ಕಾಂಗ್ರೆಸ್ ಪಕ್ಷದಿಂದ ಮಾತ್ರ ಎಲ್ಲರ ಹಾಗೂ ಎಲ್ಲಾ ಸಮಾಜದ ಅಭಿವೃದ್ಧಿ ಸಾಧ್ಯ : ಎಂ ಕೆ ಲಮಾಣಿ

WhatsApp Image 2025-11-01 at 12.40.45 PM
Published on

ಗದಗ: ಕಾಂಗ್ರೆಸ್ ಪಕ್ಷದಿಂದ ಮಾತ್ರ ಎಲ್ಲರ ಹಾಗೂ ಎಲ್ಲಾ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ನೀಲುಬಾಯಿ ವಿವಿಧೋದ್ದೇಶಗಳ ಸೇವಾ ಸಂಸ್ಥೆ ಶಿರಹಟ್ಟಿ ಅಧ್ಯಕ್ಷರಾದ ಎಂ ಕೆ ಲಮಾಣಿಯವರು ಹೇಳಿದರು.

ಅವರು ಶಿರಹಟ್ಟಿ ಪಟ್ಟಣದ ಅಂಬೇಡ್ಕರ್ ನಗರದ ಯುವ ನೇತಾರ ಮುತ್ತು ಬಾವಿಮನಿ ಅವರನ್ನು ಕಾಂಗ್ರೆಸ್ ಪಕ್ಷದ ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರಾಜ್ಯ ಕಾರ್ಯಕಾರಿ ಮಂಡಳಿಯಲ್ಲಿ ಸ್ಥಾನ ಪಡೆದುಕೊಂಡ ಅವರನ್ನು ಸನ್ಮಾನಿಸಿ ಮಾತನಾಡಿದರು.

ಕರ್ನಾಟಕ ರಾಜ್ಯವನ್ನು ರಾಜ್ಯದ ಸರ್ವ ಜನಾಂಗದ ಅಭವೃದ್ಧಿಗಾಗಿ ಹಾಗೂ ಬಡವರ ಅಭಿವವೃದ್ಧಿಗಾಗಿ ಶ್ರಮಿಸುತ್ತಿರುವ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿ. ಕೆ ಶಿವಕುಮಾರ್ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಚ್ ಕೆ ಪಾಟೀಲ್ ಇವರುಗಳ ಸದಾ ಚಿಂತನೆಯಿAದ ಅಭಿವೃದ್ಧಿ ಹೊಂದುತ್ತಿರುವ ಕರ್ನಾಟಕ ರಾಜ್ಯ ಒಂದು ಮಾದರಿಯ ರಾಜ್ಯ ಆಗುತ್ತಿದೆ.

ರಾಜ್ಯದ ಜನತೆ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬಡಜನತೆ ಆರ್ಥಿಕವಾಗಿ ಮೇಲೆ ಬಂದಿದ್ದು, ರಾಜ್ಯದ ಬಡವರ ಬಡತನವನ್ನು ಬೇರು ಸಹಿತ ಕಿತ್ತು ಸುಖದ ಜೀವನಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷದಿಂದ ಮಾತ್ರ ಸರ್ವ ಜನಾಂಗ, ಸರ್ವ ಸಮಾಜದ ಅಭಿವೃದ್ದಿ ಸಾಧ್ಯ ಎಂದು ಶ್ರೀ ಎಂ ಕೆ ಲಮಾಣಿ ಹೇಳಿದರು. ಶ್ರೀಮತಿ ಸುಜಾತ ದೊಡ್ಡಮನಿ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮಾತನಾಡಿ ಕಾಂಗ್ರೆಸ್ ಪಕ್ಷ ಸರ್ವರಿಗೆ ಸಮಪಾಲು ಸಮಬಾಳು ತತ್ವದಡಿಯಲ್ಲಿ ಎಲ್ಲರಿಗೂ ಅವಕಾಶ ನೀಡುತ್ತದೆ ಎಂದರು ಹೇಳಿದರು.

ಶ್ರೀ ಎಚ್ ಡಿ ಮಾಗಡಿ ಮಾತನಾಡಿ ಯುವಕರಿಗೆ ಸ್ಥಾನಮಾನ ನೀಡಿದಾಗ ಪಕ್ಷಕ್ಕೆ ಹೆಚ್ಚು ಬಲ ಬರುತ್ತದೆ ಈಗ ಕಾಂಗ್ರೆಸ್ ಪಕ್ಷ ಸರ್ವರಿಗೆ ಸ್ಥಾನಮಾನ ನೀಡಿ ಗೌರವಿಸುವ ಪಕ್ಷವಾಗಿದೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿದ ಶ್ರೀ ಮುತ್ತು ಬಾವಿಮನಿ ಮಾತನಾಡಿ ಪಕ್ಷ ನೀಡಿರುವ ಜವಾಬ್ದಾರಿಯನ್ನು ಎಲ್ಲರೊಂದಿಗೆ ಪ್ರೀತಿ ಗೌರವದಿಂದ ನಡೆದುಕೊಂಡು ಪಕ್ಷಕ್ಕೆ ಹೆಚ್ಚು ಗೌರವ ಬರುವಂತೆ ನನ್ನ ಕಾರ್ಯವನ್ನು ನಿರ್ವಹಿಸುತ್ತೇನೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಮಂಜುನಾಥ ಗಂಟಿ, ಮಹಬೂಬ್‌ಸಾಬ್ ಲಕ್ಷ್ಮೇಶ್ವರ, ರವಿ ಗುಡಿಮನಿ ಅಂಬೇಡ್ಕರ್ ನಗರದ ಎಲ್ಲ ಯುವಕ ಮಿತ್ರರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಕಾರ್ಯಕ್ರಮವನ್ನು ಮಹಬೂಸಾಬ್ ಲಕ್ಷ್ಮೇಶ್ವರ ನಿರೂಪಿಸಿದರು ವಂದನೆಗಳನ್ನು ಉಡಚಪ್ಪ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net