

ಗದಗ: ಹುಬ್ಬಳ್ಳಿಯಲ್ಲಿ 2022ರಲ್ಲಿ ನಡೆದ ಟನೆಯ ಪ್ರಕರಣವನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಲು ನಿರ್ಧರಿಸಿದ್ದು ಸರ್ಕಾರದ ನಾಚಿಕೆಗೇಡಿನ ತೀರ್ಮಾನ ಎಂದು ಬಿಜೆಪಿ ವಕ್ತಾರ ಎಂ. ಎಂ. ಹಿರೇಮಠ ಹೇಳಿದರು.
ಈ ಕುರಿತು ಪ್ರಕಟಣೆ ನೀಡಿರುವ ಅವರು, 2022 ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಟನೆಯು ಹೇಯ ಟನೆ ಆಗಿದೆ. ಈ ನಿರ್ಧಾರದಿಂದ ಸಮಾಜಕ್ಕೆ ಕೆಟ್ಟ ಸಂದೇಶ ನೀಡಿದಂತಾಗಿದೆ. ಪೋಲಿಸ್ ಠಾಣೆಗೆ ನುಗ್ಗಿ ಠಾಣೆಯನ್ನು ಜಕಮ್ಗೊಳಿಸಿದ ಪ್ರಕರಣ ಇದಾಗಿದೆ. ಪೋಲಿಸರ ಮೇಲೆ ಹಲ್ಲೆ ನಡೆಸಿದ್ದಾರೆ. ಪೋಲಿಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಸಾರ್ವಜನಿಕ ವಾಹನಗಳಿಗೆ ಬೆಂಕಿ ಹಚ್ಚಿ ಹಾನಿ ಮಾಡಿರುವ ಟನೆ ಇದಾಗಿದೆ. ಸರ್ಕಾರ ಪ್ರಕರಣ ವಾಪಾಸ ಪಡೆದ ಕಾರಣ ಸಮಾಜದಲ್ಲಿ ಕೆಟ್ಟ ವಾತಾವರಣ ನಿರ್ಮಾಣವಾಗಿದೆ. ಡಿ. ಕೆ. ಶಿವಕುಮಾರ ಅವರು ಪ್ರಕರಣದಲ್ಲಿ ಭಾಗಿಯಾದವರು ಅಮಾಯಕರು ಎಂದು ಹೇಳಿರುವದು ಖಂಡನೀಯ. ಹುಬ್ಬಳ್ಳಿ ಪ್ರಕರಣವನ್ನು ವಾಪಸ್ ಪಡೆದುಕೊಂಡಿದ್ದನ್ನು ರದ್ದುಪಡಿಸಿ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿದ್ದಾರೆ.