ದಂಡಪ್ಪ ಮಾನ್ವಿ ಹೆರಿಗೆ ಆಸ್ಪತ್ರೆಯಲ್ಲಿ  ವಿಶ್ವ ಸ್ತನ್ಯ ಪಾನ ದಿನಾಚರಣೆ

03GDG01 Govt Hospital
Published on

ಗದಗ: ತಾಯಿಯ ಎದೆಹಾಲು ಅಮೃತಕ್ಕೆ ಸಮಾನ ತಾಯಿಯ ಎದೆಹಾಲು ರೋಗ ನಿರೋದಕ ಶಕ್ತಿಯನ್ನು ಒಳಗೊಂಡಿದೆ ಎಂದು ಜಿಲ್ಲಾ ಆರ್‍ಸಿಹೆಚ್‍ಓ ಅಧಿಕಾರಿ ಡಾ. ಮೀನಾಕ್ಷೀ ಕೆ.ಎಸ್ ಹೇಳಿದರು.

ನಗರದ  ದಂಡಪ್ಪ ಮಾನ್ವಿ ಹೆರಿಗೆ ಆಸ್ಪತ್ರೆಯಲ್ಲಿ ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಐಎಪಿ   ಇವರ ಸಹಯೋಗದೊಂದಿಗೆ ಗರ್ಭೀಣಿ ಭಾಣಂತಿಯರಿಗೆ ಸ್ತನ್ಯ ಪಾನದ ಮಹತ್ವದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಯಿಯ ಎದೆಹಾಲು ಅಮೃತಕ್ಕೆ ಸಮಾನ ತಾಯಿಯ ಎದೆಹಾಲಿನಲ್ಲಿರುವ ರೋಗ ನಿರೋದಕ ಶಕ್ತಿಯು ಮಗುವಿನ ಸಂಪೂರ್ಣ ಬೆಳವಣಿಗೆಗೆ ಸಹಾಯಕಾರಿ,ಕಾಂಗರೂ ವಿಧಾನದವನ್ನು ಅನುಸರಿಸಿ ತಾಯಿ ಮಗುವನ್ನು ರಕ್ಷಣೆ ಮಾಡಬೇಕು ತಾಯಿಯ ಎದೆ ಹಾಲು ಮಗುವಿನ ಬೆಳವಣಿಗೆಗೆ ಹೆಚ್ಚು ಶಕ್ತಿದಾಯಕ ಮತ್ತು ಹೆಚ್ಚು ಪರಿಣಾಮಕಾರಿ  ಮತ್ತು ಪ್ರತಿಯೊಬ್ಬ ಹಾಲುಣಿಸುವ ತಾಯಂದಿರು ಮಗುವಿಗೆ ತನ್ನ ಮೊದಲನೆ ಹಾಲನ್ನು ಮಗುವಿಗೆ ಕುಡಿಸುತ್ತೇನೆ ಎಂದು ಮಾನಸಿಕವಾಗಿ ಸದೃಡರಾಗಿರಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸ್ತನ್ಯ ಪಾನವನ್ನು ಬೆಂಬಲಿಸುವ ಪ್ರತಿಜ್ಞಾ ವಿಧಿಯನ್ನು ಮಾಡಿಸಲಾಯಿತು

ಕಾರ್ಯಕ್ರಮದಲ್ಲಿ ಜಿಮ್ಸ ಚಿಕ್ಕ ಮಕ್ಕಳ ತಜ್ಞ ಡಾ. ಈರಣ್ಣ ಹಳೇಮನಿ, ಡಾ.ಪ್ರೀತ ಕೋನ, ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net