ಮಹಿಳಾ ಸಂಘಟನೆಗಳು ಆರ್ಥಿಕವಾಗಿ ಸಬಲರಾಗಬೇಕು : ಗುಡಿಮನಿ

11GDG07
Published on

ಗದಗ: ಮಹಿಳಾ ಸಂಘಟನೆಗಳು ಆರ್ಥಿಕವಾಗಿ ಸಬಲರಾಗಲು ಮಹಿಳೆಯರಿಗೆ ಪ್ರೇರೇಪಿಸಬೇಕು. ಪಂಚಮಸಾಲಿ ಸಮಾಜ ತಾಯಂದಿರರು ಸಮಾಜ ಸಂಘಟನೆಯೊದಿಗೆ ಆರ್ಥಿಕವಾಗಿ ಸದೃಢ ಹೊಂದಬೇಕೆದು ಗದಗ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಹೇಳಿದರು.

ಅವರು ಗದುಗಿನ ರಾಣಿಚೆನ್ನಮ್ಮ ಮಹಿಳಾ ಬಳಗದಿಂದ ಜರುಗಿದ ಮಾಸಿಕ ಸಭೆಯಲ್ಲಿ ಸನ್ಮಾನಗೊಂಡು ಮಾತನಾಡಿದರು. ಮನೆಯ ಆರ್ಥಿಕತೆಯ ಸುಧಾರಣೆಗಾಗಿ ಮಹಿಳೆಯರು ದುಡಿಮೆಗೆ ಮುಂದಾಗಬೇಕು. ಹಣವನ್ನು ಉಳಿತಾಯ ಮಾಡಿ ಅದನ್ನು ಸುರಕ್ಷೀತ ಬ್ಯಾಂಕುಗಳಲ್ಲಿ ಇರಿಸಿ ಅದರಿಂದ ಬರುವ ಲಾಭವನ್ನು ಉಪಯೋಗ ಮಾಡಿಕ್ಕೊಳ್ಳಬೇಕು ಎಂದರು.

ಸನ್ಮಾನಗೊಡು ಮಾತನಾಡಿದ ಚೇಂಬರ್ ಆಫ್ ಕಾಮರ್ಸನ ಪದಾಧಿಕಾರಿ ಅಶೋಕ ಸಂಕಣ್ಣವರ ಮಾತನಾಡಿ ಮಹಿಳೆಯರು ಸದೃಢ ಮನಸ್ಸಿನವರು ಹಾಗೂ ಅಚಲ ನಿರ್ಧಾರದವರು. ಇವರು ಮನಸ್ಸು ಮಾಡಿದ್ದಲ್ಲಿ ಕೆಲಸವನ್ನು ನಿಷ್ಠೆಯಿಂದ ಮಾಡಿ ಪೂರ್ತಿಗೊಳಿಸುವವರು. ಮಹಿಳಾ ಸಮುದಾಯವು ಆರ್ಥಿಕ ಉಳಿಕೆಗಾಗಿ ಶ್ರಮಿಸಬೇಕು ಎಂದರು.

