ಉಪನ್ಯಾಸಕ ಮನ್ಸೂರಲಿಖಾನ ಖಾಜಿ ವಿರುದ್ಧ ಕ್ರಮಕ್ಕೆ ದಲಿತ ಮಿತ್ರ ಮಂಡಳಿ ಸದಸ್ಯರ ಆಗ್ರಹ

10GDG07
Published on

ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲೆಯ ನರಗುಂದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಮನ್ಸೂರಲಿ ಖಾನ ಖಾಜಿ ಅವರು ಕೊಠಡಿಯಲ್ಲಿ ಪಾಠ ಮಾಡುವ ಸಂದರ್ಬದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್​.ಅಂಬೇಡ್ಕರ ಬಗ್ಗೆ ಕೀಳು ಭಾಷೆ ಪ್ರಯೋಗಿಸಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ಮಿತ್ರ ಮಂಡಳಿ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ದಲಿತ ಮಿತ್ರ ಮಂಡಳಿ ಅಧ್ಯ ಕುಮಾರ ನಡಗೇರಿ, ಸಂವಿಧಾನಕ್ಕೆ ಅಪಚಾರ ಎಸಗುವ, ಅವಹೇಳನ ಮಾಡುವ ಯಾವದೇ ವ್ಯಕ್ತಿಯ ಮೇಲೆ ಕ್ರಿಮಿನಲ್​ ಪ್ರಕರಣ,ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂಬ ನಿಯಮವಿದೆ. ಜಿಲ್ಲೆಯ ನರಗುಂದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಉಪನ್ಯಾಸಕ ಮನ್ಸೂರಲಿ ಖಾನ ಖಾಜಿ ಅಂಬೇಡ್ಕರ ಬಗ್ಗೆ ಅವಹೇಳನ ಪದ ಬಳಸಿದ್ದಾರೆ. ವಿದ್ಯಾಥಿರ್ಗಳಿಗೆ ಬೋಧನೆ ಮಾಡುವಾಗ ಅಂಬೇಡ್ಕರ ಉಪನ್ಯಾಸಕರು, ಶಿಕರು, ಗುಮಾಸ್ತು, ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳಿಗೆ ವಿದ್ಯಾರ್ಹತೆ, ವಯೋಮಿತಿ ನಿಗದಿಪಡಿಸಿದ್ದಾನೆ. ಆದರೆ ರಾಜಕೀಯ ವ್ಯಕ್ತಿಗಳಿಗೆ ಮಾತ್ರ ಯಾವದೇ ವಿದ್ಯಾರ್ಹತೆ, ವಯೋಮಿತಿ ನಿಗದಿಪಡಿಸಿಲ್ಲ.ರಾಜಕೀಯ ವ್ಯಕ್ತಿಗಳು, ಸಚಿವರು, ಶಾಸಕರ ಪಿಎ ಗಿರಿಗೆ ಎಂಎ, ಎಂಎಫಿಲ್​, ಡಾಕ್ಟರೇಟ್​ ಪಡೆದವರು ಅವರ ಮುಂದೆ ಕೈಕಟ್ಟಿ ನಿಲ್ಲಬೇಕಾಗಿದೆ. ಇದು ಸಂವಿಧಾನ ಶಿಲ್ಪಿಯೆಂದು ಜನರಲ್ಲಿ ಹೆಸರು ಪಡೆದಿರುವ ಅಂಬೇಡ್ಕರ ಮಾಡಿದ ಕಚಡಾ ಕೆಲಸವೆಂದು ಕೊಠಡಿಯಲ್ಲಿ ಹೇಳಿದ್ದಾರೆ. ಇದು ಸಂವಿಧಾನಕ್ಕೆ ಮಾಡಿರುವ ಅಪಚಾರವಾಗಿದೆ. ಹಾಗಾಗಿ, ಉಪನ್ಯಾಸಕ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವೆಂಕಟೇಶ ದೊಡ್ಡಮನಿ, ಹುಲಿಗೆಪ್ಪ ವಾಲ್ಮೀಕಿ, ಸದಾನಂದಸಿಂಗ್​ ಗುರ್ಲಹೊಸೂರ, ಕುಮಾರ ಕೋಟಿ, ಈರಣ್ಣ ಗಾಣಿಗೇರ, ಹನುಮಂತಪ್ಪ ಹುಣಸಿಮರದ, ಮುತ್ತು ಹುಣಸಿಮರದ, ಪುಂಡಲಿಕ ದಾಸರ, ಪುಟ್ಟರಾಜ ಕಳಸಣ್ಣವರ, ಆನಂದ ಗುಡಿಸಾಗರ, ಗಂಗಪ್ಪ ಬಿಜಾಪೂರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net