

ಲಕ್ಷೆ್ಮೕಶ್ವರ: ಪಟ್ಟಣದಲ್ಲಿ ಟ್ರ್ಯಾಕ್ಟರ್ಗಳಿಗೆ ಸೌಂಡ್ ಬಾಕ್ಸ್ ಅಳವಡಿಸಿಕೊಂಡು ಜೋರಾಗಿ ಹಾಡುಗಳನ್ನು ಕೇಳುತ್ತ ಸಂಚರಿಸುತ್ತಿದ್ದ ಟ್ರ್ಯಾಕ್ಟರ್ಗಳ ಸೌಂಡ್ ಬಾಕ್ಸ್ಗಳನ್ನು ಪೊಲೀಸರು ಸೋಮವಾರ ವಿವಿಧೆಡೆ ವಶಕ್ಕೆ ಪಡೆದರು. ಪಟ್ಟಣದ ಶಿಗ್ಲಿ ನಾಕಾ, ಸವಣೂರ ರಸ್ತೆ, ಗದಗ ನಾಕಾ ಹುಬ್ಬಳ್ಳಿ ರಸ್ತೆ ಸೇರಿದಂತೆ ಇತರೆ ಕಡೆಗಳಲ್ಲಿ ಸ್ಪೇಷಲ್ ಡ್ರೈವ್ ಮಾಡಿ ಟ್ರ್ಯಾಕ್ಟರ್ಗಳಿಗೆ ಅಳವಡಿಸಿದ್ದ ಸೌಂಡ್ ಬಾಕ್ಸ್ಗಳನ್ನು ವಶಕ್ಕೆ ಪಡೆದುಕೊಳ್ಳುವ ಕಾರ್ಯವನ್ನು ಇಲಾಖೆ ಮಾಡಿತು. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ, ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್ಐ ನಾಗರಾಜ ಗಡದ ಹಾಗೂ ಕ್ರೈಂ ವಿಭಾಗದ ಪಿಎಸ್ಐ ಟಿ.ಕೆ. ರಾಥೋಡ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಸೌಂಡ್ ಬಾಕ್ಸ್ಗಳನ್ನು ವಶಕ್ಕೆ ಪಡೆದು 11 ಐಎಂವಿ ಪ್ರಕರಣ ದಾಖಲಿಸಲಾಗಿದೆ. ಟ್ರ್ಯಾಕ್ಟರ್ಗಳಲ್ಲಿ ಜೋರಾಗಿ ಹಾಡು ಹಾಕುತ್ತ ಸಾಗುವುದು, ರಸ್ತೆ ಪಕ್ಕದಲ್ಲಿ ಗಾಡಿ ನಿಲ್ಲಿಸಿ ಹಾಡುಗಳನ್ನು ಹಾಕಿ ಶಬ್ಧ ಮಾಲಿನ್ಯಕ್ಕೆ ಕಾರಣವಾಗಿದ್ದರು. ಈ ಹಿನ್ನಲೆಯಲ್ಲಿ ಅದನ್ನು ನಿಯಂತ್ರಿಸುವಂತೆ ಇತ್ತಿಚೇಗೆ ಕೆಲವು ಸಂಘಟನೆಗಳು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದರು. ಹೀಗಾಗಿ, ಪೊಲೀಸರು ಕಾರ್ಯಾಚರಣೆ ನಡೆಸಲಾಗಿದೆ ಎಮದು ಸಿಪಿಐ ನಾಗರಾಜ ಮಾಡಳ್ಳಿ ಹಾಗೂ ಪಿಎಸ್ಐ ನಾಗರಾಜ ಗಡದ ತಿಳಿಸಿದರು.