

Gadag: ನಗರದ ಮನೋರಮಾ ಕಾಲೇಜಿನ ಬಿಸಿಎ, ಬಿಬಿಎ,ಬಿಕಾಂ ಪದವಿ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟ ಏರ್ಪಡಿಸಲಾಗಿತ್ತು.ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಖಜಾಂಚಿಗಳಾದ ಸಂಜಯ ಕುಡತರಕರ ರವರು ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿ ಮಾತನಾಡಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕ್ರೀಡೆಗಳು ಪ್ರಮುಖವಾಗಿವೆ. ಆತ್ಮವಿಶ್ವಾಸ ಹಾಗೂ ಉತ್ಸಾಹವನ್ನು ಹೆಚ್ಚಿಸುತ್ತದೆ ಎಂದರು.
ಪ್ರಾಚಾರ್ಯರಾದ ಬಿ.ಎಸ್. ಹೀರೆಮಠ ರವರು ಮಾತನಾಡಿ ಕ್ರೀಡೆಗಳು ಮನುಷ್ಯನ ಜೀವನದಲ್ಲಿ ಉತ್ಸಾಹ ತುಂಬುತ್ತವೆ. ಕ್ರೀಡೆಗಳು ಜೀವನದ ಅವಿಭಾಜ್ಯ ಅಂಗ ಆಟದಲ್ಲಿ ಸೋಲು ಗೆಲುವು ಸಹಜ ಪ್ರಾಮಾಣಿಕತೆಯಿಂದ ಸ್ನೇಹ ಜೀವಿಗಳಾಗಿ ಆಟ ಆಡಿ ದೈಹಿಕ ಹಾಗೂ ಮಾನಸಿಕವಾಗಿ ಸದೃಡರಾಗಿರಿ ಎಂದರು.
ಸಂಸ್ಥೆಯ ಆಡಳಿತಾದಿಕಾರಿಗಳಾದ ಕಿಶೋರ ಮುದಗಲ್ಲ ರವರು ಮಾತನಾಡಿ ವಿದ್ಯಾರ್ಥಿಗಳು ಕ್ರೀಡಾಮನೋಭಾವ ಬೆಳೆಸಿಕೊಳ್ಳಿ ಕ್ರೀಡೆಯಲ್ಲಿ ಸಾಧನೆಗೈದ ಸಾಧಕರ ಆದರ್ಶಗಳನ್ನು ಪಾಲಿಸಿ ಸಾಧನೆಯತ್ತ ಸಾಗಿರಿ ಎಂದರು. ಅಧ್ಯಕ್ಷತೆಯನ್ನು ಸಂಸ್ಥೆಯ ಚೆರಮನ್ನರಾದ ಎನ್. ಎಮ್. ಕುಡತರಕರ ವಹಿಸಿದ್ದರು. ಕಾಲೇಜಿನ ದೈಹಿಕ ನಿರ್ದೇಶಕರಾದ ಖಯೂಮ ನವಲೂರ ರವರ ನೇತೃತ್ವದಲ್ಲಿ ಗುಂಪು ಆಟಗಳಾದ ವಾಲಿಬಾಲ್ , ಥ್ರೋಬಾಲ್, ಕ್ರೀಕೆಟ್ ಕಬ್ಬಡ್ಡಿ ಹಾಗೂ 200ಮೀ., 400ಮೀ., 800ಮೀ., ಓಟ ಉದ್ದ ಜಿಗಿತ ಎತ್ತರ ಜಿಗಿತ ಆಟಗಳನ್ನು ಆಡಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಮಂಜುನಾಥ ಕುಡತರಕರ ನಿರ್ದೇಶಕರಾದ ಚೇತನ ಕುಡತರಕರ ಹಾಗೂ ಸಂಯೋಜಕರುಗಳಾದ ಪ್ರೋ.ಸವೀತಾ ಪೂಜಾರ ಪ್ರೋ.ಅಲ್ವೀನಾ ಡಿ. ಪ್ರೋ.ಚೈತ್ರಾ ಡಿ. ಪ್ರೋ. ಶಾಹೀದಾ ಶಿರಹಟ್ಟಿ ಹಾಗೂ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಸಕ್ರೀಯವಾಗಿ ಪಾಲ್ಗೋಂಡಿದ್ದರು.