ಕಟ್ಟಡ ಕಾಮಿರ್ಕರ ಮಕ್ಕಳ ಅನುದಾನ ಕಡಿತ ಮಾಡಿದ ಕಾಂಗ್ರೆಸ್​ ಸರ್ಕಾರ: ಎಂ. ಎಂ. ಹಿರೇಮಠ

01GDG02
Published on

ವಿಜಯವಾಣಿ ಸುದ್ದಿಜಾಲ ಗದಗ

ಕಾಂಗ್ರೆಸ್​ ಸರ್ಕಾರ ಕಟ್ಟಡ ಕಾಮಿರ್ಕರ ಬಗ್ಗೆ ಪುಟಗಟ್ಟಲೆ ಜಾಹಿರಾತು ನೀಡಿ ಯಾವುದೇ ಯೋಜನೆಗಳನ್ನು ಕಟ್ಟಡ ಕಾಮಿರ್ಕರಿಗೆ ಜಾರಿ ಮಾಡಲಿಲ್ಲ. ಹಿಂದಿನ ಬಿಜೆಪಿ ಸರ್ಕಾರ ನೀಡಿದ ಕಾಮಿರ್ಕರ ಮಕ್ಕಳ ಅನುದಾನವನ್ನು ಕಡಿಮೆ ಮಾಡಿ ಈಗ ಕಾಮಿರ್ಕರ ಬಗ್ಗೆ ರಾಜ್ಯ ಸರ್ಕಾರ ಹಾಗು ಸಚಿವರು ಮೊಸಳೆ ಕಣ್ಣೀರು ಸುರುಸುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಎಂ. ಎಂ. ಹಿರೇಮಠ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಆ.21 2021 ರಂದು ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ಸಂದರ್ಭದಲ್ಲಿ ರಾಜ್ಯಪತ್ರ ಹೊರಡಿಸಿ ಕಟ್ಟಡ ಕಾಮಿರ್ಕರ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಪ್ರತಿ ವರ್ಷ ಸಹಾಯಧನವನ್ನು ನೀಡುತ್ತಿದ್ದರು. ಕಾಂಗ್ರೆಸ್​ ಸರ್ಕಾರ ಹಿಂದಿನ ಆದೇಶವನ್ನು ರದ್ದು ಮಾಡಿ ಕಟ್ಟಡ ಕಾಮಿರ್ಕರ ಮಕ್ಕಳಿಗೆ ಕೊಡುತ್ತಿದ್ದ ಅನುದಾನವನ್ನು ಕಡಿಮೆ ಮಾಡಿದೆ. ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಎಲ್​.ಕೆ.ಜಿ, ಯು.ಕೆ.ಜಿ ಕಟ್ಟಡ ಮಾಮಿರ್ಕರ ಮಕ್ಕಳಿಗೆ ಪ್ರತಿ ವರ್ಷ 5 ಸಾವಿರ ರೂ. ನೀಡುತ್ತಿದ್ದರು. ಈಗಿನ ಕಾಂಗ್ರೆಸ್​ ಸರ್ಕಾರ ಒಂದು ಪೈಸೆಯೂ ಸಹ ನೀಡುತ್ತಿಲ್ಲ. 1ನೇ ತರಗತಿಯಿಂದ 4ನೇ ತರಗತಿ ವರೆಗೆ 5 ಸಾವಿರ ರೂ, ದಿಂದ 1800 ರೂ. ಗೆ ಇಳಿಸಲಾಗಿದೆ. 5ನೇ ತರಗತಿಯಿಂದ 8ನೇ ತರಗತಿ ವರೆಗೆ 8 ಸಾವಿರದಿಂದ 2,400 ರೂ ಗೆ ಇಳಿಸಿದ್ದಾರೆ. 9, 10 ನೇ ತರಗತಿ ವರೆಗೆ ಬಿಜೆಪಿ ಸರ್ಕಾರ ನೀಡುತ್ತಿದ್ದ 12 ಸಾವಿರ ರೂ. ಗಳನ್ನು 3 ಸಾವಿರಕ್ಕೆ ಇಳಿಸಿದ್ದಾರೆ ಎಂದು ಎಂ. ಎಂ ಹಿರೇಮಠ ತಿಳಿಸಿದ್ದಾರೆ.

ಬಿಜೆಪಿ ಸರ್ಕಾರ ಕಟ್ಟಡ ಕಾಮಿರ್ಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೀಡುತ್ತಿದ್ದ ಸಹಾಯಧನವನ್ನು ಬಹಳಷ್ಟು ಕಡಿಮೆ ಮಾಡಿ ಅವರ ವಿದ್ಯಾಭ್ಯಾಸಕ್ಕೆ ತೊಂದರೆ ಮಾಡಲಾಗಿದೆ. ಕಾಂಗ್ರೆಸ್​ ಪದ ಶಾಸಕರು, ಸಚಿವರುಗಳು ಕಟ್ಟಡ ಕಾಮಿರ್ಕರ ಬಗ್ಗೆ ಪ್ರತಿ ವರ್ಷ ಮೇ 1 ರಂದು ಮೊಸಳೆ ಕಣ್ಣಿರನ್ನು ಸುರಿಸುವುದನ್ನು ಬಿಟ್ಟು ಹಿಂದೆ ಬೊಮ್ಮಾಯಿರವರು ಕೊಡುತ್ತಿದ್ದಂತ ವಾಷಿರ್ಕ, ಶೈಣಿಕ ಸಹಾಯಧನ ಮೊತ್ತವನ್ನು ಹೆಚ್ಚಿಗೆ ಮಾಡಿ ಕಟ್ಟಡ ಕಾಮಿರ್ಕರ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂದು ಬಿಜೆಪಿ ಜಿಲ್ಲಾ ವಕ್ತಾರ ಎಂ. ಎಂ. ಹಿರೇಮಠ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net