ಅರುಣೋದಯ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಗೆ

6
Published on

ಗದಗ: ನಗರದ ಅರುಣೋದಯ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಗೆ ಬ್ರಿಟನ್‌ದ ಸೇವಾ ಯು.ಕೆ ತಂಡ ಆಗಮಿಸಿ ಶಾಲೆಯ ಮತ್ತು ಮಕ್ಕಳ ಪ್ರಗತಿಯನ್ನು ಅವಲೋಕಿಸಿತು.
ಸೇವಾ ಯು.ಕೆ ದಿಂದ ನೀಡಿದ ಅನುದಾನವನ್ನು ಸಮರ್ಥವಾಗಿ ಸದ್ವಿನಿಯೋಗ ಮಾಡಿರುವದನ್ನು, ಶಾಲೆ ಮತ್ತು ಮಕ್ಕಳ ಪ್ರಗತಿಯನ್ನು ಸ್ವತಃ ಅವಲೋಕಿಸಿತು.
ತಂಡವು ವಿಶೇಷ ಅಗತ್ಯವುಳ್ಳ ಮಕ್ಕಳೊಂದಿಗೆ ಕೆಲ ಕಾಲ ಕಳೆದರು, ಮಕ್ಕಳು ಪ್ರಸ್ತುತಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಡಿಸಿದರಲ್ಲೆ ಮಕ್ಕಳೊಂದಿಗೆ ಮ್ಯೂಜಿಕಲ್ ಚೇರ್ ಆಟವಾಡಿ ಸಂಭ್ರಮಿಸಿದರು. ಆಡಳಿತ ಮಂಡಳಿ ಹಾಗೂ ಶಾಲಾ ಶಿಕ್ಷಕರೊಂದಿಗೆ ಚರ್ಚೆ ನಡೆಸಿದ ಅಗತ್ಯ ಮಾಹಿತಿ ಸಂಗ್ರಹಿಸಿದ ತಂಡವು ಅನುದಾನದ ಅಗತ್ಯವಿದ್ದರೆ ಯೋಜನೆ ಸಿದ್ಧಪಡಿಸಿ ಕಳುಹಿಸುವಂತೆ ಸೂಚಿಸಿತಲ್ಲದೆ ಶಾಲೆಯ ಅಭಿವೃದ್ಧಿ ಮಕ್ಕಳ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತು.
ಅರುಣೋದಯ ಆಡಳಿತ ಮಂಡಳಿತ ಮಂಡಳಿಯ ಅಧ್ಯಕ್ಷ ಟಿ.ಎಸ್.ಜಮಾದಾರ, ಉಪಾಧ್ಯಕ್ಷ ಲುಕ್ಕಣಸಾ ರಾಜೋಳಿ, ಕಾರ್ಯದರ್ಶಿ ಜಯರಾಜ ಮುಳಗುಂದ, ಕೋಶಾಧ್ಯಕ್ಷ ಜಿತೇಂದ್ರ ಶಹಾ, ಸದಸ್ಯರಾದ ಬಸವರಾಜ ನಾಗಲಾಪೂರ, ಉಮಾಕಾಂತಸಾ ಮೇರವಾಡೆ, ಲಲಿತ ಜೈನ್, ಪ್ರಕಾಶ ವೈಲಾಯ್, ಡಾ.ಉಮೇಶ ಹಾದಿ, ಬಸವರಾಜ ಪಟ್ಟಣಶೆಟ್ಟಿ, ಜಯಪ್ರಕಾಶ ಭಜಂತ್ರಿ, ವಿಶೇಷ ಆಹ್ವಾನಿತ ಸದಸ್ಯರಾದ ಸುಧೀರಸಿಂಹ ಘೋರ್ಪಡೆ ಹಾಗೂ ಶಾಲೆಯ ಮುಖ್ಯೋಪಾಧ್ಯಾಯ ಶಿಕ್ಷಕರು ಮತ್ತು ಸಿಬ್ಬಂದಿ ಸೇವಾ ಯು.ಕೆ ತಂಡವನ್ನು ಹೂಗುಚ್ಛ ನೀಡುವ ಮೂಲಕ ಬರಮಾಡಿಕೊಂಡರು.
ಸೇವಾ ಯು.ಕೆ ಮಾಜಿ ಚೇರಮನ್ ಭರತ್ ಒಡಕುಲ, ಹಾಲಿ ಕಾರ್ಯದರ್ಶಿ ನಿಲೇಶ್ ಸೋಳಂಕಿ, ಸೇವಾ ಯು.ಕೆ ಪ್ರತಿನಿಧಿ ಸುಭ್ರಮಣ್ಯ, ಸೇವಾ ಭಾರತಿ ಟ್ರಸ್ಟ್ನ ಪ್ರಾಂತ ಸಂಯೋಜಕರಾದ ಶಂಕರ ಗುಮಾಸ್ತೆ ತಂಡದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net