

ವಿಜಯವಾಣಿ ಸುದ್ದಿಜಾಲ ಗದಗ
ನಗರದ ಮುಕ್ಕಣ್ಣೇಶ್ವರ ಮಠದಲ್ಲಿ ಸದ್ಗುರು ಶರಣಾನಂದರ 30ನೇ ಪುಣ್ಯಾರಾಧನೆ ನಿಮಿತ್ಯ ಧರ್ಮಸಭೆ ಜರುಗಿತು.
ಸಾನ್ನಿಧ್ಯ ವಹಿಸಿ ಮಾತನಾಡಿದ ಶರಣಾನಂದ ಶ್ರೀಗಳು, ಭಕ್ತರ ಉದ್ದಾರಕ್ಕೆ ಮತ್ತು ಸಮಾಜದ ಏಳಿಗೆಗೆ ಮಠಾಧೀಶರು ತಮ್ಮ ಜೀವನವನ್ನು ಸರ್ಮಪಿಸಿಕೊಂಡಿರುತ್ತಾರೆ. ಧಾಮಿರ್ಕ ಕ್ಷೇತ್ರ ಏಳಿಗೆಯಿಂದ ಸಮಾಜದಲ್ಲಿ ಧರ್ಮ ನೆಲೆಯಾಗಿ ನಿಲ್ಲುತ್ತದೆ. ಸಾರ್ವಜನಿಕರು ಅದರ ಭಾಗವಾಗಿರುತ್ತಾರೆ ಎಂದು ಹೇಳಿದರು.
ಬಿ.ಎನ್. ಯರನಾಳ ಮಾತನಾಡಿ, ಮುಕ್ಕಣ್ಣೇಶ್ವರ ಮಠ ಸದಾ ಸಮಾಜ ಸೇವೆಗೆ ಆಧ್ಯತೆ ನೀಡಿರುತ್ತದೆ. ಭಕ್ತರಿಗೆ ಉದ್ದಾರ ಮಾಡುತ್ತಿದೆ. ಇವರ ಸೇವೆ ಶ್ಲಾನೀಯ ಹಾಗೂ ಅವಿಸ್ಮರಣೀಯ ಎಂದರು.
ವಾಸುದೇವ ಆಚಾರ ಹೂಲಿ, ಎಂ.ಸಿ. ಐಲಿ, ಶಂಕರ ಹಾನಗಲ್, ಜಿ. ಜಿ. ಕುಲಕಣಿರ್, ಕೆಶವರಾಮ ಕೊಳ್ಳಿ, ಎಸ್.ಎಸ್. ಪಾಟೀಲ, ನೀಲಕಂಠಪ್ಪ ಬುಟ್ಟಾ, ಮಲ್ಲೇಶಪ್ಪ ಅಣ್ಣಿಗೇರಿ ಇತರರು ಇದ್ದರು.