ಇನ್ನೋರ್ವ ಅತಿಥಿ ಹಾಗೂ ಚೇಂಬರ್ ಆಫ್ ಕಾಮರ್ಸನ ಪದಾಧಿಕಾರಿ ಚೆನ್ನವೀರಪ್ಪ ಹುಣಸಿಕಟ್ಟಿ ಹಾಗೂ ಪ್ರಕಾಶ ಉಗಲಾಟದ ಮಾತನಾಡಿ ಪಂಚಮಸಾಲಿ ಮಹಿಳಾ ಸಮುದಾಯವು ಸಾಮಾನ್ಯವಾಗಿ ಕೃಷಿಯನ್ನೇ ಅವಲಂಭಿಸಿದ್ದು ಆದರೇ ಬದಲಾದ ಕಾಲಮಾನದಿಂದ ಮಹಿಳೆಯರು ಸಾಕಷ್ಟು ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದುವ ಮೂಲಕ ಆರ್ಥಿಕ ಸದೃಢತೆ ಹೊಂದುತ್ತಿದ್ದಾರೆ. ನಮ್ಮ ಸಮಾಜದವರು ಎಲ್ಲ ಕ್ಷೇತ್ರಗಳಲ್ಲಿಯೂ ಮುಂಚೂಣಿಗೆ ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಪ್ರಾಸ್ತಾವಿಕವಾಗಿ ಚೇಂಬರ್ ಆಫ್ ಕಾಮರ್ಸನ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಪಾಟೀಲ ಮಾತನಾಡಿ ಸಮಾಜದ ಮಹಿಳೆಯರ ಶ್ರೇಯೋಭಿವೃದ್ಧಿಗಾಗಿಯೇ ಈ ಸಂಘವನ್ನು ನಡೆಸುತ್ತಿದ್ದು, ಇಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸವಲತ್ತುಗಳನ್ನು ಸಹ ನೀಡಲಾಗುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಜಯಶ್ರೀ ಉಗಲಾಟದ ಮಾತನಾಡಿ ಮಹಿಳೆ ಆರ್ಥಿಕವಾಗಿ ಸಧೃಡವಾದಾಗ ಮಾತ್ರ ಎಲ್ಲವನ್ನು ನಿಭಾಯಿಸಬಲ್ಲಳು. ಕೂಡಿಟ್ಟ ಹಣವನ್ನು ಬೇರೇ ಕೆಲಸಗಳಿಗೆ ವಿನಿಯೋಗಿಸಿದಾಗ ಅದು ಸದ್ಭಳಕೆಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ರಾಣಿ ಚೆನ್ನಮ್ಮ ಸಂಘಟನೆಯಿAದ ಚೇಂಬರ್ ಆಫ್ ಕಾಮರ್ಸಿಗೆ ಪದಾಧಿಕಾರಿಗಳಾಗಿ ಆಯ್ಕೆಯಾದ ಪಂಚಮಸಾಲಿ ಸಮಾಜದ ಶರಣಬಸಪ್ಪ ಗುಡಿಮನಿ, ಅಶೋಕ ಸಂಕಣ್ಣವರ, ಚೆನ್ನವೀರಪ್ಪ ಹುಣಸೀಕಟ್ಟಿ, ಪ್ರಕಾಶ ಉಗಲಾಟದ ಇವರನ್ನು ಸನ್ಮಾನಿಸಿ ಗೌರವಿಸಿಲಾಯಿತು.

ಪ್ರಾರಂಭದಲ್ಲಿ ರೇಣುಕಾ ಅಮಾತ್ಯೆ ಮತ್ತು ಸುಜಾತಾ ಗುಡಿಮನಿ ಪ್ರಾರ್ಥಿಸಿದರು. ಕವಿತಾ ದಂಡಿನ ಸ್ವಾಗತಿಸಿದರು. ವಿದ್ಯಾ ಗಂಜಿಹಾಳ ನಿರ್ವಹಿಸಿದರು. ದೀಪಾ ಉಗಲಾಟ ನಿರೂಪಿಸಿದರು. ಕೊನೆಯಲ್ಲಿ ಸುಮಾ ಪಾಟೀಲ ವಂದಿಸಿದರು. ಕಾರ್ಯಕ್ರಮದಲ್ಲಿ ನೀಲಮ್ಮ ತೋಟದ, ಸುಶೀಲಾ ಸದಲಾಪೂರ, ಪುಷ್ಪಾ ವಾರದ, ಶಾರದಾ ಕರಮುಡಿ, ಅನ್ನಪೂರ್ಣ ಮಾಡಲಗೇರಿ, ಲಕ್ಷಿö್ಮÃ ಹಳ್ಳಿಕೇರಿ, ಸುಜಾತಾ ತಂಗೋಡಿ, ಗೀತಾ ಮಾವಿನಕಾಯಿ, ಈರಮ್ಮ ಮಾಡಲಗೇರಿ, ಗೀತಾ ಉಗಲಾಟದ, ಜ್ಯೋತಿ ಭಾವಿಕಟ್ಟಿ, ಮಂಜುಳಾ ತಂಗೋಡಿ, ವಿಜಯಲಕ್ಷಿö್ಮÃ ಇಳಕಲ್, ಅಕ್ಕಮ್ಮ ಗಡಾದ, ಮಾಲತಿ ಗೊಲ್ಲಪ್ಪನವರ, ಸುಮಂಗಲಾ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net