

ಮುಂಡರಗಿ: ಬ್ರಿಟಿಷ್ ರಿಂದ ಭಾರತಕ್ಕೆ ಸ್ವಾತಂತ್ರ÷್ಯ ಪಡೆಯಲು ಹಲವಾರು ಮಹಾನ್ ವ್ಯಕ್ತಿಗಳು ಶ್ರಮಿಸಿದ್ದಾರೆ ಎಂದು ಡಾ.ಅಂಬೇಡ್ಕರ ವಿದ್ಯಾವರ್ಥಕ ವಿದ್ಯಾಸಮಿತಿಯ ಸಂಚಾಲಕರಾದ ವಿನಾಯಕ ಭಾವಿಮನಿ ಅವರು ಹೇಳಿದರು.
ನಗರದ ಅಂಬೇಡ್ಕರ್ ಮಹಾವಿದ್ಯಾಲಯದಲ್ಲಿ ಗುರುವಾರದಂದು ಜರುಗಿದ ಸ್ವಾತಂತ್ರೊ÷್ಯತ್ಸವ ದಿನಾಚರಣೆ ಧ್ವಜಾರೋಹಣ ನೇರವರಿಸಿ ಅವರು ಮಾತನಾಡಿದರು.
ಸ್ವಾತಂತ್ರ÷್ಯವು ಹಲವಾರು ಪ್ರಮುಖ ವ್ಯಕ್ತಿಗಳಾದ ಮಹಾತ್ಮ ಗಾಂಧೀಜಿ, ಪಂಡಿತ ಜವಾಹರಲಾಲ್ ನೆಹರು, ಭಗತ್ ಸಿಂಗ್,ಸರ್ದಾರ್ ವಲ್ಲಭಾಯಿ ಪಟೇಲ್ ಸಾಕಷ್ಟು ಜನ ತಮ್ಮ ಜೀವನವನ್ನು ಮುಡಿಪಾಗಿಟ್ಟು ಹೋರಾಟದಲ್ಲಿ ಪಾಲ್ಗೊಂಡು ಸತ್ಯ, ಅಹಿಂಸೆಯನ್ನು ಅನುಸರಿಸಿ ಸ್ವಾತಂತ್ರ÷್ಯವನ್ನು ಪಡೆದರು.
ಭಾರತೀಯರಾದ ನಾವು ಇಂದು ೭೮ನೇ ಸ್ವಾತಂತ್ರೊ÷್ಯÃತ್ಸವ ಆಚರಣೆ ಮಾಡುತ್ತಿದ್ದೇವೆ. ಈ ದಿನವನ್ನು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ೧೯೪೭ ರಲ್ಲಿ ದೇಶ ಬಿಡುಗಡೆ ಹೊಂದಿದ ವಿಜಯದಿನವಾಗಿ ಗುರುತಿಸಲು ಆಚರಿಸುತ್ತೆವೆ.
ಆಗಸ್ಟ್ ೧೫ ರಂದು ದೇಶಭಕ್ತಿಯ ಉತ್ಸಾಹ, ಧ್ವಜಾರೋಹಣ, ಸಾಂಸ್ಕöÈತಿಕ ಕಾರ್ಯಕ್ರಮ, ನಾಯಕರ ಭಾಷಣ ಜೊತೆಗೆ ಸ್ವಾತಂತ್ರ÷್ಯ ಹೋರಾಟಗಾರರ ತ್ಯಾಗವನ್ನು ನೆನಪು ಮಾಡಿಕೊಂಡು, ಅವರಿಗೆ ಸ್ಮರಿಸಬೇಕಾಗಿದೆ. ಸ್ವತಂತ್ರದ ಮಹತ್ವದ ಜತೆಗೆ, ನಮ್ಮ ಜವಾಬ್ದಾರಿಗಳೇನು ಎಂಬುದನ್ನು ಅರ್ಥ ಮಾಡಿಕೊಂಡು, ದೇಶಕ್ಕೆ ನಾವು ಸಹ ಏನಾದರೂ ಕೊಡುಗೆ ನೀಡಬೇಕಾಗಿದೆ ನಮ್ಮ ದೇಶದ ಸ್ವಾತಂತ್ರ÷್ಯಕ್ಕೆ ೧೮೫೭ ರಿಂದ ೧೯೪೭ ರವರೆಗೆ ಹಲವು ದಶಕಗಳ ಕಾಲ ಹೋರಾಡಿದ ಎಲ್ಲರನ್ನೂ ಈ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳಲೇಬೇಕು. ಭಾರತದಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ಎಲ್ಲ ರೀತಿಯ ಮೂಲಭೂತ ಹಕ್ಕು ಸೇರಿದಂತೆ ಎಲ್ಲ ರೀತಿಯ ಸ್ವಾತಂತ್ರ÷್ಯವಿದೆ. ಈ ಮಾತನ್ನು ಪೋಷಕರು, ಶಿಕ್ಷಕರು ಎಲ್ಲ ಮಕ್ಕಳಿಗೆ ಹೇಳಿಕೊಟ್ಟು, ಅರ್ಥ ಮಾಡಿಸಬೇಕು. ಹೆಚ್ಚಿನ ನೈತಿಕ ಶಿಕ್ಷಣವನ್ನು ನೀಡಲೇಬೇಕು ಎಂದು ಹೇಳಿದರು.
