

ಗದಗ: ಬೆಟಗೇರಿ ಜರ್ಮನ್ ಆಸ್ಪತ್ರೆಯಿಂದ ಬೆಟಗೇರಿ ಮುಕ್ತಿಧಾಮ ಮಾರ್ಗವಾಗಿ ಬಳಗಾನೂರ ಗ್ರಾಮಕ್ಕೆ ಹೋಗುವ ರಸ್ತೆ ಮಳೆಯಿಂದಾಗಿ ಸಂರ್ಪೂಣ ಹಾಳಾಗಿದೆ. ಹಾಗಾಗಿ ಮುಕ್ತಿಧಾಮಕ್ಕೆ ಶವಸಂಸ್ಕಾರಕ್ಕಾಗಿ ತೆರಳುವುದಕ್ಕೆ ತೊಂದರೆ ಆಗುತ್ತಿದೆ ಎಂದು ರೈಲ್ವೆ ಹೋರಾಟ ಸಮಿತಿ ಗಣೇಶ ಸಿಂಗ್ ಬ್ಯಾಳಿ ತಿಳಿಸಿದ್ದಾರೆ.
2014 ರಲ್ಲಿ ಕರ್ನಾಟಕ ಸರ್ಕಾರ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ ಇಲಾಖೆ ಕಾರ್ಯ ನಿರ್ವಾಹಕ ಅಭಿಯಂತರರ ಯೋಜನಾ ವಿಭಾಗ ಈ ರಸ್ತೆ ಕಾಮಗಾರಿ ಮಾಡಲಾಗಿದೆ. ಈ ರಸ್ತೆಯು ಸಂರ್ಪೂಣ ಹಾಳಾಗಿದ್ದು ಶವ ಸಂಸ್ಕಾರಕ್ಕೆ ಹೋಗಿ ಬರುವವರಿಗೆ ವಿಶೇಷವಾಗಿ ಬಣ್ಣದ ನಗರದ ನಿವಾಸಿಗಳಿಗೆ ಹಾಗೂ ಆ ಭಾಗದಲ್ಲಿ ಸಂಚರಿಸುವ ಸಾರ್ವಜನಿಕರಿಗೆ, ವಾಹನಗಳಿಗೆ ತೀವ್ರವಾದ ತೊಂದರೆ ಉಂಟಾಗಿ ಯಾವುದೇ ಸಂದರ್ಭದಲ್ಲಿ ಅಘಾತಗಳು ಸಂಭವಿಸಿ ಪ್ರಾಣಾ ಹಾನಿ ಆಗುವ ಹೆಚ್ಚಿನ ಸಂಭವ ಇರುತ್ತದೆ. ತ್ತೀಚೆಗೆ ಆಗಿರುವ ಭಾರಿ ಮಳೆಯಿಂದ ಹಾಗೂ ಆಹಾರ ನಿಗಮದ ಉಗ್ರಾಣಕ್ಕೆ ಹೆಚ್ಚಾಗಿ ಲಾರಿಗಳು ಓಡಾಡುತ್ತಿರುವದರಿಂದ ರಸ್ತೆಯು ತಗ್ಗು ಗುಂಡಿಗಳಿಂದ ಕೂಡಿದೆ. ಸಂಬಂಧಪಟ್ಟ ಇಲಾಖೆಯವರು ರಸ್ತೆಯನ್ನು ತುರ್ತು ದುರಸ್ತಿಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಹಾಗೂ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು. ಇಲ್ಲವಬಾದರೆ ಒಂದೆರಡು ದಿನಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವದು. ಮನವಿಗೆ ಸ್ಪಂದಿಸದೇ ಇದ್ದರೆ ಉಗ್ರವಾದ ಹೋರಾಟ ಕೈಗೊಳ್ಳಲಾಗುವುದು ಎಂದು ಬೆಟಗೇರಿ ರೇಲ್ವೆ ಹೋರಾಟ ಸಮಿತಿ ಪರವಾಗಿ ಸಮಿತಿ ಅಧ್ಯ ಗಣೇಶಸಿಂಗ್ ಬ್ಯಾಳಿ ಆಗ್ರಹಿಸಿದ್ದಾರೆ.