ಗದಗನಲ್ಲಿ ಬೃಹತ್​ ಕೈಗಾರಿಕೆ ಸ್ಥಾಪಿಸಲು ಮನವಿ

15GDG07
ಗದಗ ಜಿಲ್ಲೆಯಲ್ಲಿ ಬೃಹತ್​ ಕೈಗಾರಿಕೆ ಸ್ಥಾಪಿಸುವಂತೆ ವೆಂಕನಗೌಡ ಗೋವಿಂದಗೌಡರ ಅವರು ಕೇಂದ್ರ ಸಚಿವ ಎಚ್​.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
Published on

ಗದಗ: ಗದಗ ನಗರದಲ್ಲಿ ಬೃಹತ್​ ಕಯಗಾರಿಕೆ ಸ್ಥಾಪಿಸಿ ಇಲ್ಲಿನ ನಿರುದ್ಯೋಗ ಸಮಸ್ಯೆ ಹೋಗಲಾಡಿಸಬೇಕೆಮದು ಕೇಂದ್ರ ಉಕ್ಕು ಹಾಗೂ ಬಾರಿ ಕೈಗಾರಿಕಾ ಸಚಿವ ಎಚ್​. ಡಿ. ಕುಮಾರಸ್ವಾಮಿ ಅವರಿಗೆ ರಾಜ್ಯ ಜೆಡಿಎಸ್​ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ಶನಿವಾರ ಮನವಿ ಸಲ್ಲಿಸಿದರು.
ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಗೆ ರಾಜ್ಯಕ್ಕೆ ಆಗಮಿಸಿದ ಅವರನ್ನು ಬೆಂಗಳೂರು ನಗರದಲ್ಲಿ ಸನ್ಮಾನಿಸಿ, ಮನವಿ ಸಲ್ಲಿಸದ ಅವರು, ಗದಗ ಜಿಲ್ಲೆಯ ಅಭಿವೃದ್ಧಿಗೆ ಕೈಗಾರಿಕೆ ಸ್ಥಾಪನೆ ಅವಶ್ಯವಿದೆ. ಜಿಲ್ಲೆಯ ಯುವಕರು ಉದ್ಯೋಗ ಅರಸಿಕೊಂಡು ಬೇರೆ ಜಿಲ್ಲೆಗಳಿಗೆ, ರಾಜ್ಯಗಳಿಗೆ ಹೋಗುತ್ತಿದ್ದಾರೆ. ಮಕ್ಕಳಿಂದ ದೂರವಾದ ಪಾಲಕರು ಕೂಡ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಕೈಗಾರಿಕೆಗೆ ಅನುಕೂಲ ಆಗುವ ಎಲ್ಲ ಸಂಪನ್ಮೂಲಗಳು ಲಭ್ಯವಿದ್ದರೂ ಕೂಡ ಕೈಗಾರಿಕೆಗಳು ಇಲ್ಲದೇ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಹಿನ್ನಡೆ ಆಗಿದೆ. ಪವನ ವಿದ್ಯುತ್​ ಯಂತ್ರಗಳು ಹಾಗೂ ಸೌರಶಕ್ತಿ ವಿದ್ಯುತ್​ ಉತ್ಪಾದಕ ಸೋಲಾರ್​ ಪ್ಯಾನೆಲ್​ಗಳ ಅಳವಡಿಕೆ ಬಿಟ್ಟರೆ ಯಾವುದೇ ಉದ್ಯೋಗಗಳು ಗದಗಿಗೆ ಬಂದಿಲ್ಲ. ಹಾಗಾಗಿ ಗದಗ ಜಿಲ್ಲೆಯಲ್ಲಿ ಬೃಹತ್​ ಉದ್ಯಮವೊಂದನ್ನು ಸ್ಥಾಪಿಸಬೇಕು ಎಂದು ವೆಂಕನಗೌಡ ಗೋವಿಂದಗೌಡ್ರ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಸಚಿವರು ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವುದು ನನ್ನ ಗುರಿ. ಈ ಬಗ್ಗೆ ನಾನು ಗಮನಹರಿಸಿ ಕ್ರಮ ಕೈಕೊಳ್ಳುತ್ತೇನೆ. ಸ್ವಲ್ಪ ಕಾಲಾವಕಾಶ ಬೇಕು ಎಂದು ಭರವಸೆ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net