

ಗದಗ: ಉಪಲೋಕಾಯುಕ್ತ ಕೆ.ಎನ್. ಫಣೀಂದ್ರ ಅವರು ರವಿವಾರ ನಗರದ ಜಿಲ್ಲಾ ಆಸ್ಪತ್ರೆಗೆ ಅನೀರಿಕ್ಷಿತವಾಗಿ ದಿಡೀರ್ ಭೇಟಿ ನೀಡುವ ಮೂಲಕ ವ್ಯವಸ್ಥೆಯನ್ನು ಪರಿಶೀಲಿನೆ ನಡೆಸಿದರು.
ಸಾಮಾನ್ಯ ಮಹಿಳೆಯರ ಹಾಗೂ ಪುರುಷರ ವಾರ್ಡಗೆ ಭೇಟಿ ನೀಡಿ ಒಳರೋಗಿಗಳನ್ನು ಉಪಲೋಕಾಯುಕ್ತರು ಆರೋಗ್ಯ ವಿಚಾರಿಸಿದರು ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಹಾಗೂ ಔಷದಿ ಪಡೆಯಲು ಆಸ್ಪತ್ರೆ ನೌಕರರು ಹಣ ಪಡೆಯುತ್ತಾರೆಯೇ ಎಂದುದನ್ನು ಚಿಕಿತ್ಸೆಗೆ ದಾಖಲಾದ ಒಳರೋಗಿಗಳನ್ನು ವಿಚಾರಿಸಿದರು.
ಆಸ್ಪತ್ರೆಯ ಪ್ರತಿ ಹಂತದ ವಾರ್ಡಗಳಲ್ಲಿಯೂ ಇರುವ ರೋಗಿ ಮತ್ತು ಅವರ ಸಂಬಂಧಿಕರ ಆರೋಗ್ಯ ವಿಚಾರಿಸುತ್ತ, ಆಸ್ಪತ್ರೆ ಉತ್ತಮ ಚಿಕಿತ್ಸೆ ಒದಗಿಸುತ್ತಿರುವ ಬಗ್ಗೆ ಮಾಹಿತಿ ಶೇಖರಿಸಿದರು. ಈ ವೇಳೆ ಚಿಕಿತ್ಸೆಗೆ ಆಗಮಿಸಿದ ರೋಗಿಯ ಸಂಬಂಧಿಕನೊಬ್ಬ ಮಾತನಾಡಿ ಆಸ್ಪತ್ರೆಗೆ ದಾಖಲಾಗಲು ಆಗಮಿಸುವ ರೋಗಿಗಳು ಮೇಲ್ಮಹಡಿಗೆ ಆಗಮಿಸಲು ಸಮಸ್ಯೆಯಾಗುತ್ತಿದೆ ಈಗಿರುವ ವೀಲ್ ಚೇರ್ ಗಳ ಸಂಖ್ಯೆ ಕಡಿಮೆಯಿದ್ದು ಜಿಲ್ಲಾ ಆಸ್ಪತ್ರೆಗೆ ಆಗಮಿಸುವ ರೋಗಿಗಳ ಸಂಖ್ಯೆ ಅಧಿಕವಾಗಿದ್ದು ವೀಲ್ ಚೇರ್ ಗಳ ಸಂಖ್ಯೆಗಳನ್ನು ಜಾಸ್ತಿ ಮಾಡಲು ಮನವಿ ಮಾಡಿದರು
ಇದಕ್ಕೆ ಪ್ರತಿಕ್ರಿಯಿಸಿದ ಉಪಲೋಕಾಯುಕ್ತ ಕೆ.ಎನ್. ಫಣಿಂದ್ರ ಅವರು ತಕ್ಷಣ ಆಸ್ಪತ್ರೆಯ ಮುಖ್ಯಸ್ಥರು ರೋಗಿಗಳಿಗೆ ಮೆಲ್ಮಹಡಿಗೆ ತೆರಳಲು ಸೂಕ್ತ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಿದರು.
ಲೋಕಾಯುಕ್ತ ತಂಡದ ಇನ್ನಿತರ ಸದ್ಯಸರು ಜಿಲ್ಲಾ ಆಸ್ಪತ್ರೆ ಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿಯ ಕುರಿತು ಉಪಲೋಕಾಯುಕ್ತರಿಗೆ ವರದಿ ನೀಡಿದರು, ಅವರ ವರದಿ ಆಧಾರದ ಮೇಲೆ ಜಿಮ್ಸ ನಿರ್ದೇಶಕ ಬಸವರಾಜ್ ಬೋಮ್ಮನಹಳ್ಳಿ ಅವರಿಗೆ ಆಸ್ಪತ್ರೆಯ ಮೆಡಿಕಲ್ ವೆಸ್ಟ ನಿರ್ವಹಣೆಯನ್ನು ಸರಿಯಾಗಿ ನಿರ್ವಹಿಸಬೇಕು. ವಾರ್ಡವಾರು ಕಸ ನಿರ್ವಹಣೆ ಹಾಗೂ ಮೆಡಿಕಲ್ ವೆಸ್ಟ ನ್ನು ಪ್ರತೇಕವಾಗಿ ವಿಲೇವಾರಿ ಮಾಡಲು ನಿರ್ದೇಶಿಸಿದರು.
ಆಸ್ಪತ್ರೆಯ ಕೆಲವು ಶೌಚಾಲಯಗಳ ನಿರ್ವಹಣೆ ಕಳಪೆಯಾಗಿದ್ದು ಸರಿಯಾಗಿ ನಿರ್ವಹಿಸಬೇಕು ಹಾಗೂ ಇಡಿ ಜಿಲ್ಲಾ ಆಸ್ಪತ್ರೆಯ ಸ್ವಚ್ಛತೆ ಹಾಗೂ ಉತ್ತಮ ಚಿಕಿತ್ಸೆಗೆ ಆದ್ಯತೆ ವಹಿಸಬೇಕು ಎಂದು ತಿಳಿಸಿದರು.
ಕರ್ನಾಟಕ ಲೋಕಾಯುಕ್ತ ಸಂಪನ್ಮೂಲ ಅಧಿಕಾರಿ ಪ್ರಕಾಶ ಎಲ್ ನಾಡಗೇರ, ಕರ್ನಾಟಕ ಲೋಕಾಯುಕ್ತ ಉಪನಿಬಂಧಕರಾದ ಅಮರನಾರಾಯಣ ಕೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡರ, ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ ಪಿ.ಎಂ.ಪಾಟೀಲ, ಕರ್ನಾಟಕ ಲೋಕಾಯುಕ್ತ ಗದಗ ಕಚೇರಿಯ ಪೊಲೀಸ ಅಧೀಕ್ಷಕ ಸತೀಶ ಚಿಟಗುಬ್ಬಿ , ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಉಪವಿಭಾಗಾಧಿಕಾರಿ ಡಾ. ವೆಂಕಟೇಶ ನಾಯ್ಕ, ಡಿ.ಎಚ್.ಒ ಡಾ. ಎಸ್.ಎಸ್. ನೀಲಗುಂದ ಉಪಸ್ಥಿತರಿದ್ದರು.