ಬೆಳ್ಳಿ ಮೂರ್ತಿಯ ಮೆರವಣಿಗೆ

1728028851332
Published on

ಗದಗ: ನಗರದ ಸಂಭಾಪೂರ ರಸ್ತೆಯಲ್ಲಿರುವ ಕೇಶವ ಪಾರ್ಕನಲ್ಲಿರುವ  ಅಷ್ಟಭುಜ ಈಶ್ವರ ದೇವಸ್ಥಾನದ ಪ್ರಥಮ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಿರ್ಮಿಸಲಾಗಿರುವ ಬೆಳ್ಳಿ ಮೂರ್ತಿಯ ಮೆರವಣಿಗೆ ಶುಕ್ರವಾರ ಬೆಳಗ್ಗೆ ಜರುಗಿತು.

ವೀರೇಶ್ವರ ಪುಣ್ಯಾಶ್ರಮದಿಂದ ಪ್ರಾರಂಭವಾದ ಬೆಳ್ಳಿ ಮೂರ್ತಿಯ  ಮೆರವಣಿಗೆ ಅವಳಿ ನಗರದ ಪ್ರಮುಖ ಬೀದಿಗಳಲ್ಲಿ‌ ಸಂಚರಿಸಿ ದೇವಸ್ಥಾನ ತಲುಪಿತು. ಕೊಣ್ಣೂರಿನ ಮಹಿಳಾ ಡೊಳ್ಳು ತಂಡದೊಂದಿಗೆ ನಡೆದ ಮೆರವಣಿಗೆಯಲ್ಲಿ ಬಡಾವಣೆಯ ನಿವಾಸಿಗಳು ಪೂರ್ಣಕುಂಭ ಹೊತ್ತು ಮಹಿಳೆಯರು ಪಾಲ್ಗೊಂಡು ಗಮನ ಸೆಳೆದರು.

ಮೆರವಣಿಗೆಯಲ್ಲಿ ಓಣಿಯ ಅಧ್ಯಕ್ಷ ಅಂದಪ್ಪ ಬಿಂಗಿ, ಬಿ.ಎಸ್.ಹಿರೇಮಠ, ಎಸ್.ವೈ.ಕುಂಬಾರ, ಪ್ರಕಾಶ ಹಡಗಲಿ, ಅಶೋಕ ಪಾಟೀಲ, ಜಗದೀಶ ಹುಡೇದಮಠ, ಅಶೋಕ ಮಾನ್ವಿ, ಎಫ್.ಎಸ್.ಬೆಳವಟಗಿ, ನಾಗರಾಜ ಶಿರೂರ, ರಮೇಶ ಕುಂಬಾರ, ಮಾಹಾಂತೇಶ ಹುಬ್ಬಳ್ಳಿಮಠ, ಬಸಯ್ಯ ಇಟಗಿಮಠ, ಬಸಯ್ಯ ರುದ್ರಾಪೂರಮಠ, ಮಲ್ಲು ಪಾಟೀಲ, ಉಮೇಶ ಮುಳ್ಳಾಳ, ಲಿಂಗರಾಜ, ಬಸಯ್ಯ ಹೊಸಮನಿ, ಎಂ.ಸಿ.ಹಿರೇಮಠ, ಸೋಮಶೇಖರ ಶಿಗ್ಲಿಮಠ, ಗುರುಪ್ಪ ನಿಡಗುಂದಿ, ಭೂಸನೂರಮಠ, ಬಸಣ್ಣ ಕೊಟಗಿ, ವಿನಾಯಕ ಓಲೇಕಾರ, ಸತೀಶ ಹಡಗಲಿ, ಪರಶು ಹಬೀಬ ಹಾಗೂ ಓಣಿಯ ತಾಯಂದಿರು ಸಿದ್ದಗಂಗಾ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು. ನಂತರ ಮಧ್ಯಾಹ್ನ ವಿಶೇಷ ಅನ್ನ ಪ್ರಸಾದ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net