ನಮ್ಮ ಹೆಮ್ಮೆಯ ಸೈನಿಕರಿಗೆ ಅಭಿನಂದನೆಗಳು : ಎಂ. ಎಂ.ಹಿರೇಮಠ

08GDG06
Published on

ಗದಗ: ಪೆಹಲಗಾಂನಲ್ಲಿ ನಡೆದ 26 ಪ್ರವಾಸಿಗರ ಹತ್ಯೆಗೆ ಕೇವಲ 15 ದಿನಗಳಲ್ಲಿ ಭಾರತ ಪ್ರತೀಕಾರ ತೀರಿಸಿಕೊಂಡಿದ್ದು ಆಪ್ರೇಷನ್ ಸಿಂಧೂರ್ ಎಂಬ ಹೆಸರಿನಲ್ಲಿ ಮಂಗಳವಾರ ತಡರಾತ್ರಿ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ ಪ್ರಮುಖ ಉಗ್ರರ 9 ತಾಣಗಳ ಮೇಲೆ ಕ್ಷಿಪಣಿ ದಾಳಿ ಮಾಡಿ 80 ಉಗ್ರರನ್ನ ದ್ವಂಸ ಮಾಡಿದ ನಮ್ಮ ಹೆಮ್ಮೆಯ ಸೈನಿಕರಿಗೆ ಜಿಲ್ಲಾ ಬಿಜೆಪಿ ವಕ್ತಾರರಾದ ಎಂ.ಎA.ಹಿರೇಮಠರವರು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿರುವರು.

ಪಾಕಿಸ್ತಾನವು ಊಹೆ ಮಾಡಿರದಂತ ರೀತಿಯಲ್ಲಿ ಬರೊಬ್ಬರಿ 24 ಕ್ಷೀಪಣಿಗಳನ್ನು ಬಳಸಿಕೊಂಡು ಕೇವಲ 25 ನಿಮಿಷಗಳಲ್ಲಿ ಪ್ರಚಂಡ ಅಗ್ನಿ ಮಳೆಯನ್ನ ಸುರಿಸಿ 80 ಕ್ಕೂ ಹೆಚ್ಚು ಉಗ್ರರನ್ನು ಹೊಡೆದುಳಿಸಿದ ದೇಶದ ಸೇನಾಪಡೆ, ನೌಕಾಪಡೆ ಮತ್ತು ವಾಯು ಪಡೆಗಳು ಜಂಟಿಯಾಗಿ ಕಾರ್ಯನಿರ್ವಹಿಸಿರುವರು ಹೆಮ್ಮೆಯ ಸಂಗತಿ. ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಪಾಕಿಸ್ತಾನದ ಮೇಲೆ ನಡೆಸಿದ 3ನೇ ದಾಳಿ ಇದಾಗಿದ್ದು ಈ ಹಿಂದೆ 2016 ರಲ್ಲಿ ಉರಿ ಹಾಗು 2019 ರಲ್ಲಿ ಬಾಲಾಕೊಟ್‌ನಲ್ಲಿ ಭಾರತೀಯ ಪಡೆಗಳು ಪಾಕ್ ನೆಲಕ್ಕೆ ನುಗ್ಗಿ ಉಗ್ರರನ್ನ ಹೊಡೆದುರುಳಿಸಿದ್ದವು. ಈ ಬಾರಿ ಭಾರತದ ವಾಯು ಪ್ರದೇಶದೊಳಗೆ ಇದ್ದುಕೊಂಡೇ ಕ್ಷಿಪಣಿಗಳು, ಬಾಂಬ್‌ಗಳ ಮೂಲಕ ಪಾಕ್‌ನ ಉಗ್ರ ನೆಲೆಗಳು ದ್ವಂಸಗೊಳಿಸಿರುವರು.

ಪೆಹಲಗಾಂ ದಾಳಿಕೋರರನ್ನು ಭೇಟಿಯಾಡಿಯೆ ತೀರುತ್ತೇನೆಂದು ನೊಂದ 26 ಸಂತ್ರಸ್ತರ ಕುಟುಂಬಗಳಿಗೆ ಕೊಟ್ಟಿದ್ದ ಮಾತನ್ನು ಪ್ರಧಾನಿ ಮೋದಿಯವರು ಉಳಿಸಿಕೊಂಡಿರುವರು. ಪಾಕ್ ಇನ್ನಾದರೂ ತನ್ನ ಹಟಮಾರಿ ದೋರಣೆಯನ್ನು ಬಿಟ್ಟು ಉಗ್ರವಾದವನ್ನು ಬಿಟ್ಟಲ್ಲಿ ಆ ದೇಶಕ್ಕೆ ಭವಿಷ್ಯವಿದೆ ಇಲ್ಲದ್ದಿದ್ದಲ್ಲಿ ಜಗತ್ತಿನ ಎಲ್ಲ ರಾಷ್ಟçಗಳು ಸೇರಿ ಪಾಕಿಸ್ತಾನವನ್ನು ಸೇರಿ ನಿರ್ಣಾಮ ಮಾಡಲಿದ್ದಾರೆ. ಈ ಕಾರ್ಯಾಚರಣೆಯನ್ನು ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥಸಿಂಗ್, ಗೃಹ ಸಚಿವ ಅಮೀತಶಾ, ಭದ್ರತಾ ಸಲಹೆಗಾರ ಅಜೀತ್ ದೊವಲ್ ಹಾಗು ಎಲ್ಲ ರಕ್ಷಣಾ ಅಧಿಕಾರಿಗಳಿಗೂ ಜಿಲ್ಲಾ ವಕ್ತಾರರಾದ ಎಂ.ಎA.ಹಿರೇಮಠ, ಸಹ ವಕ್ತಾರರಾದ ದತ್ತಣ್ಣ ಜೋಶಿ, ಮಾಧ್ಯಮ ಪ್ರಮುಖ ರಾಜು ಹೊಂಗಲ, ಸಹ ಪ್ರಮುಖ ಶ್ರೀನಿವಾಸ ಹುಬ್ಬಳ್ಳಿ, ಶಹರ ಅಧ್ಯಕ್ಷ ಸುರೇಶ ಮರಳಪ್ಪನವರ, ಗ್ರಾಮೀಣ ಅಧ್ಯಕ್ಷ ಬೂದಪ್ಪ ಹಳ್ಳಿ ಹೆಮ್ಮೆಯ ಸೈನಿಕರಿಗೆ ಅಭಿನಂದನೆಗಳನ್ನು ಸಲ್ಲಿಸಿರುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net