ವಿವಿಧ ರಾಜ ಸಂಸ್ಥಾನವಾಗಿ ಹರಿದು ಹಂಚಿದ ಭಾರತವನ್ನು ಒಂದಾಗಿಸುವುದು ದೊಡ್ಡ ಸವಾಲು ಅಗಿತ್ತು,ಅದನ್ನು ಎದುರಿಸಿ ಒಂದಾಗಿಸಿದರು ಹಾಗಾಗಿ ಇಷ್ಟು ಕಷ್ಟಪಟ್ಟು ಒಂದಾಗಿಸಿರುವುದು ಇಂದಿನ ಪೀಳಿಗೆ ಅವರ ಪುಣ್ಯವೇ ಸರಿ.
ಈ ಶುಭದಿನದಂದು ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಎಲ್ಲರೂ ಸಹ ಈ ಸಮಾರಂಭದಲ್ಲಿ ಭಾಗವಹಿಸಿ ಸ್ವಾತಂತ್ರ÷್ಯ ದಿನಾಚರಣೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬೇಕು,ದೇಶಾಭಿಮಾನ ಬೆಳೆಸಿಕೊಂಡು ದೇಶದ ಅಭಿವೃದ್ಧಿಗೆ ಪೂರಕವಾಗುವ ಕೆಲಸದಲ್ಲಿ ಕಾರ್ಯನಿರತರಾಗಬೇಕು ಎಂದರು.
ಸ್ವಾತAತ್ರ÷್ಯ ಪಡೆದ ನಂತರ ಇಂದಿಗೂ ಸಹ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಯಾಗಿ ನೆಲೆ ಉಳಿಸಿಕೊಂಡು ಭಾರತ ದೇಶ ಈಡೀ ಜಗತ್ತಿಗೆ ಮಾದರಿಯಾಗಿದೆ.
ಭಾರತ ದೇಶವು ಇಂದು ಸಾಂಸ್ಕöÈತಿಕ, ಸಾಹಿತ್ಯಕ,ಕ್ರೀಡೆ,ವಿಜ್ಞಾನ ಸೇರಿದಂತೆ ಎಲ್ಲ ರಂಗಗಳಲ್ಲಿ ತನ್ನ ಚಾಪನ್ನು ಮೂಡಿಸಿದೆ,ಭಾರತದೇಶವು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಒಂದಾಗಿದೆ. ಸ್ವಾತಂತ್ರ÷್ಯ ನಂತರ ೭೮ ವರ್ಷ ಸುಭದ್ರವಾಗಿ ನಡೆಯಲು ಸಂವಿಧಾನವು ಭದ್ರಬುನಾದಿಯಾಗಿದೆ.ಸ್ವಾತಂತ್ರ÷್ಯ,ಸಮಾನತೆ,ಏಕತೆ,ಭ್ರಾತೃತ್ವ ನಮ್ಮ ಸಂವಿಧಾನದ ಪ್ರಮುಖ ಮೌಲ್ಯಗಳಾಗಿವೆ.ನಮ್ಮ ದೇಶದಲ್ಲಿ ಅನೇಕ ಭಾಷೆ ,ಸಂಸ್ಕöÈತಿ,ಪರAಪರೆಯ ಆಚರಣೆ ನಡುವೆಯೂ ಎಲ್ಲರೂ ಸ್ವಾಭಿಮಾನದಿಂದ ಬದಕಲು ಸಂವಿಧಾನ ಎಲ್ಲರ ಶಕ್ತಿಯಾಗಿದೆ .ಈ ರಾಷ್ಟಿçÃಯ ಹಬ್ಬವು ದೇಶದ ಏಕತೆ ಮತ್ತು ಹೆಮ್ಮೆಯನ್ನು ಕಾಪಾಡಿಕೊಳ್ಳಲು ನಮಗೆಲ್ಲರಿಗೂ ಅವಕಾಶವನ್ನು ನೀಡುತ್ತದೆ. ಇದೇ ಮಂತ್ರವನ್ನು ನಾವೆಲ್ಲರೂ ಸಹ ಜಪಿಸುತ್ತಾ, ಸದಾ ನೆನಪಿನಲ್ಲಿ ಇಟ್ಟುಕೊಂಡು, ಚೆನ್ನಾಗಿ ಓದಿ, ಈ ದೇಶವನ್ನು ಇನ್ನಷ್ಟು ಅಭಿವೃದ್ಧಿಯತ್ತ ಸಾಗಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ದ್ವೀತಿಯ ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಾದ ದೊಡ್ಡಬಸಪ್ಪ ಕಾಡಪ್ಪನವರ ,ಅನುಷಾ ಭಜಂತ್ರಿ, ಮೃಗಯ್ಯ ಜಂಗರ ಮಹಾಂತೇಶ ವಾಲಿಕಾರ ಅವರಿಗೆ ಸನ್ಮಾನಿಸಲಾಯಿತು.
