ಎಂ.ಬಿ.ಎಚ್. ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಹಿಳಾ ದಿನಾಚರಣೆ.

fe067446ca8240faba347186fd53194c
Published on
ಗದಗ: ನಗರದ ಶತಮಾನ ಪೂರೈಸಿದ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಶ್ರೀಮತಿ ಎಂ. ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯ ಹಾಗೂ ಭಾರತ ಸರಕಾರ ನೆಹರೂ ಯುವ ಕೇಂದ್ರ ಗದಗ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಅಂತರಾಷ್ಟೀಯ ಮಹಿಳಾ ದಿನಾಚರಣೆಯನ್ನು ಬಹಳ ಅದ್ದೂರಿಯಿಂದ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗದಗ ನಗರದ ಪೊಲೀಸ್ ಉಪನಿರೀಕ್ಷಕಿ (ಪಿಎಸ್ಐ) ಶ್ರೀಮತಿ ಶಕುಂತಲಾ ನಾಯಕ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಎಲ್ಲಾ ಪ್ರಶಿಕ್ಷಣಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಿದ್ಧರಾಗುವಂತೆ ಪ್ರೇರೇಪಿಸಿದರು ಮತ್ತು ಮಹಿಳೆಯರಿಗೆ ಯಾವುದೇ ಸಂದರ್ಭದಲ್ಲೂ ಅನ್ಯಾಯ ಅಥವಾ ಅಕ್ರಮ ಎದುರಾದರೆ, ತಕ್ಷಣವೇ ಕಾನೂನಿನ ಸಹಾಯವನ್ನು ಪಡೆಯಬೇಕು. ಮಹಿಳಾ ರಕ್ಷಣೆಗೆ ಸರ್ಕಾರ ಹಲವಾರು ಕಾನೂನುಗಳು ಹಾಗೂ ಸೇವೆಗಳನ್ನೊದಗಿಸಿದೆ. ನಾವು ಅವುಗಳ ಬಗ್ಗೆ ಅರಿವು ಹೊಂದಬೇಕು ಮತ್ತು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾಲಯದ ಪ್ರಾಚಾರ್ಯರಾದ ಡಾ. ಗಂಗೂಬಾಯಿ ಪವಾರ ರವರು ಎಲ್ಲಾ ಅತಿಥಿಗಳಿಗೆ ಮತ್ತು  ಪ್ರಶಿಕ್ಷಣಾರ್ಥಿಗಳಿಗೆ ಅಂತರಾಷ್ಟೀಯ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ಕೋರಿದರು ಮತ್ತು ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಗದಗ ನಗರದ ಪಿಎಸ್ಐ ಶ್ರೀಮತಿ ಶಕುಂತಲಾ ನಾಯಕ್ ಮತ್ತು ಇನ್ನೋರ್ವ ಅತಿಥಿಗಳಾದ ಶ್ರೀಮತಿ ಶೋಭಾ ಕೊಂಡಗೋಳಿ ರವರ ಸಾಧನೆ ಎಲ್ಲಾ ಪ್ರಶಿಕ್ಷಣಾರ್ಥಿಗಳಿಗೆ ಸ್ಪೂರ್ತಿದಾಯಕ ಎಂದರು. ಜೊತೆಗೆ ಹಲವಾರು ಮಹಿಳಾ ಸಾಧಕರನ್ನು ಸ್ಮರಿಸಿ ಅವರ ಸಾಧನೆಗಳನ್ನು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಗದಗ ನಗರದ ಪಿಎಸ್ಐ ಶ್ರೀಮತಿ ಶಕುಂತಲಾ ನಾಯಕ್ ಮತ್ತು ಇನ್ನೋರ್ವ ಅತಿಥಿಯಾದ ಮೇಕಪ್ ಎಕ್ಸ್ ಪರ್ಟ್  ಶ್ರೀಮತಿ ಶೋಭಾ ಕೊಂಡಗೋಳಿ ಅವರನ್ನು ಮಹಾವಿದ್ಯಾಲಯದ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನೆಹರೂ ಯುವ ಕೇಂದ್ರದ  ಸಂಯೋಜಕರಾದ ಶ್ರೀ ರವಿಕುಮಾರ ಹೊಂಬಾಳಿ ರವರು ಸರಕಾರ ನೀಡಿರುವ ಎಲ್ಲಾ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಯಾದ ರವಿಚಂದ್ರ ಮತ್ತು ಬಸವರಾಜ ಹಾಡನ್ನು ಹಾಡಿದರು, ವಿಜಯ ಲಮಾಣಿ ಸ್ವಾಗತಿಸಿದರು, ವಿಶ್ವಪ್ರಸಾದ ಮತ್ತು ಸುನೀಲಗೌಡ ಅತಿಥಿಗಳ ಪರಿಚಯ ಪರಿಚಯಿಸಿದರು. ಬಸವರಾಜ ಮತ್ತು ಆಫ್ರಿನ್ ರವರು ಮಹಿಳಾ ದಿನಾಚರಣೆಯ ಕುರಿತು ತಮ್ಮ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.   ದೀಪಕ್ ವಂದಿಸಿದರು, ಸುರೇಶ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು. ಮಹಾವಿದ್ಯಾಲಯದ ಸಮಸ್ತ ಉಪನ್ಯಾಸಕರು ಮತ್ತು  ವಿದ್ಯಾಲಯದ ಎಲ್ಲಾ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net