ಮುಕ್ಕಣ್ಣೇಶ್ವರ ಮಠದಲ್ಲಿ ದೇವಿ ಪುರಾಣಮಂಗಲೋತ್ಸವ

03GDG06
Published on

ಗದಗ: ಸದ್ಗುರು ಮುಕ್ಕಣ್ಣೇಶ್ವರ ಮಠದಲ್ಲಿ ನವರಾತ್ರಿ ನಿಮಿತ್ತ ಪುರಾಣ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಸದ್ಗುರು ಶಂಕರಾನAದ ಸ್ವಾಮಿಗಳು ಸಾನಿಧ್ಯವಹಿಸಿ ಪುರಾಣ ಪ್ರವಚನಕಾರರಾಗಿ ಶರಣ ಶ್ರೀ ಮಲ್ಲೇಶಪ್ಪ ಅಣ್ಣಿಗೇರಿ ವಹಿಸಿದ್ದರು. ಉಪನ್ಯಾಸಕರಾಗಿ ಪಂಡಿತ ವಾಸುದೇವಾಚಾರ ಹೂಲಿ ಆಗಮಿಸಿದ್ದರು. ಸನ್ಮಾನಿತರಾಗಿ ಹನಮಂತರಡ್ಡಿ ಮಾಲಿಪಾಟೀಲ, ಶ್ರೀಕಾಂತ ಪವಾರ ಮತ್ತು ರಾಮಣ್ಣ ಕಬಾಡಿ ಆಗಮಿಸಿದ್ದರು.

ಸಾನಿಧ್ಯ ವಹಿಸಿದ್ದ ಶ್ರೀಗಳು ನಮ್ಮ ಮನಸ್ಸು ನೆಮ್ಮದಿಯಿಂದಲು ಪ್ರತಿಕ್ಷಣವೂ ಗುರುವಿನ ಸ್ಮರಣೆ, ಭಗವಂತನ ಧ್ಯಾನ ನಿರಂತರವಾಗಿ ಅಭ್ಯಾಸ ಮಾಡಬೇಕು, ಗುರುವಿನ ಆಶೀರ್ವಾದ ಪಡೆದುಕೊಂಡು ಗುರು ಕೊಟ್ಟ ಮಂತ್ರವನ್ನು ಸದಾ ಧ್ಯಾನಿಸುವದರಿಂದ ಜನನ ಮರಣವೆಂಬ ಭವಸಾಗರವನ್ನು ದಾಟಬಹುದು ಗುರು ಒಬ್ಬನೇ ದೇವರು ನಾವು ನಮ್ಮ ಸದ್ಗುರುವಿನಲ್ಲಿ ಅಚಲ ನಂಬಿಕೆ ಇಟ್ಟಿದ್ದಾದರೆ ಅವರು ನಮ್ಮ ಅದೃಷ್ಟ ಒಳ್ಳೆಯದಾಗಿ ಮಾರ್ಪಡಿಸುತ್ತಾರೆ. ನಿರ್ಮಿಲ ಚಿತ್ತದಿಂದ ನಿರಾಪೇಕ್ಷೆಯಿಂದ ಅವರ ಸೇವೆ ಮಾಡಿದ್ದಾದರೆ ಸಂಸಾರವೆAಬ ಬಂಧನದಿAದ ಮುಕ್ತವಾಗಬಹುದು. ನಾವು ಗುರುವನ್ನು ಅಂಬಿಗನನ್ನಾಗಿ ಮಾಡಿಕೊಂಡರೆ ನೋವು ದುಃಖವೆಂಬ ಸಮುದ್ರವನ್ನು ಸುಗಮವಾಗಿ ದಾಟಬಹುದು ಸದ್ಗುರುವು ಭಕ್ತರಿಂದ ನಿಶ್ಚಲ ಭಕ್ತಿಯನ್ನು ಅಪೇಕ್ಷಿಸುತ್ತಾರೆ. ಅವರು ಜ್ಞಾನ ಮತ್ತು ಅಪರಿವಿಮಿತವಾದ ಆನಂದವನ್ನು ನಮಗೆ ದೊರಕಿಸಿಕೊಡುತ್ತಾರೆ ಎಂದು ತಿಳಿಸಿದರು.

