ಗದಗ: ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ಅತಿರುದ್ರ ಮಹಾಯಜ್ಞಕ್ಕೆ ಸರ್ವ ಸಮಾಜ ಬಾಂಧವರು ತನು-ಮನ-ಧನದಿಂದ ಸಹಾಯ ನೀಡಿ, ಮಹಾಯಜ್ಞ ಮಹತ್ಕಾರ್ಯದಲ್ಲಿ ಪಾಲ್ಗೊಂಡು ಭಗವಂತನ ಕೃಪೆಗೆ ಪಾತ್ರರಾಗಬೇಕಬೇಕೆಂದು ಎಸ್.ಎಸ್.ಕೆ. ಸಮಾಜ ಪಂಚ ಕಮೀಟಿಯ ಅಧ್ಯಕ್ಷ ಫಕೀರಸಾ ಬಾಬಾಸಾ ಭಾಂಡಗೆ ಹೇಳಿದರು.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ ಬೆಟಗೇರಿಯ ಕೌಶಲ್ಯಾಬಾಯಿ ಕಬಾಡಿ ಹಾಗೂ ಲೋಬೋಸಾ ಕಬಾಡಿ ಮನೆತನದವರು ಗದಗ ಎಸ್.ಎಸ್.ಕೆ. ಸಮಾಜದ ಪಂಚ ಕಮೀಟಿಗೆ ತಮ್ಮ ಆಸ್ತಿಯ ವ್ಯಾಜ್ಯ ಕುರಿತು ಯಾವುದೇ ರೀತಿಯ ಅರ್ಜಿಯನ್ನು ಸಲ್ಲಿಸಿರುವದಿಲ್ಲ, ಆದರೆ ನ.೩ ರಂದು ಅಖಿಲ ಭಾರತ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಈಶ್ವರಸಾ ಎಂ. ಮೇರವಾಡೆ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿ ಗದಗ ನಗರದಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗ ಹಾಗೂ ಕಿರಿಯ ಕುಂಭಮೇಳಕ್ಕೆ ಸಮಾಜ ಬಾಂಧವರು ಯಾವುದೇ ರೀತಿಯ ದೇಣಿಗೆಯನ್ನು ನೀಡಬಾರದು ಹೇಳಿದ್ದಾರೆ. ಆದರೆ ಈ ಹೇಳಿಕೆಗೆ ಎಸ್.ಎಸ್.ಕೆ. ಸಮಾಜ ಪಂಚ ಕಮೀಟಿಗೆ ಯಾವುದೇ ಸಂಬAಧ ಇರುವುದಿಲ್ಲ.
ಈಶ್ವರಸಾ ಎಂ. ಮೇರವಾಡೆ ಆಸ್ಕ್ ನ್ಯೂಜ್ ಚಾನಲ್ ಸಂದರ್ಶನದಲ್ಲಿ ಅತಿರುದ್ರ ಮಹಾಯಾಗ ನಡೆಯಲಿರುವ ಜಾಗೆಯು ನಮ್ಮ ಎಸ್.ಎಸ್.ಕೆ. ಸಮಾಜದ ಜಾಗೆ ಎಂದು ತಪ್ಪು ಸಂದೇಶವನ್ನು ಸಮಾಜ ಬಾಂಧವರಿಗೆ ರವಾನಿಸಿದ್ದಾರೆ. ಈ ಜಾಗೆಯು ನಮ್ಮ ಸಮಾಜಕ್ಕೆ ಸಂಬAಧಪಟ್ಟಿದ್ದಲ್ಲ ಇದು ವೈಯಕ್ತಿಕ ಆಸ್ತಿಯಾಗಿರುತ್ತದೆ. ಸಮಾಜ ಬಾಂಧವರು ಇವರ ಹೇಳಿಕೆಗೆ ಮಹತ್ವ ನೀಡಬಾರದೆಂದು ಎಸ್.ಎಸ್.ಕೆ. ಪಂಚ ಕಮೀಟಿ ಅಧ್ಯಕ್ಷ ಫಕೀರಸಾ ಬಾಬಾಸಾ ಭಾಂಡಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ ಎಸ್ ಕೆ ಪಂಚ ಕಮೀಟಿಯ ಉಪಾಧ್ಯಕ್ಷ ರಾಜು ವಾಯ್ ಬದಿ,ಎಸ್.ಎಸ್,ಕೆ ಸಮಾಜ ಪಂಚ ಕಮೀಟಿ ಗೌರವ ಕಾರ್ಯದರ್ಶಿ ವಿನೋದ ಆರ್. ಶಿಲ್ಲಿಂಗ,ಸಹಗೌರವ ಕಾರ್ಯದರ್ಶಿ ರವಿ ವಿ. ಶಿಲ್ಲಿಂಗ ಹಾಜರಿದ್ದರು.