸ್ಥೆಯಲ್ಲಿ ಎಲ್ಲರೂ ಭಾಗಿದಾರರು ಎಂದರೂ ತಪ್ಪಾಗುವುದಿಲ್ಲ. ಇಲಾಖೆಯು ಕೂಡ ದೂರು ದಾಖಲಿಸಲು ಆರಂಭದಲ್ಲಿ ಮೀನಮೇಷ ಮಾಡಿತು. ಈಗ ದೂರು ದಾಖಲಿಸಿದೆ. 34 ಕೋಟಿ ಎಂಬದು ಕೇವಲ ಕಣ್ಣಿಗೆ ಕಾಣುವಷ್ಟು ಮರಳಿಗೆ ವಿಧಿಸಿದ ಮೊತ್ತವಾಗಿದ್ದು, ಇದಕ್ಕೂ ನೂರುಪಟ್ಟು ಅಧಿಕ ಅಕ್ರಮ ನಡೆದಿರುವುದು ಸತ್ಯ.
- ವಿಟಲ್​ ಗಣಾಚಾರಿ, ಸಾಮಾಜಿಕ ಕಾರ್ಯಕರ್ತ, ಮುಂಡರಗಿ

ಕೋಟ್​:
ಇಲಾಖೆ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದಕ್ರಮ ಕೈಗೊಂಡಿದ್ದೇವೆ. ಪ್ರಕರಣ ನ್ಯಾಯಾಲಯದಲ್ಲಿದೆ. ದಾಖಲೆಗಳನ್ನು ಸಲ್ಲಿಸಲಾಗಿದೆ
ಚಿದಂಬರಂ - ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಗದಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net