

Gadag: ಅಕ್ಟೋಬರ್ 20 ರಂದು ಭಾನುವಾರ ಬೆಳಗ್ಗೆ 9 ಕ್ಕೆ ಗದಗ ನಗರದ ಡಂಬಳ ನಾಕಾದಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಉತ್ಸವ ಕಮೀಟಿ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತೋತ್ಯವ ಆಚರಣೆ ನಡೆಯಲಿದೆ ಎಂದು ಉತ್ಸವ ಸಮಿತಿಯ ಗೌರವಾಧ್ಯಕ್ಷ ಅನಿಲ ಸಿದ್ಧಮ್ಮನಹಳ್ಳಿ ಹೇಳಿದರು.
ಅವರು ಶುಕ್ರವಾರ ಗದಗ ನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾರ್ಯಕ್ರಮವನ್ನು ಕಾನೂನು, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ನೆರವೇರಿಸುವರು. ಅಧ್ಯಕ್ಷತೆಯನ್ನು ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ರಾಜ್ಯಾಧ್ಯಕ್ಷ ಡಾ.ಟಿ.ಆರ್.ತುಳಸಿರಾಮ ವಹಿಸುವರು. ಜಿಲ್ಲಾ ವಾಲ್ಮೀಕಿ ನಾಯಕ ಸೇವಾ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬೆಳಧಡಿ ವಹಿಸುವರು. ಅತಿಥಿಗಳಾಗಿ ನರಗುಂದ ಶಾಸಕ ಸಿ.ಸಿ.ಪಾಟೀಲ, ವಿಪ ಸದಸ್ಯ ಎಸ್.ವಿ.ಸಂಕನೂರ ಆಗಗಮಿಸುವರು ಜಿಲ್ಲಾಧಿಕಾರಿ ಗೋವಿಂದರಡ್ಡಿ, ಎಸ್ಪಿ ಬಿ.ಎಸ್.ನೇಮಗೌಡ್ರ, ಎಡಿಸಿ ಅನ್ನಪೂರ್ಣ ಮುದಕಮ್ಮನವರ, ಅಬಕಾರಿ ಉಪ ಆಯುಕ್ತೆ ಲಕ್ಷ್ಮೀ ನಾಯಕ, ರಾಮಣ್ಣ ಫಲದೊಡ್ಡಿ, ದೇವೇಂದ್ರಪ್ಪ ತಳವಾರ, ಟಿ.ಈಶ್ವರ, ಡಿ.ಟಿ.ವಾಲ್ಮೀಕಿ, ನಗರಸಭೆ ಸದಸ್ಯರಾದ ನಾಗರಾಜ ತಳವಾರ, ಲಕ್ಷ್ಮಿ ಸಿದ್ಧಮ್ಮನಹಳ್ಳಿ, ಮಹೇಶ ರಂಗಣ್ಣವರ, ಎಸ್.ಎನ್.ಬಳ್ಳಾರಿ, ಜಗದೀಶ ಪೂಜಾರ ಮುಂತಾದವರು ಆಗಮಿಸುವರು.
ರಾಜೇಶ್ವರಿ ಕಲಾ ಕುಟೀರ ತಂಡದ ವತಿಯಿಂದ ವಿಶೇಷ ನೃತ್ಯ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದ ನಂತರ ಆರಂಭವಾಗುವ ಮೆರವಣಿಗೆ ಡಂಬಳನಾಕಾದಿಂದ ಗಂಗಾಪೂರ ಪೇಟೆ ಮೂಲಕ ದುರ್ಗಾದೇವಿ ದೇವಸ್ಥಾನದವರೆಗೆ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಗೋವಿಂದರಾಜ ಪನ್ನೂರ, ಪರಶುರಾಮ ಬೆಳದಡಿ, ಬಸವರಾಜ ಬೆಳದಡಿ, ಶಿವಾನಂದ ತಳವಾರ, ರಮೇಶ ಹೊಟ್ಟಿ, ವಿಜಯ ಕುರಗೋಡ ಮುಂತಾದವರು ಹಾಜರಿದ್ದರು.