ನವರಾತ್ರಿಯ 10 ದಿನಗಳ ಪರ್ಯಂತ ಸೇವೆ ಮಾಡಿದವರಿಗೆ, ದಾನಿಗಳಿಗೆ ಧನ್ಯತಾ ಭಾವ ಅರ್ಪಿಸಿ ಸನ್ಮಾನಿಸಿ ಗೌರವಿಸಿದರು. ಸಕಲ ಭಕ್ತರಿಗೆ ಸದ್ಗುರುವಿನ ಕೃಪಾಶಿರ್ವಾದದಿಂದ ಜೀವನದುದ್ದಕ್ಕೂ ಸುಖ-ಶಾಂತಿ-ನೆಮ್ಮದಿ ಹಾಗೂ ಸದ್ಗತಿ ದೊರೆಯಲೆಂದು ಆಶೀರ್ವದಿಸಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ಪಂ. ವಾಸುದೇವಾಚಾರ್ಯ ಹೂಲಿಯವರು ಗುರುವಾಕ್ಯವೇ ಮಹಾಮಂತ್ರವು ಅವನ ಕೃಪೆಯೇ ಮುಕ್ತಿ ಸಾಧನವು ಭವವೆಂಬ ಸಾಗರವನ್ನು ದಾಟಲು ಗುರುವೇ ಒಂದು ಮಹಾ ಸೇತುವೆಯಂತೆ ಇರುವನು. ಗುರುವು ಭಕ್ತ ವಾತ್ಸಲ್ಯ ಪೂರ್ಣನು ಆತನು ಭಕ್ತಾನುಕಂಪಿಯು, ಭಕ್ತಾನುಗ್ರಕ್ಕಾಗಿ ನಿತ್ಯವೂ ಶ್ರಮಿಸುವವನು ತನ್ನಲ್ಲಿರುವ ಜ್ಞಾನಾಧಿ ಸರ್ವಸ್ವವನ್ನು ಶಿಷ್ಯನಿಗಾಗಿ ಧಾರೆಯೆರೆದು ತನ್ನಂತೆ ಮಾಡಿಬಿಡುವನು. ಭಾಗ್ಯವಂತ ಜನರಿಗೆ ಮಾತ್ರ ಗುರುವಿನ ಪ್ರಾಪ್ತಿಯುಂಟಾಗುವುದು ಎಂದು ಮಾರ್ಮಿಕವಾಗಿ ತಿಳಿಸಿದರು.

ಬಾಲ ಮಕ್ಕಳಿಂದ ನೃತ್ಯ, ಗಾಯನ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಡಾ. ನಾರಾಯಣ ಹಿರೇಕೊಳಚಿ ವಾಯಲಿನ್ ಇವರು ವಾಯಲಿನ ವಾದಕ ಪ್ರಸ್ತುತ ಪಡಿಸಿದರು. ಹಾರ್ಮೋನಿಯಂ ಶ್ರೀಕಾಂತ ಹೂಲಿ, ತಬಲಾಸಾಥ ಡಾ. ಎಚ್.ಬಿ. ಹೂಗಾರ ನೀಡಿದರು ಪ್ರಸಾದ ಸೇವೆಯನ್ನು ಬಸವರಡ್ಡಿ ವೆಂಕರಡ್ಡಿ ಜಗಾಪೂರ ಮತ್ತು ರೇವಣಸಿದ್ದಪ್ಪ ಎಫ್. ಹಾಳಕೇರಿ ವಹಿಸಿಕೊಂಡಿದ್ದರು. ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿ ಪುನೀತರಾದರು.

ಕಾರ್ಯಕ್ರಮದ ಆರಂಭದಲ್ಲಿ ಎಂ.ಎಸ್. ಸರ್ವಿ ಸ್ವಾಗತಿಸಿದರು. ಕೆ.ಬಿ. ಕೊಣ್ಣೂರ ನಿರೂಪಿಸಿದರು. ಎಸ್.ಕೆ. ಮಾಗುಂಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net