ಭ್ರಷ್ಟಾಚಾರ ಮುಕ್ತ ಗದಗ ಜಿಲ್ಲೆ ಮಾಡೋಣ: ಸಿ. ಎಸ್. ಶಿವನಗೌಡ್ರ

Lokayukata prog phot gadag chamber
Published on

Gadag: ನಮ್ಮ ದೇಶದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಅಭಿವೃದ್ಧಿಗೆ ಭ್ರಷ್ಟಾಚಾರವು ಒಂದು ಪರಮುಖ ಆಡಚಣೆಯಾಗಿದೆ, ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಸರ್ಕಾರ, ನಾಗರಿಕರು ಮತ್ತು ಖಾಸಗಿ ವಲಯದಂತಹ ಎಲ್ಲಾ ಪಾಲುದಾರರು ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ನಮ್ಮ ರಾಜ್ಯದಲ್ಲಿ ಎಲ್ಲರೂ ಭ್ರಷ್ಟರಲ್ಲಿ ಒಳ್ಳೆಯವರು ಇರುತ್ತಾರೆ. ಸರ್ಕಾರದಿಂದ ವೇತನ ಪಡೆಯುವಂತಹವರು ಕೆಲಸದಲ್ಲಿ ವಿಳಂಭ ಮಾಡಿದರೆ, ಕೆಲಸ ಮಾಡಿ ಕೊಡದೇ ಇರುವಂತಹ ಸಂದರ್ಭದಲ್ಲಿ ಮತ್ತು ಹಣಕ್ಕೆ ಬೇಡಿಕೆ ಇಟ್ಟಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರಿಗೆ ಫಾರ್ಮ ನಂ: 1 ಮತ್ತು 2 ಹಾಗೂ ಅಪಿಡೇವ್ಹಿಟ್ ಹಾಕಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ಸೂಕ್ತ ದಾಖಲೆಗಳು ಇರಬೇಕು ಜೊತೆಗೆ ಸಾಕ್ಷಿಗಳನ್ನು ಕೂಡಾ ಒದಗಿಸಬೇಕು. ಇದರಿಂದ ನ್ಯಾಯ ದೊರಕಿಸಲು ಸಾಧ್ಯವಾಗುತ್ತದೆ. ಜೊತೆಗೆ ಭ್ರಷ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ. ಮಹಿಳೆಯರಿಗೆ ಮತ್ತು ವೃದ್ದರಿಗೆ ಉಚಿತವಾಗಿ ನ್ಯಾಯಾಲದಲ್ಲಿ ವಕೀಲರ ಸೇವೆಯನ್ನು ಕೂಡಾ ಒದಗಿಸಲಾಗುತ್ತದೆ. ಲಂಚ ಕೊಡುವುದು ಎಷ್ಟು ತಪ್ಪು ಇರುತ್ತದೆ. ಅಷ್ಟೇ ತಪ್ಪು ಲಂಚ ತೆಗೆದುಕೊಳ್ಳುವುದು ಅಷ್ಟೇ ತಪ್ಪು ಗದಗ ಜಿಲ್ಲೆಯನ್ನು ಭ್ರಷ್ಟಾಚಾರ ಮುಕ್ತ ಜಿಲ್ಲೆಯಾಗಬೇಕು ಭ್ರಷ್ಟಾಚಾರದ ವಿರುದ್ಧ ಕಾನೂನು ಹೋರಾಟ ಮಾಡಿ ಅದಕ್ಕೆ ಎಲ್ಲ ವ್ಯವಸ್ಥೆ ಇರುತ್ತದೆ. ದೂರುದಾರರಿಗೆ ಕಾನೂನಿನಲ್ಲಿ ಭದ್ರತೆ ಕೂಡಾ ಇರುತ್ತದೆ. ಧೈರ್ಯದಿಂದ ಬದುಕಿ ನ್ಯಾಯಯುತವಾಗಿ ಬದುಕಿ ಎಂದು ಕರ್ನಾಟಕ ಲೋಕಾಯುಕ್ತ ಗದಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಗದಗ ಹಾಗೂ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಶ್ರೀ ಬನಪ್ಪ ಸಂಕಪ್ಪ ಸಂಕಣ್ಣವರ ಸಭಾ ಭವನದಲ್ಲಿ ಆಯೋಜಿಸಿದ ಭ್ರಷ್ಟಾಚಾರದ ವಿರುದ್ಧ “ಜಾಗೃತಿ ಅರಿವು ಸಪ್ತಾಹ-2025ರ ಉದ್ಘಾಟನೆಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಗದಗ ನ್ಯಾಯಾಧಿಶರಾದ ಶ್ರೀ ಸಿ.ಎಸ್. ಶಿವನಗೌಡ್ರ ಇವರು ಸಶಿಗೆ ನೀರು ಹಾಕುವ ಮೂಲಕ ಕರ‍್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಲೋಕಾಯುಕ್ತ ಪೊಲೀಸ ಠಾಣೆ, ಗದಗ ಮಾನ್ಯ ಅರಕ್ಷಕ ಉಪಾಧೀಕ್ಷಕರಾದ ಶ್ರೀ ವಿಜಯ ಬಿರಾದಾರ ಇವರು ಮಾತನಾಡುತ್ತಾ ಉತಾರ ಪಡೆಯುವ ಸಂದರ್ಭದಲ್ಲಿ ಇ-ಸ್ವತ್, ನಿವೃತ್ತ ಅಧಿಕಾರಿಗಳಿಗೆ ವೇತನ ಪಡೆಯುವಲ್ಲಿ, ಅಂಗಡಿ ಲೈಸನ್ಸ, ಇನ್ನು ಉದ್ಯಮಗಳ ಪರವಾನಿ (ಲೈಸನ್ಸ) ಮತ್ತು ಕಾರ್ಮಿಕ ಲೈಸನ್ಸ, ಇನ್ನೂ ಪರವಾನಿಗೆಗಳು ಮತ್ತು ಇತರೆ ಅವಶ್ಯಕತೆಗೆ ಇರುವಂತಹ ಕಾಗದ ಪತ್ರಗಳನ್ನು ಪಡೆಯುವಲ್ಲಿ ತಾವು ಮೊದಲು ಸಕಾಲದಲ್ಲಿ ಇಲಾಖೆ ಅರ್ಜಿ ಸಲ್ಲಿಸಬೇಕು. (ನಿಗದಿತ ದಿನಾಂಕದೊಳಗೆ) ಅವಧಿ ಮೀರಿದಲ್ಲಿ ಪುನಃ 2ನೇ ಅರ್ಜಿಯನ್ನು ಕೂಡಾ ಸಕಾಲದಲ್ಲಿ ಸಲ್ಲಿಸಿ ಅವರಿಂದ ಸ್ವೀಕೃತಿ ಪಡೆದುಕೊಂಡು ಅವರಿಂದ ದಾಖಲೆಗಳನ್ನು ಸಕಾಲದಲ್ಲಿ ಒದಗಿಸದೇ ಇರುವಂತಹ ಸಂದರ್ಭದಲ್ಲಿ ಒಂದು ವಾರದ ನಂತರ ಲೋಕಾಯುಕ್ತ ಕಚೇರಿಗೆ ದೂರುಗಳನ್ನು ಸಲ್ಲಿಸಬೇಕು. 2011ರಲ್ಲಿ ಕೆ. ಜಿ.ಎಸ್. ಕಾನೂನು ಜಾರಿಗೆ ಬಂದಿರುತ್ತದೆ. 1000ಕ್ಕೂ ಹೆಚ್ಚು ಕೆಲಸವನ್ನು ಇಷ್ಟೇ ದಿನದಲ್ಲಿ ಕೆಲಸವಾಗಬೇಕೆಂದು ಕಾನೂನು ಇರುತ್ತದೆ. ದೂರುಗಳನ್ನು ದಾಖಲೆ ಮಾಡಲು ಯಾವುದೇ ರೀತಿಯಿಂದ ಭಯಪಡುವಂತಹ ಅವಶ್ಯಕತೆ ಇರುವುದಿಲ್ಲ. ತಾವು ನೀಡುವಂತಹ ದೂರುಗಳನ್ನು ಗೌಪತ್ಯೆಯನ್ನು ಕಾಪಾಡಲಾಗುತ್ತದೆ. ಒಂದು ವೇಳೆ ತಮ್ಮ ಸಂಘಟನೆಯ ಮುಖಾಂತರ ಕೂಡಾ ದೂರಗಳನ್ನು ಸಲ್ಲಿಸಬಹುದು ಮತ್ತು ಅಂತಹ ಅಧಿಕಾರಿಗಳಿಗೆ ಸೂಕ್ತ ಕಾನೂನು ಪ್ರಕಾರ ಶಿಕ್ಷೆಯಾಗುತ್ತದೆ. ಜೊತೆಗೆ ದೂರುದಾರರಿಗೆ ಖಂಡಿತವಾಗಿ ನ್ಯಾಯ ದೊರಕುತ್ತದೆ ಎಂದು ತಿಳಿಸಿದರು.

