ನನ್ನ ಶಾಲೆ ನನ್ನ ಕೊಡುಗೆ ಕಾರ್ಯಕ್ರಮದಲ್ಲಿ ಟೈಬೆಲ್ಟ್ ವಿತರಣೆ

09GDG08
Published on

ಶಿಸ್ತು ನಮ್ಮ ಜೀವನ ಶೈಲಿಯನ್ನು ಪ್ರತಿಬಿಂಬಿಸುತ್ತದೆ: ವೇರ್ಣೆಕರ

ವಿಜಯವಾಣಿ ಸುದ್ದಿಜಾಲ ಗದಗ

ವಿದ್ಯಾರ್ಥಿಗಳು ಶಿಸ್ತನ್ನು ರೂಢೀಸಿಕೊಳ್ಳಬೇಕು. ಇದರಿಂದ ಪ್ರತಿದಿನದ ಶೈಕ್ಷಣಿಕ ಹಾಗೂ ಬದುಕಿನ ಎಲ್ಲ ಕಾರ್ಯಗಳನ್ನು ಯಶಸ್ವಿ ಹಾಗೂ ಕ್ರಿಯಾಶೀಲತೆಯಿಂದ ನಿರ್ವಹಿಸಲು ಸಾಧ್ಯವಾಗುತ್ತದೆ. ಶಿಸ್ತು ನಮ್ಮ ಜೀವನ ಶೈಲಿಯನ್ನು ಪ್ರತಿಬಿಂಬಿಸುತ್ತದೆ. ವಿದ್ಯಾರ್ಥಿಗಳು ಮುಖ್ಯವಾಗಿ ಶಿಸ್ತನ್ನು ಅಳವಡಿಕೊಳ್ಳಬೇಕು ಲಯನ್ಸ್ ಕ್ಲಬ್ ಅಧ್ಯಕ್ಷ ರಾಜು ವೇರ್ಣೆಕರ ಹೇಳಿದರು.

ನಗರದ ಲಯನ್ಸ್ ಕ್ಲಬ್‌ದಿಂದ ಸರ್ಕಾರಿ ಶಾಲೆ ನಂ. 1 ರಲ್ಲಿ ಬುಧವಾರ ಏರ್ಪಡಿಸಿದ್ದ `ನನ್ನ ಶಾಲೆ ನನ್ನ ಕೊಡುಗೆ' ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಟೈಬೆಲ್ಟಗಳನ್ನು ವಿತರಿಸಿ ಮಾತನಾಡಿ, ಸರ್ಕಾರವು ಸರ್ಕಾರಿ ಶಾಲಾ ಮಕ್ಕಳಿಗಾಗಿ ನೀಡುವ ಹಲವು ಸೌಲಭ್ಯಗಳೊಂದಿಗೆ ಸೇವಾ ಮನೋಭಾವದಿಂದ ಹಲವು ಮಹಿನೀಯರು ಕೊಡುಗೆ ನೀಡುತ್ತಿದ್ದಾರೆ. ಅದರಲ್ಲಿ ವೈ. ಆರ್. ಪಾಟೀಲ ಅವರು ತಮ್ಮ ಮೊಮ್ಮಗಳಾದ ಯುಕ್ತಿ ರವಿರಾಜ ಪಾಟೀಲ ಅವರ ಹೆಸರಿನಲ್ಲಿ ಸರ್ಕಾರಿ ಶಾಲೆ ನಂ. 1 ಹಾಗೂ ಶಾಳೆ 11 ರ ಶಾಲಾ ವಿದ್ಯಾರ್ಥಿಗಳಿಗೆ ಟೈಬೆಲ್ಟಗಳನ್ನು ಕೊಡುಗೆಯಾಗಿ ನೀಡಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಿದ್ದಾರೆ. ದಾನಿಗಳು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.

ಲಯನ್ಸ್ ಕ್ಲಬ್ ಕಾರ್ಯದರ್ಶಿ ರಾಜಣ್ಣ ಮಲ್ಲಾಡದ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ಓದಿನಲ್ಲಿ ಆಸಕ್ತಿ, ಯಶಸ್ವಿಯ ಓದು ರೂಢೀಸಿಕೊಂಡರೆ ಯಶಸ್ಸು ಸಾಧ್ಯ ಎಂದರು.

ಲಯನ್ಸ್ ಕ್ಲಬ್‌ನ ಖಜಾಂಚಿ ರೇಣುಕಪ್ರಸಾದ ಹಿರೇಮಠ ಮಾತನಾಡಿ, ಮಕ್ಕಳು ಮೌಲ್ಯಾಧಾರಿತ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳಸಿಕೊಂಡು ಉತ್ತಮ ವಿದ್ಯಾರ್ಥಿಗಳಾಗಬೇಕು. ಪ್ರತಿದಿನ ತಪ್ಪದೆ ಶಾಲೆಗೆ ಬರುವುದು ಶಿಸ್ತು ರೂಢೀಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿ ಮೀನಾಕ್ಷಿ ಕೊರವಣ್ಣವರ ಮಾತನಾಡಿ, ಸರ್ಕಾರಿ ಶಾಲೆಗಳ ಮಕ್ಕಳಲ್ಲಿರುವ ಆತ್ಮೀಯತೆ ಅಮೋಘವಾಗಿದೆ. ಕೆಲವೊಂದು ಸೌಲಭ್ಯಗಳು ಮಕ್ಕಳಿಗೆ ಇರಲಿಕ್ಕಿಲ್ಲ. ಅದಕ್ಕಾಗಿ ಸಂಘ ಸಂಸ್ಥೆಗಳು ಸರ್ಕಾರಿ ಶಾಲೆಗಳಿಗೆ ಆಗಮಿಸಿ ಮಕ್ಕಳಿಗೆ ಶೈಕ್ಷಣಿಕ ಪ್ರಗತಿಗೆ ಪ್ರೇರಣೆ ನೀಡಬೇಕು ಎಂದರು.

ಪ್ರಾಸ್ತಾವಿಕವಾಗಿ ಲಯನ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷ ರಮೇಶ ಶಿಗ್ಲಿ ಮಾತನಾಡಿ ಸರ್ಕಾರಿ ಶಾಲೆಗಳಿಗೆ ಸರ್ಕಾರದ ಉಚಿತ ಸೌಲಭ್ಯಗಳೊಂದಿಗೆ ದಾನಿಗಳ ಸಹಾಯ ಸಹಕಾರ ಅತ್ಯವಶ್ಯವಾಗಿದೆ. ಪ್ರತಿಯೊಬ್ಬರೂ ಸಹಾಯ ನೀಡಬೇಕು ಎಂದರು.

ಪೂಜಾ ಪಾಟೀಲ, ಭಾರತಿ ಕುಲಕರ್ಣಿ, ವಿಜಯಲಕ್ಷಿ÷್ಮ ಜಕರಡ್ಡಿ, ಎಫ್. ಎಸ್. ಹಿರೇಮಠ, ವಿಜಯಲಕ್ಷಿ÷್ಮ ಕುಂಠೋಜಿ, ಕವಿತಾ ಬೇಲೇರಿ, ಶೋಭಾ ವಗ್ಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net