ವಿಶ್ವದ ಮಹಾನ್ ಮಾನವತಾವಾದಿ  ಮಹಾತ್ಮ ಗಾಂಧೀಜಿ : ಹಿಡಿಕಿಮಠ

Published on
ಗದಗ: ವಿಶ್ವದ ಮಹಾನ್ ಮಾನವತಾವಾದಿ ಮಹಾತ್ಮ ಗಾಂಧೀಜಿಯಾಗಿದ್ದು ಅವರ ತತ್ವ ಆದರ್ಶಗಳು ಮನುಕುಲಕ್ಕೆ ದಾರಿ ದೀಪವಾಗಿವೆ ಎಂದು ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ ಗಂಗಾಧರ ಹಿಡಿಕಿಮಠ ಅವರು ಹೇಳಿದರು.
 ಡಾ ಪಿಜಿಎಎಸ ಸಮಿತಿಯ ಪಂಡಿತ್ ಪಂಚಾಕ್ಷರಿ ಗವಾಯಿಗಳವರ ಸಂಗೀತ ಮಹಾವಿದ್ಯಾಲಯ ಹಾಗೂ ಸಂಗೀತ ಸ್ನಾತಕೋತ್ತರ ಕೇಂದ್ರದಲ್ಲಿ  ಆಯೋಜಿಸಿದ್ದ ಮಹಾತ್ಮ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಾ ಮಹಾತ್ಮ ಗಾಂಧೀಜಿಯವರು ಯಾವಾಗಲೂ ತಾವು ಮಹಾತ್ಮ ಅಲ್ಲ  ಅಲ್ಪಾತ್ಮ ಎಂದು ತಮ್ಮನ್ನು    ತಾವು ಕರೆದು ಎಲ್ಲರೊಂದಿಗೆ  ಬೆರೆಯುತ್ತಿದ್ದರು ಅವರು ಬೋಧಿಸಿದ ಸಪ್ತ ಸಾಮಾಜಿಕ ಪಾತಕಗಳಾದ ತತ್ವ ರಹಿತ ರಾಜಕಾರಣ, ದುಡಿಮೆ ಇಲ್ಲದ ಸಂಪತ್ತು, ಆತ್ಮಸಾಕ್ಷಿ ಇಲ್ಲದ ಸಂತೋಷ, ಚರಿತ್ರೆ ಇಲ್ಲದ ಶಿಕ್ಷಣ, ನೀತಿ ಇಲ್ಲದ ವ್ಯಾಪಾರ, ಮಾನವೀಯತೆ   ಇಲ್ಲದ ಜ್ಞಾನ, ತ್ಯಾಗವಿಲ್ಲದ ಪೂಜೆ ಸಮಾಜವನ್ನು ಅದ ಪತನಕ್ಕೆ ಕಾರಣವಾಗುತ್ತದೆ ಎಂದು ಅವರು ಹೇಳಿದರು.
 ವೈಲಿನ್ ವಾದಕ ಡಾ ನಾರಾಯಣ್ ಹಿರೇಕೊಳಿಚಿ ಅವರು ಮಾತನಾಡಿ ಮಹಾತ್ಮ ಗಾಂಧೀಜಿ ಅವರು ಬ್ರಿಟಿಷರ ವಿರುದ್ಧ  ಜನಂದೋಲನ ಮಾಡಿ ಸ್ವತಂತ್ರವನ್ನು ಭಾರತಕ್ಕೆ ತಂದುಕೊಟ್ಟ ಧೀಮಂತ ನಾಯಕರಾಗಿದ್ದು ಅವರು ಸತ್ಯ ಶಾಂತಿ ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದರು ಎಂದು ಅವರು ಹೇಳಿದರು.
 ಸಮಾರಂಭದಲ್ಲಿ ಖ್ಯಾತ ಸಿತಾರವಾದಕ ರಾಜು ಹಿರೇಮಠ್, ವಾಯ್ ಆರ್  ಮೂಲಿಮನಿ, ವಿ ಕೆ ಜೋಶಿ, ಡಾ. ಕೊಡಗಾನೂರ ಹನುಮಂತ್, ಎಚ್ಎಫ್ ಓಲೆಕಾರ್ ವಿ ಎಂ ಪಟ್ಟದಕಲ್, ಬಿ ಎಚ್ ಜೋಕ್ ರೆಡ್ಡಿ, ಎಸ್ಎಸ್ ಗಡ್ಡದಮಠ ಉಪಸ್ಥರಿದ್ದು ಕೊನೆಗೆ ಡಾ. ಎನ್ ವಿ ಅಕ್ಕಸಾಲಿ  ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net