ದೇಶದಲ್ಲಿ ಸಾಕಷ್ಟು ತಂತ್ರಜ್ಞಾನ ಬೆಳೆದಂತೆ ಜೀವನಮಟ್ಟ ಕೂಡಾ ಸುಧಾರಣೆಯಾಗಿದೆ. ಆದರೆ ದೇಶದಲ್ಲಿ ಭ್ರಷ್ಟಾಚಾರ ಎಂಬುವದು ಸಂಪೂರ್ಣವಾಗಿ ನಾಶವಾಗಬೇಕು. ಯಾವುದೇ ಇಲಾಖೆಯಲ್ಲಿ ಕೆಲಸ ಆಗದೇ ಇರುವಂತಹ ಸಂದರ್ಭದಲ್ಲಿ ಮತ್ತು ತಮ್ಮನ್ನು ಸತಾಯಿಸಿದಲ್ಲಿ ಹಾಗೂ ತಮ್ಮಲ್ಲಿ ಹಣಕ್ಕೆ ಬೇಡಿಕೆ ಇಟ್ಟಲ್ಲಿ ಅಂತಹ ಸಂದರ್ಭದಲ್ಲಿ ತಾವು ಲೋಕಾಯುಕ್ತ ಕಚೇರಿಗೆ ದೂರಗಳನ್ನು ಸಲ್ಲಿಸಬೇಕು ಅದೂ ಕೂಡಾ ಸೂಕ್ತ ದಾಖಲೆಯೊಂದಿಗೆ , ನಾವು ಕೂಡಾ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯವರು ಕೂಡಾ ಬೆಂಬಲವಾಗಿರುತ್ತವೆ. ಮತ್ತು ಗದಗ ಜಿಲ್ಲೆಯಲ್ಲಿ ಭ್ರಷ್ಟಾಚಾರ ನಾವು ನೀವು ಕೂಡಾ ನಿರ್ಮೂಲನೆ ಮಾಡೋಣವೆಂದು ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶರಣಬಸಪ್ಪ ಸಂಗಪ್ಪ ಗುಡಿಮನಿ ಇವರು ಸಭೇಯನ್ನು ಉದ್ದೇಶಿಸಿ ಮಾತನಾಡಿದರು.

ಕರ‍್ಯಕ್ರಮ ನಿರೂಪಣೆಯನ್ನು ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶ್ರೀ ಚನ್ನವೀರಪ್ಪ ಪ್ರಭಣ್ಣ ಹುಣಸಿಕಟ್ಟಿ ಇವರು ಮಾಡಿದರು. ಕೊನೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಜಯದೇವ ಎಂ. ಮೆಣಸಗಿ ಇವರ ವಂದನಾರ್ಪಣೆಯೊAದಿಗೆ ಸಭೆಯು ಮುಕ್ತಯವಾಯಿತು. ಈ ಸಭೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು, ಮಾಜಿ ಅಧ್ಯಕ್ಷರು ಹಾಗೂ ಗದಗ ಬೆಟಗೇರಿ ಅವಳಿ ನಗರದ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಮಹಿಳಾ ಸಂಘಟನೆಯ ಸದಸ್ಯರು ಪಾಲ್ಗೊಂಡಿದ್ದರೆAದು ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶ್ರೀ ಚನ್ನವೀರಪ್ಪ ಪ್ರಭಣ್ಣ ಹುಣಸಿಕಟ್ಟಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net