ಜನ ಔಷಧಿ ಕೇಂದ್ರಗಳು ಬಡವರಿಗೆ ಸಂಜೀವಿನಿ: ಮಂಜುನಾಥ ಮುಳಗುಂದ

04GDG05
Published on

ವಿಜಯವಾಣಿ ಸುದ್ದಿಜಾಲ ಗದಗ

ಕೇಂದ್ರ ಸರ್ಕಾರದ ಅನುಮತಿಯ ಮೇರೆಗೆ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಲಾಗಿದೆ. ಹಿರಿಯ ನಾಗರಿಕರು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೋಳ್ಳಬೇಕು. ಈ ನಿಟ್ಟಿನಲ್ಲಿ ಜನ ಔಷಧಿ ಕೇಂದ್ರಗಳು ಬಡವರ ಪಾಲಿಗೆ ಸಂಜೀವಿನಿಯಾಗಿ ಕೆಲಸ ಮಾಡುತ್ತಿವೆ ಎಂದು ಜನ ಔಷಧಿ ಕೇಂದ್ರದ ಮಾಲಕರಾದ ಮಂಜುನಾಥ ಮುಳಗುಂದ ಹೇಳಿದರು.

ನಗರದ ಹುಯಿಲಗೋಳ ನಾರಾಯಣರಾವ್​ ವೃತ್ತದ ಬಳಿ ಇರುವ ಜನ ಔಷಧಿ ಕೇಂದ್ರದಲ್ಲಿ ಮಂಗಳವಾರ ಆಯೋಜನೆ ಏರ್ಪಡಿಸಿದ್ದ ಹಿರಿಯ ನಾಗರಿಕರ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಜನ ಔಷಧಿ ಕೇಂದ್ರದಲ್ಲಿ ಜನ ಸಾಮಾನ್ಯರ ಕೈಗೆಟುಕುವ ದರದಲ್ಲಿ ಔಷಧಿಗಳು ದೊರಕುತ್ತವೆ. ಕಳೆದ 10ವರ್ಷದ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನ ಔಷಧಿ ಕೇಂದ್ರ ಆರಂಭ ಮಾಡಿದರು. ಇದರಿಂದ ಬಡವರು ಹಾಗೂ ಮದ್ಯಮ ವರ್ಗದವರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ಹೇಳಿದರು.

ಕ್ಯಾನ್ಸರ್​, ಶುಗರ್​ ಸೇರಿದಂತೆ ಹಲವು ದೀರ್ಕಾಲದ ಕಾಯಿಲೆಗಳಿಗೆ ನಿರಂತರವಾಗಿ ಔಷಧಿ ಸೇವನೆ ಮಾಡುವುದು ಅನಿವಾರ್ಯ. ಇಂತಹ ಸಂದರ್ಭದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಜನ ಔಷಧಿ ಕೇಂದ್ರದಲ್ಲಿ ಮಾತ್ರೆಗಳು ಸಿಗುತ್ತಿರುವುದು ಸಂತೋಷದ ವಿಷಯ. ಸಾರ್ವಜನಿಕರು ಜನ ಔಷಧಿ ಕೇಂದ್ರದ ಸಂರ್ಪೂಣ ಉಪಯೋಗವನ್ನು ಪಡೆಯಬೇಕು. ಇದರಿಂದ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಆಥಿರ್ಕ ಹೊರೆಯನ್ನು ತಪ್ಪಿಸಬಹುದು ಎಂದು ಮಂಜುನಾಥ ಮುಳಗುಂದ ಹೇಳಿದರು.

ಉಚಿತ ಹಿರಿಯ ನಾಗರಿಕರ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ವೈದ್ಯ ಡಾ. ವಿ. ಎಸ್​. ಕಟ್ಟಿ ಮಾತನಾಡಿ, ಬಡ ವರ್ಗದವರಿಗೂ ಯೋಗ್ಯ ದರದಲ್ಲಿ ಔಷಧಿ ಸಿಗಲಿ ಎನ್ನುವ ಉದ್ದೇಶದಿಂದ ದೇಶಾದ್ಯಂತ ಈ ಕೇಂದ್ರಗಳನ್ನು ತೆರಿದಿದ್ದಾರೆ. ಇದರಿಂದ ಸಾಕಷ್ಟು ಬಡ ಜನರಿಗೆ ಅನುಕೂಲವಾಗಿದೆ. ಬಡ ಜನರು, ಮದ್ಯಮ ವರ್ಗದವರಿಗೆ ದೀರ್ಕಾಲದ ರೋಗ ಇರುತ್ತದೆ. ಆದರೆ, ಪ್ರತಿ ದಿನ ಮಾತ್ರೆಯನ್ನು ಕೊಂಡು ಸೇವಿಸುವುದು ಕಷ್ಟ ಸಾಧ್ಯವಾಗುತ್ತದೆ. ಜನ ಔಷಧಿ ಕೇಂದ್ರದಿಂದ ಅವರ ಸಮಸ್ಯೆ ಸಂರ್ಪೂಣ ಬಗೆಹರಿದಿವೆ ಎಂದರು.

ಸಿ. ಎಸ್​. ಹನುಮಂತಗೌಡ್ರ, ಪರಪ್ಪ ಕಮತರ, ಕಾತಿರ್ಕ ಮಾರನಬಸರಿ, ರೇಖಾ ತಳವಾರ, ವಿರುಪಾಪ್ಪ ಗಾಳಪ್ಪನವರ, ಅಲ್ಲಾಸಾಬ್​ ಗದುಗಿನ, ಸಕ್ಕುಬಾಯಿ ಬಾಗಲಕೋಟಿ, ನಿಂಗಮ್ಮ ಬೆಳಧಡಿ, ಪರಶುರಾಮ ನಿಲಗಾರ, ದಶರಥ ಮಿರಜಕರ, ಶಿವಪುತ್ರಪ್ಪ ಪಟ್ಟಣಶೆಟ್ಟಿ, ಕೃಷ್ಣಮೂತಿರ್ ಗುಡೂರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net