ಅಳತೆಗೆ ತಕ್ಕಂತೆ ನರೇಗಾ ಕೂಲಿ, ಪ್ರತಿ ದಿನದ ಹಾಜರಾತಿಯು ಮಹತ್ವದ್ದು.

03GDG01 MaNreGa
Published on

ಗದಗ: ತಾಲೂಕಿನ ಬಿಂಕದಕಟ್ಟಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ಸಾಮೂಹಿಕ ಬದು ನಿರ್ಮಾಣ ಕಾಮಗಾರಿಗೆ ಗದಗ ತಾ.ಪಂ ನ ಮಾನ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀ ಮಾಣಿಕರಾವ್ ಪಾಟೀಲ್ ಹಾಗೂ ಗದಗ ತಾಲೂಕಿನ ಸಹಾಯಕ ನಿರ್ದೇಶಕ ಕುಮಾರ್ ಪೂಜಾರ್ (ಗ್ರಾ.ಉ) ರವರು ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನೆಡೆಸಿ ಮಾತನಾಡಿದ ಅವರು ನರೇಗಾ ಯೋಜನೆಯ *ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತ್ರಿ/ಉದ್ಯೋಗ ಖಾತ್ರಿ ದುಡಿಮೆ ಖಾತ್ರಿ " ಎಂಬ ಅಭಿಯಾನದಡಿ ಏಪ್ರಿಲ್ 01 ರಿಂದ ಮೇ ಅಂತ್ಯದವರೆಗೆ ನರೇಗಾ ಯೋಜನೆಯಡಿ ನೋಂದಾಯಿತ ಕೂಲಿಕಾರರಿಗೆ ನಿರಂತರವಾಗಿ ಕೆಲಸ ನೀಡುವ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ನರೇಗಾ ಯೋಜನೆಯ ನಿಯಮಾನುಸಾರ ಕೂಲಿ ಕಾರ್ಮಿಕರು ಕೆಲಸ ನಿರ್ವಹಣೆ ಮಾಡಬೇಕು, ಹಾಜರಾತಿಯಲ್ಲಿ ಹೆಸರಿದ್ದು ಕೆಲಸಕ್ಕೆ ಹಾಜರಾಗದೆ ಇದ್ದರೆ ಅಂಥವರ 100 ದಿನದ ಹಾಜರಾತಿಯಲ್ಲಿ ಹಾಜರಾತಿ ಕಡಿತಗೊಳ್ಳುವದು ಹಾಗೂ ಕೆಲಸದ ಪ್ರಮಾಣಕ್ಕೆ ತಕ್ಕಂತೆ ಕೂಲಿ ಮೊತ್ತ ಪಾವತಿಸಲಾಗುವದು, ಗಂಡು ಮತ್ತು ಹೆಣ್ಣಿಗೆ ಸಮಾನ ಕೂಲಿ ನೀಡಲಾಗುವುದು ಎಂದು ತಿಳಿಸಿದರು.
2024 ರ ಲೋಕಸಭೆ ಚುನಾವಣೆಯ ಪ್ರಯುಕ್ತ ಕಾಮಗಾರಿ ಸ್ಥಳದಲ್ಲಿ ಹಾಜರಿದ್ದ ಕೂಲಿಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರತಿಯೊಬ್ಬ ಮತದಾರರು ಕೂಡ  ಮತದಾನ ಮಾಡುವುದು ಅವರ ಆದ್ಯ ಕರ್ತವ್ಯವಾಗಿರುತ್ತದೆ. 18 ವರ್ಷ ತುಂಬುವ ಯುವ ಮತದಾರರಿಗೆ ಗಿಊಂ ಂಠಿಠಿ ದಲ್ಲಿ ನೋಂದಾಯಿಸಿಕೊಂಡು ಮತದಾರರಾಗಲು ಕರೆ ನೀಡಿದರು. ಮತದಾನ ಪ್ರಕ್ರಿ0iÉುಯಿಂದ ಯಾವೊಬ್ಬ ವ್ಯಕ್ತಿಯು ಕೂಡ ಹೊರಗುಳಿಯಬಾರದು ಎಂದು ತಿಳಿಸಿದರು, ನಂತರ ಪಿ ಡಿ ಓ ಶ್ರೀಮತಿ ರೆಹಮತ್ ಬಾನು ರವರು ಹಾಜರಿದ್ದ ಕೂಲಿಕಾರರಿಗೆ ಮತದಾನ ಪ್ರತಿಜ್ಞಾ ವಿಧಿ ಭೋದಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿಗಳು, ತಾಲೂಕು ನರೇಗಾ ಸಿಬ್ಬಂದಿಗಳು, ನರೇಗಾ ನೋಂದಾಯಿತ ಕೂಲಿಕಾರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net