ಮನೋರಮಾ ಕಾಲೇಜಿನ ವಿದ್ಯಾರ್ಥಿ ಕಿರಣಕುಮಾರ ಕರಾಟೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

IMG-20240923-WA0013
Published on

ಗದಗ: ರಾಜ್ಯ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ (ಪದವಿಪೂರ್ವ ) ಗದಗ ಹಾಗೂ ಸೆಂಟರ್ ಫಾರ್ ಹ್ಯೂಮನ್ ಎಕ್ಸಲೆನ್ಸ್ ಸ್ವಾಮಿ ವಿವೇಕಾನಂದ ಪಿ ಯು ವಿಜ್ಞಾನ ಕಾಲೇಜ್ ಹುಲಕೋಟಿ ಇವರ ಸಂಯುಕ್ತಾಶ್ರಯದಲ್ಲಿ ಗದಗ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಅವಳಿ ನಗರವಾದ ಗದಗ ಬೆಟಗೇರಿಯ ಪ್ರತಿಷ್ಟಿತ ಮನೋರಮಾ ಕಾಲೇಜಿನಲ್ಲಿ ಪ್ರಥಮ ಪಿ ಯು ಸಿ ಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿ ಕಿರಣಕುಮಾರ ಜಿ ಕೊಟ್ಟೂರಶೆಟ್ಟರ್ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಯಶಸ್ವಿಯಾಗುವುದರ ಮೂಲಕ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾನೆ.

ಕ್ರೀಡಾ ಸ್ಪರ್ಧೆಯಲ್ಲಿ ಮಹಾವಿದ್ಯಾಲಯಕ್ಕೆ ಕೀರ್ತಿಯನ್ನು ತಂದ ವಿದ್ಯಾರ್ಥಿಯ ಸಾಧನೆಯನ್ನು ಸಂಸ್ಥೆಯ  ಚೇರಮನರಾದ ಏನ್ ಎಮ್ ಕುಡತರಕರ, ಮಹಾವಿದ್ಯಾಲಯದ ಪ್ರಾಚಾರ್ಯರಾದ ಬಿ ಎಸ್ ಹಿರೇಮಠ ಸಂಸ್ಥೆಯ ಕಾರ್ಯದರ್ಶಿಗಳಾದ ಮಂಜುನಾಥ ಕುಡತರಕರ ಆಡಳಿತಾಧಿಕಾರಿಗಳಾದ ಕಿಶೋರ್ ಮುದುಗಲ್ಲ ಸಂಸ್ಥೆಯ ನಿರ್ದೇಶಕರಾದ ಸಂಜಯ ಕುಡತರಕರ, ಚೇತನ್ ಕುಡತರಕರ, ಹಾಗೂ ಸಂಯೋಜಕರಾದ ಪ್ರೊಫೆಸರ್ ಶಾಹೀದಾ ಶಿರಹಟ್ಟಿ,ಹಾಗೂ ಬಿ ಸಿ ಎ ವಿಭಾಗದ ಸಂಯೋಜಕರಾದ ಸವಿತಾ ಪೂಜಾರ, ಬಿ ಕಾಮ್ ವಿಭಾಗದ ಸಂಯೋಜಕರಾದ ಅಲ್ಟಿನಾ ಡಿ, ಬಿ ಬಿ ಎ ವಿಭಾಗದ ಸಂಯೋಜಕರಾದ ಚೈತ್ರಾ ಡಿ, ದೈಹಿಕ ನಿರ್ದೇಶಕರಾದ ಖಯುಮ ಎಮ್ ನವಲೂರ ಆಫೀಸ್ ಸುಪರಿಡೆಂಟ್ ಉಮಾ ದಿನ್ನಿ ಹಾಗೂ ಸಮಸ್ತ ಆಡಳಿತ ವರ್ಗ ಮತ್ತು ಸಿಬ್ಬಂದಿಗಳು ಅಭಿನಂದನೆಯನ್ನು ವ್ಯಕ್ತಪಡಿಸಿರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net