ಡಾ.ಅಂಬೇಡ್ಕರ ಮಹಾವಿದ್ಯಾಲಯದ ವ್ಯವಸ್ಥಾಪಕರಾದ ಬಸವರಾಜ ಚಿಗಣ್ಣನವರ ಮಾತನಾಡಿ ಪ್ರತಿವರ್ಷ ನಮ್ಮ ದೇಶದಲ್ಲಿ ಇದೊಂದು ಮಹತ್ವದ ಸಂದರ್ಭವಾಗಿದೆ. ಇನ್ನು ನವದೆಹಲಿಯ ಕರ್ತವ್ಯ ಪಥದಲ್ಲಿ ರಕ್ಷಣಾ ಪಡೆಗಳು ಅತ್ಯಂತ ಭವ್ಯವಾದ ಪರೇಡ್ ಮೆರವಣಿಗೆಯನ್ನು ನಡೆಸುತ್ತವೆ.ದೇಶದ ವಿವಿಧ ಸಂಸ್ಕöÈತಿಗಳ ಸ್ತಬ್ಧ ಚಿತ್ರಗಳನ್ನು ಪ್ರದರ್ಶನ ಮಾಡಲಾಗುತ್ತದೆ.
ಭಾರತದ ಸ್ವಾತಂತ್ರ÷್ಯಕ್ಕಾಗಿ ಹೋರಾಡಿದ ಮಹನೀಯರ ಗುಣಗಳನ್ನು ಇಂದಿನ ಯುವಜನರು ಅಳವಡಿಕೊಳ್ಳಬೇಕು,ಈ ದೇಶದಲ್ಲಿರು ಸಾರ್ವಜನಿಕ ಸಂಪತ್ತು ನಮ್ಮೆಲ್ಲರದು ಎನ್ನುವ ಭಾವನೆ ಮೂಡಿಬರಬೇಕು ಎಂದು ಹೇಳಿದರು
ಕಾಲೇಜಿನ ಪ್ರಾಚಾರ್ಯರಾದ ಮಲ್ಲೇಶ ಹೊಸಮನಿ ಮಾತನಾಡಿ ಸ್ವಾತಂತ್ರ÷್ಯ ದಿನಾಚರಣೆ ಬಂದಾಗ ಮಾತ್ರ ನಮಗೆ ದೇಶಾಭಿಮಾನ ಬಗ್ಗೆ ಯೋಚಿಸಬಾರದು ಪ್ರತಿ ನಿತ್ಯ ದೇಶದ ಇತಿಹಾಸವನ್ನು ತಿಳಿದುಕೊಂಡು ಇಂದಿನ
ತಾಂತ್ರಿಕ ಯುಗದಲ್ಲಿ ಸಬಲರಾಗ ಬೇಕು,ಯುವ ಜನತೆ ಕೌಶಲ್ಯಗಳನ್ನು ಹೊಂದಿ ದೇಶದ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಈರಮ್ಮ ಕುಂದಗೋಳ, ಶಣಮುಖ ಚಿಲಗೋಡ ,ಅಶ್ವಿನಿ ಹೊಸಪೇಟೆ, ಪ್ರೇಮಾ ಅಳಗವಾಡಿ ಸುಧಾ ಪೂಜಾ ರ್ಸೇರಿದಂತೆ ಕಾಲೇಜಿನ ಸಿಬ್ಬಂಧಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.